News Kannada
Tuesday, March 21 2023

ಉಡುಪಿ

ಕಾರ್ಕಳದಲ್ಲಿ ಮೈಸೂರು ರೇಸ್ ಕುದುರೆಯ ಆಕರ್ಷಣೆ

Mysore Race Horse in Karkala
Photo Credit : By Author

ಕಾರ್ಕಳ: ಮೈಸೂರು ರೇಸ್ ಕುದುರೆ ಕಾರ್ಕಳದ ರಸ್ತೆಯಲ್ಲಿ ಕಾಣಸಿಗುತ್ತಿದೆ. ಅಂದ ಹಾಗೇ ಮೈಸೂರಿನ ಕುದುರೆ ರೇಸ್‌ಕೋರ್ಸಿನಲ್ಲಿ ಪಾಲ್ಗೊಂಡ ಆಸಕ್ತರಿಗೆ ಗೋಲ್ಡನ್ ಬ್ರೌನ್ ಬಣ್ಣ ರ‍್ಯಾಂಚೊ ನಾಮಾಂಕಿತದ ಇದರ ಪರಿಚಯ ಇರಲೂ ಬಹುದು. ಇದರ ಪ್ರಾಯ ೪ ವರ್ಷ ೨ ತಿಂಗಳು. ಮೈಸೂರು ರೇಸ್‌ಕೋರ್ಸಿನಲ್ಲಿ ೨ ಬಾರಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ೮ ಅಡಿ ಎತ್ತರ ೮ ಅಡಿ ಉದ್ದ ಹಾಗೂ ೪ ಅಡಿ ಅಗಲ ಹೊಂದಿದೆ.

ಉಗರ ಪ್ರೇಮಿ ಕುದುರೆ ಪ್ರೇಮಿಯಾದಾಗ: ತೆಳ್ಳಾರು ರಸ್ತೆ ನಿವಾಸಿ ಅನಿಲ್ ಪ್ರಭು ಉರಗಪ್ರೇಮಿ. ಅಸಂಖ್ಯಾತ  ವಿಷಪೂರಿತ ಉರಗಗಳನ್ನು ಸೆರೆ ಹಿಡಿದು ಅಭಯಾರಣ್ಯದಲ್ಲಿ ಮುಕ್ತಗೊಳಿಸಿ ನಾಗರಿಕರನ್ನು ಭಯ ಮುಕ್ತಗೊಳಿಸುವ ಸತ್ಕಾರ್ಯವನ್ನು ಹಲವು ವರ್ಷಗಳಿಂದ ನಡೆಸುತ್ತಾ ಬಂದಿರುವ ಕೀರ್ತಿ ಇವರಿಗೆ ಸಲ್ಲುತ್ತದೆ.

ಗಾಯಗೊಂಡ ಉರಗಗಳಿಗೆ ಚಿಕಿತ್ಸೆ ನೀಡುವ ಸಂದರ್ಭ ಬರೋಬರಿ ೩ ಸಲ ವಿಷಪೂರಿತ ಉರಗಗಳಿಂದ ಕಡಿತಕ್ಕೊಳಗಾಗಿ ಜೀವನ್ಮರಣ ಹೋರಾಟದಲ್ಲಿ ಗೆದ್ದು ಬಂದವರು  ಅನಿಲ್‌ ಪ್ರಭು.

ರಾಜಮಹಾರಾಜರ ಕಾಲದಲ್ಲಿ ಮಹತ್ವ ಪಡೆದಿತು: ಕಾರ್ಕಳವನ್ನು ಆಳಿದ ಬೈರವರಸರ ಕಾಲಘಟ್ಟದಲ್ಲಿ ಆನೆ,ಕುದುರೆಗಳಿಗೆ ಭಾರೀ ಮಹತ್ವ ಇತ್ತು. ಯುದ್ಧಗಳಲ್ಲಿ ವೈರಿಗಳನ್ನು ಸದೆ ಬಡಿಯಲು ಆನೆ, ಕುದುರೆಗಳನ್ನೇ ಹೆಚ್ಚಾಗಿ ಬಳಸುತ್ತಿದ್ದರು. ಅಂತಹ ಕಾಲಘಟ್ಟದಲ್ಲಿ ಕಾರ್ಕಳದಲ್ಲಿ ಕುದುರೆಗಳು ಕಂಡು ಬಂದಿತ್ತಾದರೂ, ನಂತರದ ಕಾಲಘಟ್ಟದಲ್ಲಿ ಕುದುರೆಗಳ ಬಳಕೆ ತೀರಾ ಕಡಿಮೆಯಾಗುತ್ತಾ ಹೋಯಿತು.

ಕಾರ್ಕಳ ಉತ್ಸವ ಸಂದರ್ಭದಲ್ಲಿ ಕುದುರೆಗಾಡಿಗಳು ಕಂಡುಬದಿದ್ದವು. ಉತ್ಸವಕ್ಕೆಂದು ಬಂದವರಲ್ಲಿ ಕೆಲವರು ಕುದುರೆಗಾಡಿಯಲ್ಲಿ ಕುಳಿತು ಸಂಭ್ರಮಿಸಿದ್ದರು.

ಕುದುರೆಯ ಕುರಿತು ಆಸಕ್ತಿ ಮೂಡಿದಾಗ: ಅನಿಲ್‌ಪ್ರಭು ವಿಗೆ ಕುದುರೆಯ ಕುರಿತು ಎಲ್ಲಿಲ್ಲದ ಆಸಕ್ತಿ. ಏನಾದರೂ ಮಾಡಿ ಕುದುರೆಯೊಂದನ್ನು ಕಾರ್ಕಳಕ್ಕೆ ತರಲೇ ಬೇಕೆಂಬ ಛಲಕ್ಕೆ ಬಿದ್ದ ಅವರು ನೇರವಾಗಿ ಪ್ರಯಾಣಿಸಿರುವುದು ಮೈಸೂರಿಗೆ. ಮೈಸೂರು ರೇಸ್‌ಕೋರ್ಸ್ ಕ್ಲಬ್‌ಗೆ ಭೇಟಿ ನೀಡಿದ ಅವರು ಮೊದಲಿಗೆ ತರಬೇತಿ ಪಡೆದರು. ಕುದುರೆಯನ್ನು ಕೊಂಡುಕೊಂಡರು. ರ‍್ಯಾಮಚೋ ಕುದುರೆಯನ್ನು ಕಳೆದ ಕೆಲದಿನಗಳ ಹಿಂದೆ ಕಾರ್ಕಳಕ್ಕೆ ತಂದಿದ್ದಾರೆ.

ನೀಡುವ ಆಹಾರ: ಕುದುರೆಗೆ ಬೇಕಾದ ಅಗತ್ಯ ಆಹಾರವನ್ನು ಬೆಂಗಳೂರಿನಿದ ತರಿಸುತ್ತಾರೆ. ಸ್ಥಳೀಯ ಹುಲ್ಲನ್ನು ಹಾಕುತ್ತಾರೆ. ದಿನವೊಂದಕ್ಕೆ ಸುಮಾರು ೬೦೦ ಖರ್ಚು ಭರಿಸುವ ಅಗತ್ಯ ಇದೆ. ಅಸಕ್ತರಿಗೆ ಕುದುರೆ ಸವಾರಿಯ ತರಬೇತಿ ನೀಡಲು ಮುಂದಾಗುವುದಾಗಿ ಅನಿಲ್ ಪ್ರಭು ತಿಳಿಸಿದ್ದಾರೆ.

See also  ವರಂಗ: ಕನ್ನಡ ಸಾಹಿತ್ಯದ ಮೊದಲ ಕೇಂದ್ರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

38625
R B Jagadeesha

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು