ಉಡುಪಿ: ಮಂಕಿಮ್ಯಾನ್ ಎಂದೇ ಪ್ರಸಿದ್ಧಿ ಪಡೆದಿರುವ ಚಿತ್ರದುರ್ಗದ ಜ್ಯೋತಿರಾಜ್ ಅಲಿಯಾಸ್ ಕೋತಿ ರಾಜ್ ಅವರು ಉಡುಪಿ ಬ್ರಹ್ಮಗಿರಿಯಲ್ಲಿ 250ಅಡಿ ಎತ್ತರದ ವಸತಿ ಸಮುಚ್ಚಯವನ್ನು ಸರಸರನೇ ಹತ್ತುವ ಮೂಲಕ ಸಾಹಸ ಮೆರೆದಿದ್ದಾರೆ.
ಇಂದು ಬೆಳಿಗ್ಗೆ ಬ್ರಹ್ಮಗಿರಿ ಸಮೀಪದ ವುಡ್ಸ್ ವಿಲ್ಲ ವಸತಿ ಸಮುಚ್ಚಯವನ್ನು 20 ನಿಮಿಷದಲ್ಲಿ ಏರಿದರು. ಕೊನೆಯ ಮಹಡಿಯನ್ನು ಹತ್ತಿದ ಅವರು, ಕನ್ನಡ ಬಾವುಟವನ್ನು ಹಾರಿಸುವುದರ ಮೂಲಕ ಸಂಭ್ರಮಸಿದರು.
ಜ್ಯೋತಿರಾಜ್ ಅವರು ಕ್ಲೈಮ್ಮಿಂಗ್ ಫೌಂಡೇಶನ್ ಸ್ಥಾಪಿಸುವ ಉದ್ದೇಶ ಹೊಂದಿದ್ದು, ಇದಕ್ಕಾಗಿ ನಾಡಿನೆಲ್ಲೆಡೆ ತಿರುಗಿ ಸಾಹಸ ಪ್ರದರ್ಶನ ಮಾಡುತ್ತಿದ್ದಾರೆ. ದೇಶದೆಲ್ಲೆಡೆ ಈ ರೀತಿ ಬೆಟ್ಟ, ಗುಡ್ಡ ಹತ್ತಿ ಕನ್ನಡ ಬಾವುಟ ಹಾರಿಸುತ್ತೇನೆ. ವಿದೇಶದಲ್ಲೂ ಸಾಹಸ ಮಾಡಿ ರಾಷ್ಟ್ರ ಧ್ವಜ ಹಾರಿಸುತ್ತೇನೆ ಎಂದು ಜ್ಯೋತಿರಾಜ್ ಅಭಿಲಾಷೆ ವ್ಯಕ್ತಪಡಿಸಿದರು.