ದೊಡ್ಡನಗುಡ್ಡೆ: ದೊಡ್ಡನಗುಡ್ಡೆ ಪರಿಸರದಲ್ಲಿ ಅಸಹಾಯಕ ಸ್ಥಿತಿಯಲ್ಲಿ ದಿನ ಕಳೆಯುತ್ತಿದ್ದ ವಾರಿಸುದಾರರಿಲ್ಲದ ಕರುವೊಂದನ್ನು ಸ್ಥಳೀಯರು ರಕ್ಷಿಸಿ, ಮೇವು ನೀಡಿ ಪೋಷಿಸುತ್ತಿದ್ದರು.
ಇದೀಗ ಈ ಭಾಗದಲ್ಲಿ ಗೋಕಳ್ಳರ ಹಾವಳಿ ಹೆಚ್ಚಾಗಿದ್ದು, ಇದರಿಂದ ಕರು ಗೋಭಕ್ಷರಿಗೆ ಆಹಾರ ಆಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಮನವಿಗೆ ಸ್ಪಂದಿಸಿದ ನಾಗರಿಕ ಸೇವಾ ಸಮಿತಿಯ ನಿತ್ಯಾನಂದ ಒಳಕಾಡು ಅವರು, ಕರುವನ್ನು ಕಲ್ಯಾಣಪುರದ ಲಕ್ಷ್ಮಿ ನಗರದ ನಂದಗೋಕುಲ ಆಶ್ರಮಕ್ಕೆ ಆಶ್ರಮ ಸಂಚಾಲಕ ನಾಗರಾಜ್ ರಾವ್ ಅವರ ವಿಶೇಷ ಮುತುವರ್ಜಿಯಲ್ಲಿ ದಾಖಲುಪಡಿಸಿದ್ದಾರೆ.
ಪಶುವೈದ್ಯ ಡಾಕ್ಟರ್ ಸಂದೀಪ್ ಕುಮಾರ್ ಕರುವಿಗೆ ಉಚಿತ ಚಿಕಿತ್ಸೆಯನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ. ಕರುವಿನ ರಕ್ಷಣಾ ಕಾರ್ಯಾಚರಣೆಯಲ್ಲಿ ಸ್ಥಳೀಯರಾದ ನಂದ, ಸವಿತಾ ನಾಯ್ಕ್, ಆಶಾ ಸಹಕರಿಸಿದರು.