News Kannada
Friday, March 24 2023

ಉಡುಪಿ

ಕಾರ್ಕಳ: ಸರ್ವಧರ್ಮಿಯರ ಆರಾಧನಾಲಯ ಸಾಣೂರು ದರ್ಗಾ ಶರೀಫ್ ಉರೂಸ್

Sanoor Dargah Sharief Urs, a place of worship for all religions
Photo Credit : By Author

ಕಾರ್ಕಳ: ಸಾಣೂರು ಶಾಂಭವಿ ನದಿಯ ತಟದಲ್ಲಿ ಇರುವ ಸಾಣೂರು ಅಸ್ಸಯ್ಯದ್ ಶಾಹುಲ್ ಹಮೀದ್ ವಲಿಯುಲ್ಲಾಹಿ ದರ್ಗಾ ಶರೀಫ್ ದರ್ಗಾವು ಸರ್ವಧರ್ಮಿಯರ ಆರಾಧನಾಲಯವಾಗಿದೆ.

ದಕ್ಷಿಣ ಭಾರತದಲ್ಲಿ ಸಾವಿರಾರು ಕರಾಮತ್‌ಳಿಂದ ಖ್ಯಾತಿ ಪಡೆದಿರುವ ತಮಿಳುನಾಡಿನ ಏರ್‌ವಾಡಿ ಸೈಯ್ಯದ್ ಇಬ್ರಾಹಿಂರವರ ಪರಂಪರೆಯಲ್ಲಿ ಧನ್ಯಗೊಂಡ ಕಾರ್ಕಳ ತಾಲೂಕಿನ ಸಾಣೂರು ಊರಿನಲ್ಲಿ ಅಂತ್ಯ ವಿಶ್ರಮ ಹೊಂದಿರುವ ಸೈಯ್ಯದ್ ಶಾಹುಲ್ ಹಮೀದ್ ಇವರ ಉರೂಸ್ ಮಾರ್ಚ್ ೧೮ರಂದು ಜರಗಲಿರುವುದು.

ದೇಶ ವ್ಯಾಪ್ತಿಯಲ್ಲಿ ತನ್ನದೇ ಆದ ಅಸಂಖ್ಯಾತ ಭಕ್ತರನ್ನು ಸಾಣೂರು ದರ್ಗ ಹೊಂದಿದೆ. ಅದರಲ್ಲೂ ವಿಶೇಷತೆ ಎಂಬ0ತೆ ಝಿಯಾರತ್ ನಡೆಯುತ್ತದೆ. ದುಷ್ಟಶಕ್ತಿಯ ಪ್ರಭಾವಕ್ಕೆ ತುತ್ತಾಗಿ ಮಾನಸಿಕ ಸ್ಥಿಮಿತ ಕಳೆದುಕೊಂಡವರಿಗೆ ಪ್ರಾರ್ಥನೆ ಹಾಗೂ ದಾರ್ಮಿಕ ವಿಧಿ ವಿಧಾನದೊಂದಿಗೆ ಯೋಗ್ಯ ಚಿಕಿತ್ಸೆ ಮೂಲಕ ರೋಗ ಶ್ರಮನಗೊಳಿಸುವುದು ಇದಾಗಿದೆ. ಇಂತಹ ಶಕ್ತಿ ತಮಿಳುನಾಡಿನ ಏರ್‌ವಾಡಿ ಸೈಯ್ಯದ್ ಇಬ್ರಾಹಿಂ ದರ್ಗ ಹೊಂದಿದೆ. ಆದುದರಿಂದಲೇ ದೇಶದ ನಾನಾ ಕಡೆಗಳಿಂದ ಅಸಂಖ್ಯಾತ ಭಕ್ತಾದಿಗಳು ಸಾಣೂರು ದರ್ಗಾಕ್ಕೆ ಅಗಮಿಸಿ ನೆಮ್ಮದಿಯ ಬದುಕು ನಿರ್ವಹಿಸುತ್ತಿದ್ದಾರೆ.

ನಾನಾ ಪವಾಡಗಳು ಅಗೋಚರ ಶಕ್ತಿಹೊಂದಿರುವ0ತಹ ಈ ಪುಣ್ಯಭೂಮಿಗೆ ಸರ್ವಧರ್ಮೀಯರು ಅಗಮಿಸುತ್ತಾರೆ ಎಂಬುವುದು ಮತ್ತೊಂದು ಗಮನಾರ್ಹವಾಗಿದೆ.

ಗುತ್ತಿಗೆ ಆಮಂತ್ರಣ ನೀಡುತ್ತಿದ್ದರು :ಇಲ್ಲಿ ಜರುಗುವಂತಹ ಉರೂಸ್ ಧಾರ್ಮಿಕ ಕಾರ್ಯಕ್ರಮದ ಪೂರ್ವದಲ್ಲಿ ಸಾಣೂರು ಗುತ್ತಿಗೆ ಮೆರವಣಿಗೆಯಲ್ಲಿ ತೆರೆಳಿ ಆಮಂತ್ರಣ ನೀಡುವ ಸಂಪ್ರದಾಯ ನಡೆಯುತ್ತಿತ್ತು. ಅಲ್ಲಿಗೆ ತೆರಳುವ ಮುಸ್ಲಿಂ ಬಾಂಧವರಿಗೆ ಅತಿಥಿ ಸತ್ಕಾರ್ಯಗಳು ಸಿಗುತ್ತಿತ್ತು. ಕಾಲ ಕ್ರಮೇಣ ಈ ಸಂಪ್ರದಾಯ ಕೊಂಡಿ ಕಳಚಿಬಿತ್ತು.

See also  ಮಣಿಪಾಲ: ಕಂಟ್ರೋಲ್ ಇನ್ಸ್ಟ್ರುಮೆಂಟೇಶನ್ ಸಿಸ್ಟಮ್ಸ್ ಕಾನ್ಫರೆನ್ಸ್ 2022 (ಸಿಸ್ಕೋನ್ 2022)
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

38625
R B Jagadeesha

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು