ಮಂಗಳೂರು: ನಗರದ ಕೆಲವು ಪ್ರದೇಶಗಳಲ್ಲಿ ಭಾನುವಾರ ಮಳೆ ಸುರಿದಿದ್ದು, ಬಿಸಿಲ ಬೇಗೆಗೆ ಅಲ್ಪ ಪರಿಹಾರ ದೊರೆತಂತಾಗಿದೆ. ಬೆಳಗ್ಗೆ 7 ರ ಸುಮಾರಿಗೆ ನಗರದ ಕೆಲವೆಡೆ ಸಾಧಾರಣ ಮಳೆಯಾಗಿದೆ.
ಶಕ್ತಿನಗರ ಆಸುಪಾಸು, ನಂತೂರು, ಪ್ರದೇಶಗಳಲ್ಲಿ ವರ್ಷಧಾರೆಯಾಗಿದೆ. ಮಾ.25ರ ಬಳಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉಡುಪಿಯಲ್ಲಿ ಸುಮಾರು ಅರ್ಧಗಂಟೆ ಕಾಲ ಮಳೆ ಸುರಿದಿದೆ. ಮುಂಜಾನೆ ನಂತರವೂ ಉಡುಪಿ ಸುತ್ತಮುತ್ತ ಉಡುಪಿ ಸುತ್ತಮತ್ತ ಮಳೆ ಸುರಿದಿದೆ.