ಕುಂದಾಪುರ: ತಾಲೂಕಿನ ಹೆಮ್ಮಾಡಿಯಲ್ಲಿ ಖಾಸಗಿ ಅಪಾರ್ಟ್‍ಮೆಂಟ್ ಒಂದರ 4ನೇ ಮಹಡಿಯಲ್ಲಿರುವ ಕೋಣೆಯಲ್ಲಿ ಸಿಲುಕಿಕೊಂಡಿದ್ದ ಸುಮಾರು 70 ವರ್ಷ ಪ್ರಾಯದ ಮಹಮ್ಮದ್ ಬಿ.ಎಸ್ ಎನ್ನುವ ವೃದ್ಧರನ್ನು ಕುಂದಾಪುರ ಅಗ್ನಿ ಶಾಮಕ ದಳದವರು ರಕ್ಷಣೆ ಮಾಡಿದ ಘಟನೆ ಭಾನುವಾರ ನಡೆದಿದೆ.
ಅಪಾರ್ಟ್‍ಮೆಂಟ್‍ನಲ್ಲಿರುವ 4ನೇ ಮಹಡಿಯ ಕೊಠಡಿಯಲ್ಲಿ ಸುಮಾರು 70 ವರ್ಷ ಪ್ರಾಯದ ಮಹಮ್ಮದ್ ಬಿ.ಎಸ್ ಎನ್ನುವರು ಸಿಲುಕಿಕೊಂಡಿದ್ದು ಹೊರಗಡೆಯಿಂದ ರೂಮ್ ಬಾಗಿಲಿನ ಕೀ ಲಾಕ್ ಆಗಿತ್ತು.ಮಾಹಿತಿಯ ಆಧಾರದ ಮೇರೆಗೆ ಘಟನೆ ಸ್ಥಳಕ್ಕೆ ಧಾವಿಸಿ ಬಂದ ಕುಂದಾಪುರ ಅಗ್ನಿ ಶಾಮಕ ದಳದ ತಂಡವು ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ಕೆ.ಟಿ ಗೌಡ ಅವರ ನೇತೃತ್ವದಲ್ಲಿ ಜಲವಾಹನದ ಮೇಲ್ಗಡೆಯಿಂದ ಏಣಿಯನ್ನು ಇರಿಸಿ ಅಗ್ನಿಶಾಮಕ ದಳದ ಸಿಬ್ಬಂದಿ ಆಸಿಫ್ ಅಲಿ ಅವರು ಏಣಿ ಮೂಲಕ 4ನೇ ಮಹಡಿಯಲ್ಲಿರುವ ರೂಮ್‍ನ ಬಾಲ್ಕನಿಗೆ ತೆರಳಿ ಲಾಕ್ ತೆಗೆದು ಯಶಸ್ವಿ ಕಾರ್ಯಾಚರಣೆ ಮೂಲಕ ವೃದ್ಧರನ್ನು ರಕ್ಷಣೆ ಮಾಡಿದರು.
ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ಕೆ.ಟಿ ಗೌಡ,ಪ್ರಮುಖ ಅಗ್ನಿ ಶಾಮಕ ಸಿಬ್ಬಂದಿ ರವೀಂದ್ರ ಎಸ್ ದೇವಾಡಿಗ,ಚಾಲಕ ಮುಸ್ತಾಫ್,ಅಗ್ನಿಶಾಮಕರಾದ ಆಸಿಫ್ ಅಲಿ,ಅಭಿಷೇಕ್ ಢಂಗ್,ಸಮಿರುಲ್ಲಾ,ಮುಗುಟ ಖಾನ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.