ಉಡುಪಿ: ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣಗಳಲ್ಲಿ ವಶಪಡಿಸಿಕೊಂಡ ಚಿನ್ನಾಭರಣಗಳನ್ನು ಹಾಗೂ ಸೊತ್ತುಗಳನ್ನು ಸಂಬಂಧಿಸಿದ ವಾರಸುದಾರರಿಗೆ ಹಸ್ತಾಂತರಿಸುವ ಕಾರ್ಯಕ್ರಮವು ಉಡುಪಿಯ ಪೊಲೀಸ್ ಕವಾಯತ್ತು ಮೈದಾನದಲ್ಲಿ ಇಂದು ನಡೆಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ ಅವರು ವಾರಸುದಾರರಿಗೆ ಸೊತ್ತುಗಳನ್ನು ಹಸ್ತಾಂತರಿಸಿದರು. ಕಾರ್ಕಳ ಗ್ರಾಮಾಂತರ ಠಾಣೆ, ಹಿರಿಯಡ್ಕ, ಬೈಂದೂರು, ಕೊಲ್ಲೂರು, ಕಾಪು ಠಾಣೆಗಳ ತಲಾ ಒಂದು ಪ್ರಕರಣ, ಕೋಟ, ಮಲ್ಪೆ, ಠಾಣೆಯ ತಲಾ 2 ಪ್ರಕರಣಗಳು, ಉಡುಪಿ ನಗರ 3, ಕುಂದಾಪುರ 5, ಪಡುಬಿದ್ರಿ 4, ಕುಂದಾಪುರ ಗ್ರಾಮಾಂತರ 4, ಬ್ರಹ್ಮಾವರ 5 ಹಾಗೂ ಮಣಿಪಾಲ ಠಾಣೆಯ 10 ಪ್ರಕರಣಗಳು ಸೇರಿ ಒಟ್ಟು 40 ಪ್ರಕರಣಗಳಲ್ಲಿ ವಶಪಡಿಸಿಕೊಂಡ ಒಟ್ಟು 74,52,170 ಮೌಲ್ಯದ ಸೊತ್ತುಗಳನ್ನು ಹಸ್ತಾಂತರ ಮಾಡಲಾಯಿತು.
ಎಎಸ್ಪಿ ಎಸ್.ಟಿ. ಸಿದ್ದಲಿಂಗಪ್ಪ, ಉಡುಪಿ ಡಿವೈಎಸ್ಪಿ ದಿನಕರ ಪಿ.ಕೆ., ಕುಂದಾಪುರ ಡಿವೈಎಸ್ಪಿ ಕೆ.ಯು. ಬೆಳ್ಳಿಯಪ್ಪ, ಕಾರ್ಕಳ ಡಿವೈಎಸ್ಪಿ ಅರವಿಂದ ಉಪಸ್ಥಿತರಿದ್ದರು.