News Kannada
Friday, September 22 2023
ಉಡುಪಿ

ಕಾರ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಅನಿತಾ ಡಿಸೋಜ ಅವರಿಗೆ ಟಿಕೆಟ್ ನೀಡಲು ಮನವಿ

Congress seeks ticket for Anitha D'Souza from Karkala
Photo Credit : News Kannada

ಕಾರ್ಕಳ: ರಾಜ್ಯ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಸಮಯದಲ್ಲಿ ವಿವಿಧ ಪಕ್ಷಗಳು ಅಭ್ಯರ್ಥಿ ತನಕ್ಕಾಗಿ ಭಾರಿ ಕಸರತ್ತನ್ನು ಮಾಡುತ್ತಿವೆ. ಪ್ರತಿಷ್ಠಿತ ಕಾರ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್ ಕ್ಷೇತ್ರವನ್ನು ಮರಳಿ ತನ್ನ ತೆಕ್ಕೆಗೆ ತರಲು ಹರಸಾಹಸ ಮಾಡುತ್ತಿದೆ. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಹಲವು ಬಾರಿ ಪ್ರತಿನಿಧಿಸಿದಂತ ಕ್ಷೇತ್ರದಲ್ಲಿ ಪ್ರಸ್ತುತ ಕಾಂಗ್ರೆಸ್ ಹೀನಾಯ ಪರಿಸ್ಥಿತಿಯಲ್ಲಿದೆ. ಇಂಧನ ಸಚಿವ ಬಿಜೆಪಿ ಪ್ರಮುಖ ಮುಖಂಡ ಸುನಿಲ್ ಕುಮಾರ್ ರವರ ಹಿಡಿತದಲ್ಲಿರುವಂತ ಕಾರ್ಕಳ ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್ ತನ್ನ ಗತ ಇತಿಹಾಸವನ್ನು ಮರಳಿ ತರುವಲ್ಲಿ ಹರಸಾಸಪಡುತ್ತಿದೆ.

ಹೀನಾಯ ಪರಿಸ್ಥಿತಿಯಲ್ಲಿದ್ದರೂ ಪಕ್ಷದಲ್ಲಿ ಅಭ್ಯರ್ಥಿ ಸ್ಥಾನಕ್ಕೆ ಕೊರತೆ ಇಲ್ಲ. ಐದಕ್ಕೂ ಅಧಿಕ ಅಭ್ಯರ್ಥಿಗಳು ಈಗಾಗಲೇ ತಮ್ಮ ಹೆಸರನ್ನು ಕೆಪಿಸಿಸಿಯಲ್ಲಿ ನೋಂದಾಯಿಸಿದ್ದಾರೆ. ಆದರೆ ಕ್ಷೇತ್ರದಲ್ಲಿ ಈ ಬಾರಿ ಮಹಿಳೆಯರಿಗೆ ಅವಕಾಶ ಕೊಡಿ ಎಂಬ ಸದ್ದು ಎದ್ದಿದ್ದು, ಇದಕ್ಕೆ ಕ್ರೈಸ್ತ ಸಮಾಜ ಬಾಂಧವರ ಹಲವು ಸಂಘಟನೆಗಳು ಸಾತ್ ನೀಡಿವೆ.

20ಕ್ಕೂ ಅಧಿಕ ವರ್ಷಗಳಿಂದ ಕಾಂಗ್ರೆಸ್ ಕಾರ್ಯಕರ್ತೆಯಾಗಿ ಪಕ್ಷಕ್ಕಾಗಿ ದುಡಿದಿರುವ, ಪ್ರಸ್ತುತ ಕಾರ್ಕಳ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ಅನಿತಾ ಡಿಸೋಜರವರು ಈ ಬಾರಿ ಅಭ್ಯರ್ಥಿಯಾಗಲಿ ಎಂಬ ಸದ್ದು ಕಾರ್ಕಳದಲ್ಲಿ ಪ್ರತಿಧ್ವನಿಸುತ್ತಿದೆ. ಗ್ರಾಮ ಪಂಚಾಯತ್ ಸದಸ್ಯರಾಗಿ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅನಿತಾ ಡಿಸೋಜ, ಪಕ್ಷದ ಪರವಾಗಿ ವಿವಿಧ ಮಾಧ್ಯಮಗಳಲ್ಲಿ ತನ್ನ ಧ್ವನಿಯನ್ನು ಎತ್ತಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಪ್ರಮುಖ ಎರಡು ಪಕ್ಷಗಳಲ್ಲಿ ಮಹಿಳೆಯರಿಗೆ ಟಿಕೆಟ್ ದೊರಕುತ್ತಿಲ್ಲ. ಈ ಬಾರಿ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಅನಿತಾ ರವರಿಗೆ ಪಕ್ಷದಿಂದ ಟಿಕೆಟ್ ನೀಡಿದರೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಬೆಂಬಲಿಸಲಿದ್ದಾರೆ ಎಂಬುದನ್ನು ನಿರೀಕ್ಷೆ ಮಾಡಬಹುದೆಂದು ಕ್ರೈಸ್ತ ಸಂಘಟನೆಗಳು ಒತ್ತಾಯಿಸಿವೆ.

ಇವರು ಸಮಾಜ ಸೇವೆಯಲ್ಲಿ ಚಿರಪರಿಚಿತರು. ಬೆಳ್ಮಣ್ ಪರಿಸರದಲ್ಲಿ ಅಪಘಾತ ನಡೆದಾಗ ರಾತ್ರಿ ಹಗಲು ಯೆನ್ನದೆ ಮೊದಲು ನೆನೆಯುವ ಹೆಸರು ಇವರದ್ದು. ಎಷ್ಟೋಜನರನ್ನ ಅಪಘಾತವಾದಾಗ ಯಾವುದೇ ಫಲಾಪೇಕ್ಷೆ ಆಶಿಸದೆ ಆಸ್ಪತ್ರೆಗೆ ದಾಕಲಿಸಿದ ಉಧಾಹರಣೆಗಳು ಅದೆಷ್ಟೋ ಇವೆ.

ಬೆಳ್ಮಣ್ ಪರಿಸರದಲ್ಲಿ belman helping hand ಎಂಬ ವಾಟ್ಸಾಪ್‌ ಗುಂಪ್ ಅನ್ನು ಹುಟ್ಟು ಹಾಕಿ ಬೆಳ್ಮಣ್ ಪರಿಸರದಲ್ಲಿ ಸಮಾರಂಭದಲ್ಲಿ ಹೆಚ್ಚಾಗಿ ಉಳಿದ ಆಹಾರವನ್ನು ಅಸಕ್ತರಿಗೆ, ನಿಗೃತಿಕರಿಗೆ ಹಾಗೂ ಅನಾತಾಶ್ರಮಗಳಿಗೆ ಕ್ಲಪ್ತ ಸಮಯದಲ್ಲಿ ತಲುಪಿಸಿ ಆಹಾರವನ್ನು ಪೋಲಾಗದ ರೀತಿಯಲ್ಲಿ ಸಹಕರಿಸುತ್ತಾರೆ. ದಾನಿಗಳಿಂದ ಬಟ್ಟೆ ಹಾಗೂ ಆಹಾರ ದಾನ್ಯಗಳನ್ನ ಒಟ್ಟು ಗೂಡಿಸಿ ಅಗತ್ಯವಿದ್ದವರಿಗೆ ತಲುಪಿಸುತ್ತಾರೆ. ಬೆಳ್ಮಣ್ಣಲ್ಲಿ ನಿರ್ಗತಿಕರನ್ನು ಆಶ್ರಮ ಹಾಗೂ ಪುನವಸತಿ ಕೇಂದ್ರಕ್ಕೆ ತಲುಪಿಸುವಲ್ಲಿ ಸಹಕರಿಸಿರುತ್ತರೆ.

ಪರಿಸರದಲ್ಲಿ ಸ್ವಚ್ಚತೆಯ ಅರಿವು ಜನರಲ್ಲಿ ಮೂಡಿಸುವ ಉದ್ದೇಶದಿಂದ ಸ್ವಚ್ಚತಾ ತಂಡದ ಸಕ್ರೀಯ ಸದಸ್ಯೆಯಾಗಿ ಪ್ರತಿ ಭಾನುವಾರ ಸ್ವಚ್ಚತಾ ಕಾಯಕ್ರಮವನ್ನು ಯಶಸ್ಚಿಯಾಗಿ ನಿರ್ವಹಿಸುತ್ತಾ ಬಂದಿದ್ದಾರೆ.

See also  ಕುಂದಾಪುರ: ಮಾನಸಿಕ ಅಸ್ವಸ್ಥ ವ್ಯಕ್ತಿ ರಕ್ಷಣೆ, ಸಾಮಾಜಿಕ ಕಾಳಜಿ ಮೆರೆದ ಪೊಲೀಸ್ ಅಧಿಕಾರಿಗಳು

ಮದುವೆಯ ದಿನ ಬಡವರ್ಗದ ಎಷ್ಟೋ ಹೆಣ್ಣು ಮಕ್ಕಳನ್ನ ಬೆಳಗ್ಗಿನ ಜಾವ ಅವರ ಮನೆಗೆ ಹೋಗಿ ಯಾವುದೇ ಫಲಾಪೇಕ್ಷೆ ಇಲ್ಲದೆ ಮದುಮಗಳನ್ನು ಚೆನ್ನಾಗಿ ಮದುವೆಗೆ ತಯಾರುಮಾಡಿ ಕಳುಹಿಸಿ ಕೊಟ್ಟಿರುವ ಇವರು ಕೊರೊನಾದ ಸಮಯದಲ್ಲಿ ದಾನಿಗಳಿಂದ 500ಕ್ಕೂ ಹೆಚ್ಚಿನ ಮನೆಗಳಿಗೆ ದಿನಸಿ ವಸ್ತುಗಳನ್ನು ಹಂಚಿರುತ್ತಾರೆ. ವೃದ್ದರಿಗೆ ಹಾಗೂ ಅಗತ್ಯವಿದ್ದವರಿಗೆ ಔಷದಿಯನ್ನ ತರಿಸಿ ಕೊಟ್ಟಿದ್ದು, ಕ್ಲಪ್ತ ಸಮಯದಲ್ಲಿ ಅಗತ್ಯ ಬಿದ್ದವರಿಗೆ ವೈದ್ಯಕೀಯ ನೆರವನ್ನು ಒದಗಿಸಿದ್ದಾರೆ. ಬೆಳ್ಮಣ್ ಪರಿಸರದಲ್ಲಿ ಕೂಲಿ ಕಾರ್ಮಿಕರಾಗಿ ಇದ್ದ ಉತ್ತರ ಭಾರತದ ಕಾರ್ಮಿಕರಿಗೆ ಅವರ ಊರಿಗೆ ಹೋಗಲು ಬೇಕಾದ ವ್ಯವಸ್ತೆಯನ್ನ ಮಾಡಲು ಸಹಕರಿಸಿದ್ದಾರೆ. ಎಷ್ಟೋ ಕೂಲಿ ಕಾರ್ಮಿಕರಿಗೆ ಊಟದ ವ್ಯವಸ್ಥೆಯನ್ನು ಮಾಡಿರುತ್ತಾರೆ.

ಅರಕ್ಷಕ ಠಾಣೆ ಕಾರ್ಕಳ, ಬೆಳ್ಮಣು ಸರಕಾರಿ ಆಸ್ಪತ್ರೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರ ಜೊತೆ 24 ಗಂಟೆಯೂ ಕೊರೊನಾ ವಾರಿಯರ್‌ ಆಗಿ ಕೆಲಸ ಮಾಡಿದ ಕೀತಿ ಬೆಳ್ಮಣ್‌ ಪರಿಸರದಲ್ಲಿ ಇವರಿಗೆ ಸಲ್ಲಿತ್ತದೆ.

ಸುಮಾರು 22 ಬಾರಿ ರಕ್ತ ದಾನ ಮಾಡಿ ಮಹಿಳೆಯರಿಗೆ ಸ್ಪೂರ್ತಿ ದಾತರಾಗಿದ್ದಾರೆ. ಚರ್ಚ್ ಪಾಲನ ಮಂಡಳಿ ಮತ್ತು ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸಿರುವ ಇವರಿಗೆ ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಬೇಕು ಎಂದು ವಿವಿಧ ಸಂಘ ಸಂಸ್ಥೆಗಳು ಮನವಿ ಮಾಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು