ಉಡುಪಿ: ನಗರದ ಪುತ್ತೂರು ಗ್ರಾಮದ ಕೊಡಂಕೂರಿನ ಮನೆಯೊಂದರಲ್ಲಿ ನಿನ್ನೆ ತಡರಾತ್ರಿ ನಡೆಯುತ್ತಿದ್ದ ಮೆಹಂದಿ ಕಾರ್ಯಕ್ರಮಕ್ಕೆ ದಾಳಿ ನಡೆಸಿದ ಪೊಲೀಸರು, ಎರಡು ಸೌಂಡ್ ಬಾಕ್ಸ್ ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೊಡಂಕೂರು ಪುತ್ರನ್ ಗ್ಯಾಸ್ ಗೋಡಾನ್ ಬಳಿ ರವಿರಾಜ್ ಎಂಬವರ ಮನೆಯ ಅಂಗಳದಲ್ಲಿ ಶಾಮಿಯಾನ್ ಹಾಕಿ, ಯಾವುದೇ ಪರವಾನಿಗೆ, ಪೂರ್ವಾನುಮತಿ ಪಡೆಯದೆ ಕರ್ಕಶವಾದ ಡಿ.ಜೆ. ಸೌಂಡ್ ಹಾಕಿ ನೃತ್ಯ ಮಾಡುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿನಡೆಸಿದ ಪೊಲೀಸರು ಸೌಂಡ್ಸ್ ಮಿಕ್ಸರ್ ಹಾಗೂ 2 ಸೌಂಡ್ ಬಾಕ್ಸ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.