ಉಡುಪಿ: ವಿದ್ಯಾರ್ಥಿಗಳ ಸಮಯ ಪ್ರಜ್ಞೆಯಿಂದಾಗಿ ಯುವಕನೋರ್ವ ಸಂಭವನೀಯ ವಾಹನ ಅಪಘಾತದಿಂದ ಪಾರಾಗಿರುವ ಘಟನೆ ನಗರದ ಅಮ್ಮುಂಜೆ ಪೆಟ್ರೋಲ್ ಬಂಕ್ ಸಮೀಪ ನಡೆದಿದೆ.
ಕುಡಿದ ಮತ್ತಿನಲ್ಲಿ ನಡು ರಸ್ತೆಯಲ್ಲೆ ಇಬ್ಬರು ಯುವಕರು ಬೀದಿ ರಂಪಾಟ ಮಾಡುತ್ತಿದ್ದರು. ಈ ವೇಳೆ ಓರ್ವ ಯುವಕ ರಸ್ತೆಗೆ ಬಿದ್ದಿದ್ದು, ವಿದ್ಯಾರ್ಥಿಗಳ ಸಮಯ ಪ್ರಜ್ಞೆಯಿಂದಾಗಿ ಕೂದಲೆಳೆಯ ಅಂತರದಿಂದ ವಾಹನ ಅಪಘಾತದಿಂದ ಪಾರಾಗಿದ್ದಾನೆ.
ಆಲ್ ಕಾಲೇಜ್ ಸ್ಟೂಡೆಂಟ್ ಪವರ್ ಕಾಲೇಜಿನ ವಿದ್ಯಾರ್ಥಿಗಳಾದ ಮಹಿಮ್, ಅಖಿಲ್, ಆಕಾಶ್, ರಾಕಿಬ್, ಲೋಕನಾಥ್ ಅವರು ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ. ಆ ಬಳಿಕ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ನೆರವಿಗೆ ಧಾವಿಸಿದರು. ರಕ್ಷಿಸಲ್ಪಟ್ಟ ಯುವಕ ಮುಂಬೈ ಮೂಲದ ಹೇಮಂತ್ ಗಾಣಿಗ ಎಂದು ತಿಳಿದುಬಂದಿದೆ.