ಉಡುಪಿ: ಭಾವನಾ ಫೌಂಡೇಶನ್, ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಇದರ ಆಶ್ರಯದಲ್ಲಿ ಜನಪದ ದೇಶೀಯ ಕಲೆಗಳ ಸರಣಿ ಕಾರ್ಯಾಗಾರವನ್ನು ಬಡಗುಪೇಟೆಯ ಭಾಸ ಗ್ಯಾಲರಿಯಲ್ಲಿ ಇಂದು ಆಯೋಜಿಸಲಾಯಿತು.
ಈ ಕಾರ್ಯಾಗಾರದಲ್ಲಿ ಒರಿಸ್ಸಾ ರಾಜ್ಯದ ಸಾಂಪ್ರದಾಯಿಕ ಕಲೆ ‘ಪಟಚಿತ್ರ’ ಎಂಬ ಕಲಾಪ್ರಕಾರವನ್ನು ಪರಿಚಯಿಸಲಾಯಿತು. ಬಟ್ಟೆ, ಪೇಪರ್ ಮೊದಲಾದವುಗಳಲ್ಲಿ ರಚಿಸಲ್ಪಡುವ ಪಟಚಿತ್ರ ಹಾಗೂ ತಾಳೆಯೋಲೆಯ ಮೇಲೆ ತಾಳ ಪಟಚಿತ್ರ ಕಾರ್ಯಾಗಾರವನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕಲಾವಿದೆ ಒರಿಸ್ಸಾದ ಗೀತಾಂಜಲಿ ದಾಸ್ ನಡೆಸಿಕೊಟ್ಟರು.
ಕಾರ್ಯಾಗಾರವನ್ನು ವೆಂಟನಾ ಫೌಂಡೇಶನ್‌ನ ಟ್ರಸ್ಟಿ ರವೀಂದ್ರ ಕೆ. ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮಣಿಪಾಲ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಾಫಿಕಲ್ ಆರ್ಟ್ಸ್ ಮತ್ತು ಸೈನ್ಸ್‌ನ ಮುಖ್ಯಸ್ಥ ಪ್ರೊ. ವರದೇಶ ಹಿರೇಗಂಗೆ, ಇಂಟ್ಯಾಕ್ ಮಂಗಳೂರು ವಿಭಾಗದ ಸಂಚಾಲಕ ಆರ್ಕಿಟೆಕ್ಟ್ ಸುಭಾಶ್ಚಂದ್ರ ಬಸು, ಭಾವನಾ ಫೌಂಡೇಶನ್‌ನ ನಿರ್ದೇಶಕ ಯಕ್ಷಗುರು ಹಾವಂಜೆ ಮಂಜುನಾಥಯ್ಯ ಉಪಸ್ಥಿತರಿದ್ದರು. ಕಾರ್ಯಾಗಾರದ ಸಂಯೋಜಕ ಜನಾರ್ದನ ಹಾವಂಜೆ ಸ್ವಾಗತಿಸಿದರು.