ಉಡುಪಿ: ವಾತಾವರಣದಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಬಿಸಿಲಿನಿಂದ ಹಿರಿಯ ನಾಗರಿಕರು, ಮಹಿಳೆಯರು ತತ್ತರಿಸಿ ಹೋಗಿದ್ದಾರೆ. ಈ ಬಿಸಿಲಿನ ತಾಪದ ದಾಹ ತೀರಿಸಲು ಆಗಾಗ ನೀರು ಕುಡಿಯಲೇ ಬೇಕು. ಜನರಿಗೆ ಆಗುತ್ತಿರುವ ಸಮಸ್ಯೆಯನ್ನು ಕಂಡು ಶುದ್ದ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಮಾಜ ಸೇವಕರೊಬ್ಬರು ಮಾಡಿ ಮಾದರಿಯಾಗಿದ್ದಾರೆ.
ಹೌದು… ಸಮಾಜ ಸೇವಕ ನಿತ್ಯಾನಂದ ಒಳಕಾಡು ಮಾರುಥಿ ವಿಥಿಕಾ ರಸ್ತೆಯ ಜೋಸ್ ಅಲುಕಾಸ್ ಬಳಿ ಉಚಿತ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಪ್ರತೀ ವರ್ಷ ಈ ಸಾಮಾಜಿಕ ಕಾರ್ಯ ಕೈಗೊಳ್ಳುತ್ತಿದ್ದು ಈ ಬಾರಿ ಐದನೇ ವರ್ಷದ ಸಾಮಾಜಿಕ ಕಾರ್ಯವಾಗಿದೆ.
ಉಚಿತ ಕುಡಿಯುವ ನೀರಿನ ವ್ಯವಸ್ಥೆಗೆ ಉದ್ಯಮಿ ಉದಯ್ ಕುಮಾರ್ ಚಾಲನೆ ನೀಡಿ ಶುಭ ಹಾರೈಸಿದರು. ಈ ಸಂದರ್ಬದಲ್ಲಿ ಜೋಸ್ ಅಲುಕಾಸ್ ನ ಮ್ಯಾನೇಜರ್ ರಾಜೇಶ್ ಎನ್.ಆರ್, ಗೋಪಾಲ್, ಗಣೇಶ್ ಪಿಲಾರ್ ಮುಂತಾದವರು ಉಪಸ್ಥಿತರಿದ್ದರು.