ಕುಂದಾಪುರ: ಅಮ್ಮ ವೇದಿಕೆ ವತಿಯಿಂದ ನಿರ್ಮಿಸಿದ ನೂತನ ಮನೆಯನ್ನು ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಮೊಗವೀರ ಅವರಿಗೆ ಮೇ.6 ರಂದು ಹಸ್ತಾಂತರ ಮಾಡಲಿದ್ದಾರೆ.
ಎರಡು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ತೀವ್ರ ವಾಗಿ ಗಾಯಗೊಂಡು ಸಾವು ಬದುಕಿನ ಹೋರಾಟದೊಂದಿಗೆ ಗುಡಿಸಿನಲ್ಲಿ ಬದುಕನ್ನು ನಡೆಸುತ್ತಿದ್ದ ಬಡ ಕುಟುಂಬದ ಸುಬ್ರಹ್ಮಣ್ಯ ಮೊಗವೀರ ಅವರಿಗೆ ಮನೆಯನ್ನು ನಿರ್ಮಿಸಿಕೊಡಬೇಕೆಂದು ಪಣ ತೊಟ್ಟಿದ್ದ ಅಮ್ಮ ವೇದಿಕೆ ಸಹಹೃದಯದ ಗುಂಪಿನ ಸದಸ್ಯರು ದಾನಿಗಳ ನೆರವನ್ನು ಪಡೆದುಕೊಂಡು ಸುಸಜ್ಜಿತವಾದ ಮನೆಯನ್ನು ನಿರ್ಮಿಸಿದ್ದಾರೆ.
ಮನೆ ನಿರ್ಮಾಣದ ಕಾರ್ಯ ಸಂಪೂರ್ಣವಾಗಿ ಮುಗಿದಿದ್ದು ಮೇ.6 ರಂದು ಮನೆಯನ್ನು ಅಮ್ಮವೇದಿಕೆಯ ನೇತೃತ್ವದಲ್ಲಿ ಫಲಾನುಭವಿಗೆ ಹಸ್ತಾಂತರ ಮಾಡಲಿದ್ದಾರೆ. ಅಮ್ಮ ವೇದಿಕೆಯ ಸಮಾಜಿಕ ಕಳಕಳಿ ಮನೋಭಾವ ಸಾರ್ವಜನಿಕರ ಪ್ರಶಂಸನೆಗೆ ಪಾತ್ರವಾಗಿದೆ.