ಕುಂದಾಪುರ: ಕ್ರಿಕೆಟ್ ಬೆಟ್ಟಿಂಗ್ ಮಾಡುತ್ತಿದ್ದ ನಾಲ್ವರನ್ನು ವಶಕ್ಕೆ ಪಡೆದ ಘಟನೆ ಸಾಲಿಗ್ರಾಮ ಚಿತ್ರಪಾಡಿ ಎಂಬಲ್ಲಿ ನಡೆದಿದೆ.ಗುಂಪು ಸೇರಿಕೊಂಡು ಮೊಬೈಲ್‍ನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಮಾಡುತ್ತಿರುವುದನ್ನು ಗಮನಿಸಿದ ಪೊಲೀಸರು ಯುವಕರನ್ನು ವಿಚಾರಿಸಿ ಪರಿಶೀಲನೆ ಮಾಡಿದಾಗ ಯುವಕರು ಬೆಟ್ಟಿಂಗ್‍ನಲ್ಲಿ ನಿರತರಾಗಿರುವುದು ಕಂಡು ಬಂದಿದೆ.
ಕಾನೂನು ಬಾಹಿರ ಕೃತ್ಯದಲ್ಲಿ ಭಾಗಿಯಾಗಿರುವ ನಾಲ್ವರು ಯುವಕರು ಮತ್ತು ಬಂಧಿತರ ಕಾರು ಸಹಿತ,10 ಮೊಬೈಲ್ ಫೋನ್ ಹಾಗೂ ನಗದನ್ನು ಕೋಟ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇತ್ತಿಚೀನ ದಿನಗಳಲ್ಲಿ ಯುವಕರು ಮಾದಕ ವಸ್ತು ಸೇವನೆ ಮತ್ತು ಗಾಂಜಾ ಮಾರಾಟ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಹೆಚ್ಚೆಚ್ಚು ಭಾಗಿಯಾಗುತ್ತಿರುವುದು ಕಂಡು ಬರುತ್ತಿರುವುದು ಕಳವಳಕಾರಿ ಸಂಗತಿ ಆಗಿದೆ.