ಕುಂದಾಪುರ: ಬೈಂದೂರು ತಾಲೂಕಿನ ಬಡಾಕೆರೆ ಧಾರ್ಮಿಕ ಮಂದಿರದಲ್ಲಿ ನಡೆದ ಮಂಗಳವಾರ ನಡೆದ ಶ್ರೀ ಶಾರದಾ ಸದ್ವಿದ್ಯಾ ವಸಂತ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಬಡಗುತಿಟ್ಟಿನ ಶ್ರೇಷ್ಠ ಯಕ್ಷಗಾನ ಭಾಗವತ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರಾದ ಸುಬ್ರಹ್ಮಣ್ಯ ಧಾರೇಶ್ವರ ಮತ್ತು ಜಿಲ್ಲಾ ರಾಜ್ಯೋತ್ಸವ ಪುರಸ್ಕ್ರತರಾದ ವೇ.ಮೂ.ಮಧುಸೂದನ ಬಾಯರಿ ಮಣೂರು, ಪುರೋಹಿತರಾದ ವಿಶ್ವನಾಥ ಹೊಳ್ಳ ಉಪ್ಪುಂದ ಅವರನ್ನು ಸನ್ಮಾನಿಸಲಾಯಿತು.
ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅವರು ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ ಬ್ರಾಹ್ಮಣ್ಯ,ಜ್ಯೋತಿಷ್ಯ ಹಾಗೂ ಯಕ್ಷಗಾನಕ್ಕೆ ಅವಿನಾಭಾವ ಸಂಬಂಧವಿದೆ. ವೇದ ಮತ್ತು ಬ್ರಾಹ್ಮಣ್ಯ ಅರಿಯಲು ಸುಲಭವಾದ ವಿಧಾನ ಯಕ್ಷಗಾನವಾಗಿದೆ ಎಂದರು.
ವೇ.ಮೂ.ಲೋಕೇಶ್ ಅಡಿಗ ಬಡಾಕೆರೆ,ವೇ.ಮೂ.ಕೆ.ಪಿ ಕುಮಾರಗುರು ತಂತ್ರಿಗಳು,ವೇ.ಮೂ ಉದಯ ವೈದ್ಯರು, ಡಾ.ಸತ್ಯನಾರಾಯಣ ಕಾರಂತ, ವೈ.ಸುಧಾಕರ ಭಟ್ ಕಾರ್ಕಳ, ರತ್ನಾಕರ ಉಡುಪ, ಪ್ರಕಾಶ್ ಹೆಬ್ಬಾರ್, ವೆ.ಮೂ ಲಕ್ಷ್ಮೀಶ ಅಡಿಗ, ವೇ.ಮೂ ನಾಗೇಂದ್ರ ಅಡಿಗ ಮತ್ತಿತರರು ಉಪಸ್ಥಿತರಿದ್ದರು.