ಕುಂದಾಪುರ: ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ ಅವರು ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆ ಮಾಡಲಿರುವ ಹಿನ್ನೆಲೆಯಲ್ಲಿ ತ್ರಾಸಿಯಿಂದ ಬೈಂದೂರು ತನಕ ಬೃಹತ್ ಬೈಕ್ ರ‍್ಯಾಲಿ ಮತ್ತು ಜಾಥಾ ನಡೆಯಿತು.
ಸಹಸ್ರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉರಿ ಬಿಸಿಲಿನಲ್ಲಿ ಬೈಕ್ ರ‍್ಯಾಲಿ ಮತ್ತು ಜಾಥಾದಲ್ಲಿ ಪಾಲ್ಗೊಂಡು ಬೈಂದೂರು ತನಕ ಸಾಗಿದರು. ಬೈಂದೂರುನಲ್ಲಿ ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶ ನಡೆಯಲಿದ್ದು ನಂತರ ಕೆ.ಗೋಪಾಲ ಪೂಜಾರಿ ಅವರು ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.