ಕುಂದಾಪುರ: ಸಾಮಾಜಿಕ ನ್ಯಾಯ, ವ್ಯಕ್ತಿ ಸ್ವಾತಂತ್ರ್ಯ,ಮಾನವ ಹಕ್ಕುಗಳ ಸಮಾನತೆ ಮತ್ತು ವಿಶ್ವ ಬಂಧುತ್ವದ ವಿಚಾರಗಳನ್ನು ಪ್ರತಿಪಾದಿಸಿದ ಬಸವಣ್ಣನವರ ವಿಚಾರಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿದೆ ಎಂದು ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ ಗಂಗೊಳ್ಳಿ ಹೇಳಿದರು.
ಗಂಗೊಳ್ಳಿ ಶ್ರೀಇಂದುಧರ ದೇವಸ್ಥಾನದ ವತಿಯಿಂದ ದೇವಸ್ಥಾನದ ಸಮುದಾಯ ಭವನದಲ್ಲಿ ಭಾನುವಾರ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ದೇವಸ್ಥಾನದ ಪ್ರಧಾನ ಅರ್ಚಕ ಶಿವಾನಂದ ಜಿ.ಟಿ,ಮಾಜಿ ಅಧ್ಯಕ್ಷ ನರಸಿಂಹ ಕೆ,ವೆಂಕಟೇಶ ಖಾರ್ವಿ, ಜಗದೀಶ ಎಂ.ಜಿ.ಜಿ.ಈಶ್ವರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಒಕ್ಕೂಟದ ಅಧ್ಯಕ್ಷೆ ಸುಮಿತ್ರ ಜಿ,ಸುಶೀಲಾ ಜಿ.ಟಿ,ನೇತ್ರಾವತಿ,ಸರೋಜ ಉಪಸ್ಥಿತರಿದ್ದರು.