ಕುಂದಾಪುರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ 9 ವರ್ಷಗಳ ಕಾಲ ಯಶಸ್ವಿ ಆಡಳಿತವನ್ನು ನಿರ್ವಹಿಸಿ 10ನೇ ವರ್ಷಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಕುಂದಾಪುರದ ಮೋದಿ ಅಭಿಮಾನಿ ಸತೀಶ್ ಪ್ರಭು ಎನ್ನುವ ರಿಕ್ಷಾ ಚಾಲಕರೊಬ್ಬರು 10 ಕಿ.ಮೀ ತನಕ 1.ರೂ ಮಾತ್ರ ಪಡೆದು ವಿಶೇಷವಾದ ರೀತಿಯಲ್ಲಿ ಸೇವೆಯನ್ನು ನೀಡುವುದರ ಮುಖೇನ ಅಭಿಮಾನ ಮೆರೆದಿದ್ದಾರೆ.
ರಾತ್ರಿ ಹಗಲು ಜನ ಸೇವೆಯನ್ನು ಮಾಡುತ್ತಿರುವ ಮೋದಿ ಅವರಿಗೊಸ್ಕರ ಪ್ರತಿ ವರ್ಷ ಈ ರೀತಿ ಸೇವೆಯನ್ನು ಮಾಡಲಾಗುತ್ತಿದ್ದು, ಈ ವರ್ಷ 10 ದಿನಗಳ ಕಾಲ 10.ಕಿ.ಮೀಗೆ ಪ್ರಯಾಣಿಕರಿಂದ 1.ರೂ ಅನ್ನು ಪಡೆದು ಸೇವೆಯನ್ನು ನೀಡಲಾಗುತ್ತಿದೆ ಎಂದು ಆಟೋ ಚಾಲಕ ಸತೀಶ್ ಪ್ರಭು ಕುಂದಾಪುರ ಹೇಳುತ್ತಾರೆ.