News Kannada
Monday, December 11 2023
ಉಡುಪಿ

ಮಣಿಪಾಲ್‌ ಹಾಸ್ಪಿಟಲ್ಸ್ ತೆಕ್ಕೆಗೆ ಎಎಂಆರ್‌ಐ ಆಸ್ಪತ್ರೆ

AMRI Hospital to be taken over by Manipal Hospitals
Photo Credit : News Kannada

ಉಡುಪಿ: ಭಾರತದ 2ನೇ ಅತಿದೊಡ್ಡ ಆರೋಗ್ಯ ಸಂಸ್ಥೆ ಮಣಿಪಾಲ್ ಹಾಸ್ಪಿಟಲ್ಸ್ ಕೋಲ್ಕತ್ತಾ ಮೂಲದ ಎಎಂಆರ್‌ಐ (ಅಡ್ವಾನ್ಸ್‌ಡ್ ಮೆಡಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್) ಆಸ್ಪತ್ರೆಗಳನ್ನು ಖರೀದಿಸಿದೆ. ಆಸ್ಪತ್ರೆಯ ಶೇ. 84ರಷ್ಟು ಷೇರನ್ನು ಒಟ್ಟು 2,400 ಕೋಟಿ ರೂ.ಗೆ ಕರ್ನಾಟಕದ ಉಡುಪಿ ಮೂಲದ ಮಣಿಪಾಲ್‌ ಹಾಸ್ಪಿಟಲ್ಸ್‌ ಸ್ವಾಧೀನಪಡಿಸಿಕೊಂಡಿದೆ.

ಈ ಸ್ವಾಧೀನದೊಂದಿಗೆ ಮಣಿಪಾಲ್ ಹಾಸ್ಪಿಟಲ್ಸ್‌ ಪೂರ್ವ ಭಾರತದಲ್ಲಿನ ಅತಿದೊಡ್ಡ ಆಸ್ಪತ್ರೆ ಸರಪಳಿಯಾಗಿ ಮೂಡಿ ಬಂದಿದೆ. ಪೂರ್ವ ಭಾರತದಲ್ಲಿ ಟರ್ಷರಿ ಮತ್ತು ಕ್ವಾಟರ್ನರಿ ಆರೋಗ್ಯ ಸೇವೆ ಪೂರೈಸುವ ಅತಿ ದೊಡ್ಡ ಆರೋಗ್ಯ ಸಂಸ್ಥೆ ಮಣಿಪಾಲ್‌ ಹಾಸ್ಪಿಟಲ್ಸ್‌ ಆಗಿದೆ.

ಮಣಿಪಾಲ್ ಹಾಸ್ಪಿಟಲ್ಸ್‌ ಮತ್ತು ಇಮಾಮಿ ನಡುವಿನ ಸುದೀರ್ಘ ಕಾನೂನು ಹೋರಾಟದ ನಂತರ ಈ ಒಪ್ಪಂದವು ಕಾರ್ಯರೂಪಕ್ಕೆ ಬಂದಿದೆ.
ಎಎಂಆರ್‌ಐ ಹಾಸ್ಪಿಟಲ್ಸ್‌ನ್ನು ಇಮಾಮಿ ಗ್ರೂಪ್ ಆರಂಭಿಸಿತ್ತು. ಇಮಾಮಿ ಗ್ರೂಪ್‌ ಎಫ್‌ಎಂಸಿಜಿ, ಖಾದ್ಯ ತೈಲ, ಕಾಗದ ಮತ್ತು ಇನ್ನೂ ಹೆಚ್ಚಿನ ಉದ್ಯಮಗಳಲ್ಲಿ ತೊಡಗಿಸಿಕೊಂಡ ವೈವಿಧ್ಯಮ ಸಂಘಟಿತ ಸಮೂಹವಾಗಿದೆ.

ಎಎಂಆರ್‌ಐ ಒಟ್ಟು ನಾಲ್ಕು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಹೊಂದಿದ್ದು, ಮೂರು ಆಸ್ಪತ್ರೆಗಳು ಕೋಲ್ಕೊತ್ತಾದಲ್ಲಿದ್ದರೆ, ಒಂದು ಆಸ್ಪತ್ರೆ ಭುವನೇಶ್ವರದಲ್ಲಿದೆ.

See also  ಕುಂದಾಪುರ: ಶಿಕ್ಷಕರ ವರ್ಗಾವಣೆ ಖಂಡಿಸಿ ನಾವುಂದ ಶಾಲೆಯಲ್ಲಿ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು