News Karnataka Kannada
Thursday, March 28 2024
Cricket
ಉಡುಪಿ

ಕಾರ್ಕಳದಲ್ಲಿ ವಾಮಮಾರ್ಗದ ಮೂಲಕ ಬಿಜೆಪಿ ಗೆಲುವು ಸಾಧಿಸಿದೆ: ಉದಯ ಶೆಟ್ಟಿ ಮುನಿಯಾಲು

BJP won in Karkala through Left route: Uday Shetty Muniyalu
Photo Credit : News Kannada

ಕಾರ್ಕಳ: ಹಣ ಹಾಗೂ ಹೆಂಡವನ್ನು ಹಂಚುವ ಮೂಲಕ ಬಿಜೆಪಿ ವಾಮಮಾರ್ಗದಲ್ಲಿ ಕಾರ್ಕಳದಲ್ಲಿ ಗೆಲುವು ಸಾಧಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತದಿಂದ ಅಧಿಜಾರಕ್ಕೆ ಬಂದಿದ್ದು ನಮ್ಮ ಕಾರ್ಯಕರ್ತರು ಧೃತಿಗೆಡಬೇಕಿಲ್ಲ ಮುಂದಿನ 5 ವರ್ಷಗಳಲ್ಲಿ ಕಾರ್ಯಕರ್ತರ ಜತೆಗಿದ್ದು ಜನಪರ ಕೆಲಸ ಮಾಡುವುದಾಗಿ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಉದಯ ಶೆಟ್ಟಿ ಮುನಿಯಾಲು ಹೇಳಿದ್ದಾರೆ.

ಅವರು ಕಾರ್ಕಳದ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ,ನಮ್ಮ ಕಾರ್ಯಕರ್ತರ ಸಂಘಟಿತ ಪ್ರಯತ್ನದಿಂದ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದೆ. ಬಿಜೆಪಿಯ ದುರಾಡಳಿತಕ್ಕೆ ಬೇಸತ್ತು ಮತದಾರರು ಅಭೂತಪೂರ್ವವಾಗಿ ಕಾಂಗ್ರೆಸ್ ಬೆಂಬಲಿಸಿದ್ದಾರೆ ಆದರೆ ಬಿಜೆಪಿಯ ವಾಮಮಾರ್ಗದ ಮೂಲಕ ಕಾರ್ಕಳದ ಮುಗ್ದ ಜನರನ್ನು ವಂಚಿಸಿದ್ದಾರೆ,ಕಾರ್ಕಳದ 72 ಸಾವಿರ ಮತದಾರರು ನಮ್ಮನ್ನು ಬೆಂಬಲಿಸಿದ್ದು ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದ ಅವರು, ಕಾಂಗ್ರೆಸ್ ನೀಡಿರುವ ಭರವಸೆಗಳನ್ನು ಈಡೇರಿಸುವಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ದುಡಿಯಬೇಕಿದೆ ಎಂದರು.

ಕಾರ್ಕಳ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಶುಭದ್ ರಾವ್ ಮಾತನಾಡಿ,ರಾಜ್ಯದಲ್ಲಿ ಕಾಂಗ್ರೆಸ್ 140 ಸ್ಥಾನಗಳನ್ನು ನೀಡುವ ಮೂಲಕ 40% ಸರ್ಕಾರವನ್ನು ಕಿತ್ತೊಗೆಯುವ ಮೂಲಕ ಬಿಜೆಪಿ ತಕ್ಕ ಉತ್ತರ ನೀಡಿದ್ದಾರೆ. ಕಾರ್ಕಳದಲ್ಲಿ ಜನತೆ ನೀಡಿರುವ ತೀರ್ಪನ್ನು ನಾವು ಗೌರವಿಸುತ್ತೇವೆ,ಇದು ಕಾಂಗ್ರೆಸ್ ಪಕ್ಷದ ಸೋಲಲ್ಲ ಕಾರ್ಕಳದಲ್ಲಿ ಕಾಂಗ್ರೆಸ್ ಸೋಲು ನಿಜವಾದ ಸೋಲ್ಲಲ್ಲ, ಕಾರ್ಕಳದಲ್ಲಿ 92 ಸಾವಿರ ಮತಗಳನ್ನು ಪಡೆದವರು 76 ಸಾವಿರ ಮತಗಳಿಗೆ ಕುಸಿದು 44 ಸಾವಿರ ಮತಗಳ ಅಂತರವನ್ನು 4 ಸಾವಿರಕ್ಕೆ ಇಳಿಸಿರುವ ಉದಯ ಶೆಟ್ಟಿಯವರು ಈ ಚುನಾವಣೆಯಲ್ಲಿ ಸೋತು ಗೆದ್ದಿದ್ದಾರೆ. ಕಾರ್ಕಳ ಶಾಸಕರ ಅಭಿವೃದ್ಧಿ ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತವಾಗಿತ್ತು ಎನ್ನುವುದು ಸ್ಪಷ್ಟವಾಗಿದೆ.

ಕಾರ್ಕಳದ ಬಿಜೆಪಿ ಅಭ್ಯರ್ಥಿ ರಾತ್ರಿಯಿಡೀ ಹಣ,ಹೆಂಡವನ್ನು ಹಂಚಿ ಜನರನ್ನು ಭಾವಾನಾತ್ಮಕವಾಗಿ ಮತದಾರರನ್ನು ಸೆಳೆದು ಅಂಕಿಅಂಶಗಳ ಆಧಾರದಲ್ಲಿ ಗೆದ್ದಿರಬಹುದು ನಿಜವಾದ ಅರ್ಥದಲ್ಲಿ ಸುನಿಲ್ ಕುಮಾರ್ ಸೋತಿದ್ದಾರೆ.ರಾಜ್ಯದ ಪ್ರಭಾವಿ ಸಚಿವರು ಎರಡೆರಡು ಖಾತೆಗಳನ್ನು ನಿಭಾಯಿಸಿದ ಸುನಿಲ್ ಕುಮಾರ್ ಕೇವಲ 4 ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದಾರೆ ಎಂದರೆ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ, ಕಾರ್ಕಳದಲ್ಲಿ ಕಾಂಗ್ರೆಸ್ ಮತ್ತೆ ಭದ್ರಕೋಟೆಯಾಗಲಿದೆ ಎಂದು ಶುಭದ್ ರಾವ್ ಎಚ್ಚರಿಸಿದರು. ಕಾರ್ಕಳದಲ್ಲಿ ಆಗಿರುವ ಸಣ್ಣ ಸೋಲಿನಿಂದ ಕಾಂಗ್ರೆಸ್ ಎಂದಿಗೂ ಧೃತಿಗೆಡುವುದಿಲ್ಲ. ಅಂಕಿಅಂಶದಿದ ಕಾಂಗ್ರೆಸ್ ಸೋತಿರಬಹುದು ಮುಂದೆ ಪಕ್ಷವನ್ನು ಕಟ್ಟುವಲ್ಲಿ ಉದಯ ಶೆಟ್ಟಿಯವರ ಜತೆ ನಾವೆಲ್ಲರೂ ಜತೆಯಾಗಿ ಡುಡಿಯುತ್ತೇವೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು