ಉಡುಪಿ: ಗಣೇಶ ಚತುರ್ಥಿಯ ಪ್ರಯುಕ್ತ ಉಡುಪಿ ನಗರದಾದ್ಯಂತ ಗಣಪನನ್ನು ನೂರೆಂಟು ಆಕಾರಗಳಲ್ಲಿ ಆರಾಧನೆ ಮಾಡಲಾಗುತ್ತದೆ.
ಮಣಿಪಾಲದ ವೇಣುಗೋಪಾಲ ದೇವಸ್ಥಾನದಲ್ಲಿ ಚಂದ್ರಯಾನ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ರಾಘವೇಂದ್ರ ಹೊಳ್ಳ ಅವರ ಮಾರ್ಗದರ್ಶನದಲ್ಲಿ ಕಲಾವಿದರಾದ ಶ್ರೀನಾಥ ಮಣಿಪಾಲ ಮತ್ತು ರವಿ ಹಿರೇಬೆಟ್ಟು ಅವರ ಕಲ್ಪನೆಯಲ್ಲಿ ಈ ವಿಭಿನ್ನ ಗಣಪತಿ ಮೂಡಿಬಂದಿದೆ. ವಿಭಿನ್ನ ರೀತಿಯಲ್ಲಿ ತಯಾರಿಸಿರುವ ಚಂದ್ರಯಾನ ಗಣಪತಿ ಭಕ್ತರನ್ನು ಆಕರ್ಷಿಸುತ್ತಿದೆ.