ಉಡುಪಿ: ನಾಗರಿಕ ಸಮಿತಿಯ ಆಯೋಜನೆ ಮತ್ತು ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರ ನೇತೃತ್ವದಲ್ಲಿ ಗಣೇಶ ಚತುರ್ಥಿಯನ್ನು ವಿನೂತನ ರೀತಿಯಲ್ಲಿ ಪರಿಸರ ಸ್ನೇಹಿಯಾಗಿ ಮಾರುಥಿ ವೀಥಿಕಾದಲ್ಲಿ ಆಚರಿಸಲಾಯಿತು.
ಆಲೆಮನೆಯಲ್ಲಿ ನುರಿತ ಕಲಾವಿದರಿಂದ ಎರಡಡಿ ಚೌಕಾಕೃತಿಯ ಬೆಲ್ಲದ ಗಟ್ಟಿಯಲ್ಲಿ ಗಣಪತಿಯನ್ನು ನಾಜೂಕಿನಿಂದ ಕೆತ್ತಿಸಿ, ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರು ಉಡುಪಿಗೆ ತರಿಸಿದ್ದರು. ವಿನೂತನ ರೀತಿಯ ಗಣಪತಿ ವೀಕ್ಷಿಸಿ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದರು. ಭಕ್ತರ ಒತ್ತಾಯದ ಮೆರೆಗೆ ಬೆಲ್ಲದ ಗಣಪತಿಯನ್ನು ಗುರುವಾರದ ತನಕ ವೀಕ್ಷಣೆಗೆ ಇಡಲು ತಿರ್ಮಾನಿಸಿದ್ದಾರೆ.
ಪ್ರದರ್ಶನ ಕಾರ್ಯಕ್ರಮವನ್ನು ಪರಿಸರ ತಜ್ಞ ಡಾ. ಸತೀಶ್ ನಾಯ್ಕ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಬಾಸ್ಕರ್ ಶೇರಿಗಾರ್, ಜೋಸ್ ಆಲುಕಾಸ್ ಆಭರಣ ಮಳಿಗೆಯ ವ್ಯವಸ್ಥಾಪಕ ರಾಜೇಶ್ ಎನ್ ಆರ್, ಹಾಗೂ ಗೋಪಾಲ್, ಬೀಮಾ ಆಭರಣ ಮಳಿಗೆಯ ಅಷ್ಮತ್ ರಾವ್, ಶ್ರೀನಿಧಿ ಭಟ್, ಕೊಟೆಕ್ ಮಹೇಂದ್ರ ಬ್ಯಾಂಕಿನ ಸಿಬಂದಿ, ನಾಗರಿಕ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.