News Karnataka Kannada
Thursday, April 25 2024
Cricket
ಉಡುಪಿ

ಕಾರ್ಕಳ: ಹಿಂದು ಯುವಕರನ್ನು ಎತ್ತಿಕಟ್ಟಿ ಕಾಂಗ್ರೆಸ್‌ ಸಂಚು, ಮಹಾವೀರ ಹೆಗ್ಡೆ

BJP constituency president Mahaveer Hegde warns Congressmen
Photo Credit : News Kannada

ಕಾರ್ಕಳ: ಚುನಾವಣೆ ಪ್ರಚಾರವು ಅಂತಿಮ ಹಂತಕ್ಕೆ ತಲುಪಿಸಿದ್ದು, ಸೋಲಿನ ಭೀತಿಯನ್ನು ಎದುರಿಸುತ್ತಿರುವ ಕಾಂಗ್ರೆಸ್ ಮಾನದೊಂದಿಗೆ ಚೆಲ್ಲಾಟ ನಡೆಸುವ ಕುಕೃತ್ಯಕ್ಕೆ ಮುಂದಾಗಿದೆ. ಸಾಮಾಜಿಕ ಜಾಲತಾಣವನ್ನು ಅದಕ್ಕಾಗಿ ದುರುಪಯೋಗ ಪಡಿಸುತ್ತಿದೆ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ್ ಹೆಗ್ಡೆ ಆರೋಪಿಸಿದ್ದಾರೆ.

ಕಾರ್ಕಳ ಬಿಜೆಪಿ ಕಾರ್ಯಾಲಯದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಹಿಂದು ಸಂಘಟನೆಯ ಯುವಕರನ್ನು ಎತ್ತಿಕಟ್ಟುವ ನಿಟ್ಟಿನಲ್ಲಿ ಕಾಂಗ್ರೆಸ್ ಬಿ ಟೀಮ್ ಆರಂಭಗೊಂಡಿದ್ದು, ಇದೀಗ ಅತಂತ್ರವಾಗಿದೆ. ಬಿಜೆಪಿಗೆ ಮತ ಹಾಕದಿರಿ ಎಂದು ಇದೀಗ ಬಿ ಟೀಮ್ ಪ್ರಚಾರ ಪಡಿಸುತ್ತಿದೆ. ಮುತಾಲಿಕ್ ಅವರನ್ನು ನಂಬಿ ಹೋದವರು ಇದೀಗ ತೊಳಲಾಟದಲ್ಲಿ ಸಿಲುಕಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ಬಹಿರಂಗ ಸಭೆಯಲ್ಲಿ ಬಿಜೆಪಿಗರ ಹಾಗೂ ಸಚಿವರ ವಿರುದ್ಧ ಮಾಡಿರುವ ಅವಹೇಳನಕಾರಿ ಹೇಳಿಕೆ ಎಲ್ಲೆಮೀರಿದೆ. ಇದು ಅವರಿಗೆ ಶೋಭೆ ತರುವುದಿಲ್ಲ. ನಮ್ಮ ಸಚಿವರು ನಮಗೆ ಹಮ್ಮೆ. ಸಜ್ಜನ ರಾಜಕರಣಿಯಾಗಿರುವ ಅವರು ಕಾರ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದರು.

ಹಿಂದಿನ ವಿಧಾಣಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಈ ತಳಮಟ್ಟದಲ್ಲಿ ಇರಲಿಲ್ಲ. ಚುನಾವಣೆಯಲ್ಲಿ ವಾಮಮಾರ್ಗ ಅನುಸರಿಸುತ್ತಿರುವುದು ತರವಲ್ಲವೆಂದರು. ನಿಂದನೆಗೆ ಒಂದು ಇತಿಮಿತಿ ಇರಬೇಕು. ಮಹಿಳೆಯರು ಸಾರ್ವಜನಿಕ ಜೀವನಕ್ಕೆ ಬಾರದಂತೆ ಮಾಡುತ್ತಿದ್ದಾರೆ ಎಂದರು.

ಪುರಸಭಾ ಮಾಜಿ ಅಧ್ಯಕ್ಷ ಕೆ.ಪಿಶೆಣೈ ಮಾತನಾಡಿ, ಯಾವುದೇ ತರದ ಭ್ರಷ್ಟಚಾರ ನಡೆದಿದ್ದೇ ಆದಲ್ಲಿ ಅದಕ್ಕೆ ತನಿಖೆ ನಡೆಸುವ ಸಂಸ್ಥೆಗಳು ಇವೆ. ಅದನ್ನು ಬಿಟ್ಟು ಚುನಾವಣೆ ಪ್ರಚಾರದಲ್ಲಿ ಕೂಗಾಡಿದರೆ ಏನು ಪ್ರಯೋಜನ ಇಲ್ಲ. ಬಾಜಪದ ಹಿಂದುತ್ವವು ಸರ್ವರನ್ನು ಸಮಾನವನ್ನಾಗಿ ಕಾಣುವುದು. ಪಿಎಫ್‌ಐ ಹಾಗೂ ಬಜರಂಗದಳ ದಳವನ್ನು ಏಕ ತಕ್ಕಡಿಯಲ್ಲಿ ತೂಗುವುದು ಎಷ್ಟು ಸರಿ? ಯಾವುದೇ ಸಂಘಟನೆಯ ಮೇಲೆ ನಿರ್ಬಂಧ ಏರುವ ಹಕ್ಕು ರಾಜ್ಯ ಸರಕಾರಕ್ಕೆ ಇಲ್ಲ. ಬಜರಂಗದಳ ನಿಷೇಧ ಕುರಿತು ಕಾಂಗ್ರೆಸ್‌ನಲ್ಲಿ ಒಮ್ಮತವಿಲ್ಲ. ಹೀಗಾಗಿ ಮಾಜಿಮುಖ್ಯಮಂತ್ರಿ ಅದನ್ನು ಉಲ್ಲೇಖಿಸಿದ್ದಾರೆಂದರು. ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಗ್ಯಾರೆಂಟಿಯಾದರೂ ಎನ್ನೆಂದು ಪ್ರಶ್ನಿಸಿದರು.

ಗೇರು ನಿಗಮದ ಮಾಜಿ ಅಧ್ಯಕ್ಷ ಮಣಿರಾಜ ಶೆಟ್ಟಿ ಮಾತನಾಡಿ, ಬೀ ಟೀಮ್‌ಗೆ ಕಾಂಗ್ರೆಸ್ ಆರ್ಥಿಕ ಬೆನ್ನೆಲುಬು. ಆದುದರಿಂದ ಅವರು ಕೇವಲ ಬಿಜೆಪಿಯ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ ಮಾತನಾಡುತ್ತಿದ್ದಾರೆ ಎಂದರು. ಕಾಂಗ್ರೆಸ್ ಸಭೆಯಲ್ಲಿ ಮೋದಿ,ಯೋಗಿ ಅವರನ್ನು ಹೊಗಳಿ ಬಿಜೆಪಿ ಅಭ್ಯರ್ಥಿಯನ್ನು ತೆಗಳಿದ್ದಾರೆ. ಹೀಗಾದರೆ ಕಾಂಗ್ರೆಸ್‌ನ ಪರಿಸ್ಥಿತಿ ಅವಲೋಕಿಸಬೇಕೆಂದರು. ಬಜರಂಗದಳವನ್ನು ರಾಜಕೀಯವಾಗಿ ಮುಗಿಸುವ ಯೋಜನೆ,ಯೋಚನೆ ಸರಿಯಲ್ಲ ಎಂದರು.

ವಿಧಾನಸಭಾ ಚುನಾವಣೆಯ ಉಸ್ತುವಾರಿ ಮಹೇಶ್ ಕುಡುಪುಲಾಜೆ, ಮುಖಂಡರಾದ ಮೂಡಬಿದಿರೆ ಬಾಹುಬಲಿ ಪ್ರಸಾದ್, ಪ್ರಭಾರ ವಕ್ತಾರ ಸಾಣೂರು ನರಸಿಂಹ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು