News Karnataka Kannada
Friday, March 29 2024
Cricket
ಉಡುಪಿ

ಕಾರ್ಕಳ: ವಿಜಯೋತ್ಸವದಲ್ಲಿ ಶಾಸಕ ಸುನೀಲ್ ಕುಮಾರ್ ಹೇಳಿಕೆ ಖಂಡನೆ

Mla Sunil Kumar's statement condemned at victory celebrations
Photo Credit : News Kannada

ಕಾರ್ಕಳ: ಚುನಾವಣೆಯಲ್ಲಿ ಕಾರ್ಯಕರ್ತರು ಒಂದು ಪಕ್ಷದ ಪರ ಮತ್ತು ವಿರುದ್ದ ಕೆಲಸ ಮಾಡುವುದು ಸಾಮಾನ್ಯ ಚಟುವಟಿಕೆ ಆದರೆ ನನ್ನ ವಿರುದ್ಧ ಕೆಲಸ ಮಾಡಿದವರನ್ನು ನೋಡಿಕೊಳ್ಳುತ್ತೇನೆ ಎಂದು ವಿಜಯೋತ್ಸವದಲ್ಲಿ ಶಾಸಕ ಸುನೀಲ್ ಕುಮಾರ್ ಆಡಿದ ಮಾತನ್ನು ತೀವ್ರವಾಗಿ ಖಂಡಿಸುತ್ತೇನೆ, ಕಾರ್ಯಕರ್ತರಿಗೆ ಬೆದರಿಕೆ ಹಾಕಿದ ಶಾಸಕನ ವಿರುದ್ಧ ಪೋಲಿಸ್ ಇಲಾಖೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕ್ರಮ ಜರುಗಿಸಬೇಕೆಂದು ಒತ್ತಾಯಿಸುತ್ತೇನೆ. ನಿಮ್ಮ ಮಾತುಗಳು ಹತಾಶೆಯ ಪ್ರತೀಕವಾಗಿದೆ ಬೆದರಿಕೆಗಳಿಗೆ ಹೆದರುವ ಕಾರ್ಯಕರ್ತರು ನಾವಲ್ಲ ನಿಮ್ಮ ಎದುರಿಸುವ ಶಕ್ಕಿ ನಮ್ಮಲಿದೆ ಆದರೆ ಇನ್ನು ಮಾತನಾಡುವಾಗ ಎಚ್ಚರವಿರಲಿ ಎಂದು ಬ್ಲಾಕ್ ಕಾಂಗ್ರೇಸ್ ವಕ್ತಾರ  ಶುಭದರಾವ್ ಹೇಳಿದ್ದಾರೆ.

ಟೈಗರ್ ಗ್ಯಾಂಗಿನ ಹೆಸರಿನಲ್ಲಿ ಮುತಾಲಿಕರು ಹಿಂದುಗಳ ಹತ್ಯೆ ಮಾಡಿದ್ದಾರೆ ಎಂಬ ತಮ್ಮ ಹೇಳಿಕೆ ಆಶ್ಚರ್ಯ ತಂದಿದೆ ದಾಖಲೆ ಇದೆ ಎನ್ನುತ್ತೀರಿ ಅದನ್ನು ಯಾಕೆ ಬಹಿರಂಗಪಡಿಸಿಲ್ಲ, ಹತ್ಯೆ ಬಗ್ಗೆ ಮಾಹಿತಿ ಇದ್ದರೂ ಮೌನ ವಹಿಸಿರುವುದೂ ಅಪರಾದವಲ್ಲವೆ? ಈ ಬಗ್ಗೆ ಶಾಸಕರನ್ನು ಸಾಕ್ಷಿಯಾಗಿ ಪರಿಗಣಿಸಿ ತನಿಖೆ ನಡೆಸಬೇಕೆಂದು ಅಗ್ರಹಿಸುತ್ತೇನೆ.

ನಿಮ್ಮ ವಿರುದ್ದ ಮಾಡಿದ ಭ್ರಷ್ಟಾಚಾರ ಅರೋಪ ಎಲ್ಲವೂ ಸತ್ಯವಾಗಿದ್ದು ಅದಕ್ಕೆ ಇನ್ನೂ ಬದ್ದವಾಗಿದ್ದೇನೆ ಆದರೆ ಅದಕ್ಕೆ ಉತ್ತರಿಸುವ ದೈರ್ಯ ನಿಮಗಿಲ್ಲ. ಇನ್ನೂ ನಿಮ್ಮ ಭ್ರಷ್ಟಾಚಾರ ಬಯಲಿಗೆಳೆಯಲು ಭ್ರಷ್ಟಾಚಾರ ವಿರೋಧಿ ಸಮಿತಿಯನ್ನೇ ರಚನೆ ಮಾಡುತ್ತೇವೆ ಅದರಿಂದ ನಿಮ್ಮ ಬಂಡವಾಳ ಎಲ್ಲಾ ಹೊರಬರಲಿದೆ.

ನನನ್ನು ಚಿಲ್ಲರೆ ನಾಯಕ ಎಂದಿರಿ ಹೌದು ನಾನು ಚಿಲ್ಲರೆ ನಾಯಕನೇ ಯಾಕೆಂದರೆ ನನ್ನಲಿ ಇರುವುದ ಚಿಲ್ಲರೆ ಹಣ ನಿಮ್ಮ ಹಾಗೆ ಭ್ರಷ್ಟಾಚಾರದಿಂದ ಸಂಪಾದಿಸಿದ ಹಣವೂ ಇಲ್ಲ ಅಕ್ರಮ ಆಸ್ತಿಯೂ ಇಲ್ಲ, ಯಾರೋ ಕೊಟ್ಟ ಡೈಮಂಡ್ ನೆಕ್ಲೆಸ್ ಇಲ್ಲ, ಈವರೆಗೆ ಯಾವುದೇ ಅರೋಪ ಇಲ್ಲದೆ ಪ್ರಮಾಣಿವಾಗಿ ಸೇವೆ ಮಾಡುತ್ತಾ ಬಂದಿದೇನೆ ಇನ್ನೂ ಮಾಡುತ್ತೇನೆ.

ಮಾತಿನಲ್ಲಿ ನಾವು ಯಾರು ಸಭ್ಯತೆ ಮೀರಿಲ್ಲ ಅದು ನಮ್ಮ ಸಂಸ್ಕೃತಿಯೂ ಅಲ್ಲ, ಆದರೆ ಗೋಪಾಲ ಭಂಡಾರಿಯವರ ಬಗ್ಗೆ ಅವಹೇಳನವಾಗಿ ಮಾತನಾಡುವಾಗ, ಬಂಡಿಮಠದಲ್ಲಿ ಹಗಲು ರಾತ್ರಿ ಧರಣಿ ಮಾಡಿ ವೀರಪ್ಪ ಮೊಯಿಲಿಯವರನ್ನು ಹೀಯಾಳಿಸಿದಾಗ, ಸಿದ್ದರಾಮಯ್ಯ ಸೆಗಣಿ ತಿನ್ನಿ ಎಂದಾಗ ಕಾಂಗ್ರೇಸಿಗರು ನಪುಂಸಕರು ಎಂದಾಗ ನಿಮ್ಮ ಸಭ್ಯತೆ ಎಲ್ಲಿ ಹೋಗಿತ್ತು.

ನಮ್ಮ ಅಭ್ಯರ್ಥಿ 20 ದಿನದಲ್ಲಿ ಬಂದವರು ಎಂದಿರಿ ಆದರೆ ಅವರ ಸಾಮಾಜಿಕ ಸೇವೆ ಎದುರು ನೀವು ನಗಣ್ಯ ಅವರು ಕಷ್ಟಪಟ್ಟು ಸಂಪಾದಿಸಿದ ಹಣದಿಂದ ಜನಸೇವೆ ಮಾಡುತ್ತಿದ್ದಾರೆ ಎಷ್ಟೋ ಮನೆಗೆ ಬೆಳಕಾಗಿದ್ದಾರೆ, ಅವರು ಎಲ್ಲಾ ಕ್ಷೇತಗಳಲ್ಲಿ ನೀಡಿದ ಕೊಡುಗೆ ಎದುರು ನೀವು ಲೆಕ್ಕಕೆ ಇಲ್ಲ ನಿಮಗೆ ಆ ಅರ್ಹತೆಯೂ ಇಲ್ಲ ನಿಮ್ಮ ಪರ ಚಲಾವಣೆಯಾದ ಮತಕ್ಕಿಂತ ನಿಮ್ಮ ವಿರುದ್ದ ಚಲಾವಣೆಯಾದ ಮತಗಳೆ ಹೆಚ್ಚು ಎಂಬುದು ನೆನಪಿರಲಿ ಮಾತಿಗೆ ಹಿಡಿತವಿರಲಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು