News Karnataka Kannada
Friday, April 19 2024
Cricket
ಉಡುಪಿ

ಕಾರ್ಕಳ: ಯೋಗಿಯಂತಹ ನಾಯಕತ್ವ ಬೇಕು, ಭ್ರಷ್ಟಾಚಾರದ ಪೋಷಕರಲ್ಲ, ಮುತಾಲಿಕ್‌

Yogi Adityanath has strictly enforced the ban on cow-slaughter
Photo Credit : News Kannada

ಕಾರ್ಕಳ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಗೋ-ಹತ್ಯೆ ನಿಷೇಧವನ್ನು ಕಟ್ಟುನಿಟ್ಟಿನಿಂದ ಜಾರಿಗೊಳಿಸಿದ್ದಾರೆ. ಅಕ್ರಮ ಕಸಾಯಿಖಾನೆಗಳನ್ನು ಬುಲ್ಡೋಜರ್ ಮೂಲಕ ನೆಲಸಮಗೊಳಿಸಿದ್ದಾರೆ. ರೌಡಿಗಳನ್ನು ಮಟ್ಟ ಹಾಕಿದ್ದಾರೆ ಗೂಂಡಾ ಮಾಫಿಯಾಗಳನ್ನು ಸದೆಬಡಿದಿದ್ದಾರೆ. ಸಮಾಜಘಾತ ಕೃತ್ಯದಲ್ಲಿ ನಿರತರಾಗಿದ್ದ ಸುಮಾರು ೬೦೦ಕ್ಕೂ ಮಿಕ್ಕಿ ಮಂದಿಯನ್ನು ಎನ್‌ಕೌಂಟರ್ ಮೂಲಕ ಅಂತ್ಯಗೊಳಿಸಿದ್ದಾರೆ. ಹಲವಾರು ಗೂಂಡಾಗಳು ಶರಣಾಗಿದ್ದಾರೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ದಾರೆ. ಎಂದು ಶ್ರೀರಾಮ ಸೇವೆಯ ರಾಷ್ಟ್ರೀಯ ಸವೋಚ್ಛ ನಾಯಕ ಪ್ರಮೋದ್ ಮುತಾಲಿಕ್ ಹೇಳಿದರು.

ಕಾರ್ಕಳದ ವಿಧಾನ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ವರ್ಧಿಸುತ್ತಿರುವ ಪ್ರಮೋದ್ ಮುತಾಲಿಕ್ ಅವರು ಬೆಳ್ಮಣ್‌ನಲ್ಲಿ ಆಯೋಜಿಸಿದ ಪ್ರಜಾ-ವಿಜಯ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಸುಪ್ರೀಂ ಕೋರ್ಟ್ ನಿರ್ದೇಶನದಂತೆ ೬೫,೦೦೦ ಮೈಕ್‌ಗಳನ್ನು ಧಾರ್ಮಿಕ ಕೇಂದ್ರಗಳಿಂದ ಕೆಳಗಿಸಿದ್ದಾರೆ. ಈ ಎಲ್ಲಾ ಕಾನೂನು ಬಿಗಿಗೊಳಿಸಿರುವ ಮೂಲಕ ದೇಶಕ್ಕೆ ಮಾದರಿ ಎನ್ನಿಸಿದ್ದಾರೆ. ಅಂತಹವರನ್ನು ಕಾರ್ಕಳದಲ್ಲಿ ಚುನಾವಣೆ ಪ್ರಚಾರಕ್ಕೆ ಕರೆಸಿ ಮತಯಾಚನೆಯಲ್ಲಿ ತೊಡಗಿಸಿಕೊಳ್ಳುವುದು ಬಿಜೆಪಿಯವರ ನೈತಿಕತೆಯ ಅಥಪತನ ಎಂದು ಮುತಾಲಿಕ್ ಎಚ್ಚರಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಅತೀ ಹೆಚ್ಚು ಗೋವುಗಳ ಕಳ್ಳತನ ವಾಗುತ್ತಿರುವ ಕಾರ್ಕಳ ತಾಲೂಕು ಆಗಿದೆ. ಸುಪ್ರೀಂ ಕೋರ್ಟ್ ಅದೇಶದಂತೆ ಧಾರ್ಮಿಕ ಕೇಂದ್ರಗಳಿಂದ ಒಂದೇ ಒಂದು ಮೈಕ್ ಕೆಳಗಿಳಿಸಿದ ಉದಾಹರಣೆ ಇಲ್ಲಿಲ್ಲ. ಯೋಗಿಯ ಅದರ್ಶ ಪರಿಪಾಲನೆ, ಗೋ ಮಾತೆಯ ರಕ್ಷಣೆ, ಹಿಂದುತ್ವ ಪರಿಪಾಲನೆ, ಕ್ಷೇತ್ರದಲ್ಲಿ ಪರಿವರ್ತನೆ, ಪಾರದರ್ಶಕ ಆಡಳಿತಕ್ಕಾಗಿ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಸ್ವರ್ಧಿಸುತ್ತಿದ್ದೇನೆ, ಹೊರತು ಯಾವುದೇ ಅಕ್ರಮ ಸಂಪಾದನೆಗಾಗಿ, ಗಣಿಗಾರಿಕೆ, ಪೆಟ್ರೋಬಂಕ್, ಬಹುಮಹಡಿ ಕಟ್ಟಡ, ಬೇನಾಮಿ ಅಸ್ತಿಯನ್ನು ಕೂಡಿ ಹಿಡುವುದಕ್ಕಾಗಿ ನಾನಿಲ್ಲ ಬಂದಿಲ್ಲ. ಅವೆಲ್ಲವನ್ನು ಮಾಡಿಕೊಂಡರ ಬದವಾವಣೆಗಾಗಿ ನಾನು ಇದೇ ಕ್ಷೇತ್ರದಿಂದ ಸ್ವರ್ಧಿಸುತ್ತಿದ್ದೇನೆ ಎಂದರು.

ಜನನ-ಮರಣ ಇವೆರಡರ ನಡುವೆ ನಾವು ಭಯಮುಕ್ತರಾಗಿ ಬದುಕಬೇಕು. ಈ ನಡುವೆ ಸಮ್ಮ ಸಂಸ್ಕೃತಿ,ಪರಂಪರೆ, ರಕ್ಷಣೆ ಎಂಬಂತೆ ಗೋ,ಸಹೋದರಿಯರು, ಧಾರ್ಮಿಕ ಕೇಂದ್ರಗಳನ್ನು ರಕ್ಷಣೆ ಮಾಡುವಾಗ ಸಾವಾಲಾಗಿ ಬಂದರೆ ಅದನ್ನು ಸ್ವಾಗತಾರ್ಹವಾಗಿ ಸ್ವೀಕರಿಸಬೇಕು.

ಮೇಲಿನ ವಿಚಾರವನ್ನು ಬೆಂಬಲಿಸಿ ಅದನ್ನು ಅನುಷ್ಠಾನಗೊಳಿಸಲು ಮುಂದಾಗುವವರ ಮೇಲೆ ಕೇಸು ದಾಖಲಿಸಿ, ಮಾನಸಿಕ ಧೈರ್ಯವ ನ್ನು ಕುಂದುವಂತೆ ಮಾಡುವುದು ಮಾತ್ರವಲ್ಲ ರೌಡಿ ಲಿಸ್ಟ್ ಸೇರ್ಪಡೆಗೊಳಿಸುವುದು, ಗೂಂಡಾ ಕಾಯಿದೆಯಂತೆ ಕೇಸುದಾಖಲಿಸಿ ಜೈಲು ಪಾಲಾಗುವಂತೆ ಮಾಡುವುದು ಹಿಂದುತ್ವದ ಸಾಧನೆಯೇ ಅಲ್ಲ ಎಂದು ಹೇಳಿದರು.

ಭ್ರಷ್ಟಾಚಾರದ ವಿರುದ್ಧ ಮಾತನಾಡದ ಮಂದಿ ಅದನ್ನು ಪಕ್ಷದ ನೆಲೆಯಲ್ಲಿ ಸಮರ್ಥಿಸಿಕೊಂಡುದನ್ನು ಕಂಡರೆ ಬಿಜೆಪಿಯೂ ಭ್ರಷ್ಟಾಚಾರವನ್ನು ಒಪ್ಪಿಕೊಂಡಂತೆ. ಜಿಲ್ಲೆಯಲ್ಲಿಯೇ ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಭ್ರಷ್ಟಾಚಾರ ತಾಂಡಾವವಾಡುತ್ತಿದೆ. ಏಲ್ಲಾ ದಾಖಲೆಗಳನ್ನು ಲೋಕಾಯುಕ್ತಕ್ಕೆ ಸಲ್ಲಿಸಿ, ದೂರು ನೀಡಿದ್ದೇನೆ. ರಾಜಕೀಯ ಪ್ರಭಾವದಿಂದ ತಿಂಗಳೂ ಉರುಳಿದರೂ ಯಾವುದೇ ಪ್ರಗತಿ ಕಂಡುಬಂದಿಲ್ಲ. ಆರೋಪಕ್ಕೆ ಗುರಿಯಾಗಿರುವ ಶಾಸಕರು ಈ ಕುರಿತು ಇದು ವರೆಗೆ ಸ್ವಷ್ಟೀಕರಣ ನೀಡಿದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ ಎಂದರು.

ಶೇಷ್ಠತೆಯ ಪರ್ಪಲೆ ಕಾಣಲಿಲ್ಲವೇ? ಪರ್ಪಲೆಗಿರಿ ಧಾರ್ಮಿಕ ಕಾರಣಿಕದ ನೆಲೆಬೀಡು. ಅದರ ಅಭಿವೃದ್ಧಿ, ರಸ್ತೆ, ದಾರಿದೀಪ, ಕುಡಿಯುವ ನೀರು ಸಹಿತ ಮೂಲ ಸೌಕರ್ಯಗಳು ಒದಗಿಸಲು ಮೀನಾಮೇಷ ಎಣಿಸಿರುವ ಶಾಸಕರು ಅದೇ ವಿಚಾರದಲ್ಲಿ ಅಲ್ಪ ಸಂಖ್ಯಾತಕರನ್ನು ಓಲೈಸುವ ಸಂಸ್ಕೃತಿಯನ್ನು ಬೆಳೆಸಿದ್ದಾರೆ. ಇದೆನಾ ಅವರ ಹಿಂದುತ್ವ ಎಂದು ಟೀಕಿಸಿದರು.

ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ವಿವಿಧ ಹಂತಗಳಲ್ಲಿ ಸಾವಿರಾರು ಕೋಟಿ ಅನುದಾನಗಳು ತಂದಿರುವುದಾಗಿ ಹೇಳಿಕೆ ನೀಡುವ ಶಾಸಕರು, ತಮ್ಮ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿ ಸ್ವರ್ಣ ಕಾರ್ಕಳವನ್ನಾಗಿ ಮಾಡಬಹುದಿತ್ತು. ಅಂತಹ ಯೋಚನೆ,ಯೋಜನೆ ಮಾಡದೇ ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯ ಕನಸ್ಸು ಕಂಡಿರುವ ಅವರು ಸ್ವರ್ಣ ಕಾರ್ಕಳದ ಹೊಸ ಪರಿಕಲ್ಪನೆಯನ್ನು ಜನರ ಮುಂದಿಟ್ಟು ನಗೆಪಾಟಲಿಗೀಡಾಗಿದ್ದಾರೆ ಎಂದರು.

ಮುಖಂಡರಾದ ಹರೀಶ್ ಅದಿಕಾರಿ ವಿವೇಕಾನಂದ ಶೆಣೈ, ಚಿತ್ತರಂಜನ್ ಶೆಟ್ಟಿ ದಿವ್ಯಾ ನಾಯಕ್, ಕಾಂತಾರಗೋಳಿ ಪ್ರವೀಣ್ ಮೊದಲಾದವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು