News Karnataka Kannada
Wednesday, April 17 2024
Cricket
ಉಡುಪಿ

ಜಾತಿ-ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುವಂತಹ ಕುತಂತ್ರ ನಡೆಯುತ್ತಿದೆ: ಪದ್ಮರಾಜ್

There is a conspiracy to divide people in the name of caste and religion: KPCC working president Padmaraj
Photo Credit : News Kannada

ಕಾರ್ಕಳ: ರಾಷ್ಟ್ರ ಮತ್ತು ರಾಜ್ಯದಲ್ಲಿ ಅಧಿಕಾರದ ಲಾಲಾಸೆಗೆ ಬಿಜೆಪಿಯೂ ಜನರನ್ನು ಭಾವನಾತ್ಮಕವಾಗಿ ಯಮಾರಿಸುತ್ತಿದೆ. ಜಾತಿ-ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುವಂತಹ ಕುತಂತ್ರ ನಡೆಯುತ್ತಿದೆ ಎಂದು ಕೆಪಿಸಿಸಿ ಕಾರ್ಯದರ್ಶೀ ಪದ್ಮರಾಜ್ ಹೇಳಿದರು.

ನಗರದ ಹೊಟೇಲ್‌ವೊಂದರಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಸಕ್ತ ಕಾಲಘಟ್ಟದಲ್ಲಿ ನಡೆಯುತ್ತಿರುವ ಕರ್ನಾಟಕ ವಿಧಾನಸಭಾ ಚುನಾವಣೆಯು ದೇಶದ ರಾಜಕೀಯ ಇತಿಹಾಸವನ್ನೇ ಬದಲಾವಣಿ ತರಲಿದೆ ಎಂಬ ವಿಶ್ವಾಸವನ್ನು ಇದೇ ಸಂದರ್ಭದಲ್ಲಿ ಅವರು ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಭ್ರಷ್ಟಾಚಾರವೇ ತುಂಬಿ ತುಳುಕುತ್ತಿದೆ. ರಸ್ತೆಯೊಂದೇ ಅಭಿವೃದ್ಧಿಯ ಪೂರಕವಲ್ಲ. ರಾಜ್ಯಕ್ಕೆ ಮಾರಕವಾದ ಭ್ರಷ್ಟಾಚಾರವು ತುಂಬಿತುಳುಕುತ್ತಿದೆ. ಇದಕ್ಕೆಲ್ಲ ಕಡಿವಾಣ ಹಾಕುವ ಬದಲಾಗಿ ಭಾರತ ವಿಶ್ವ ಗುರು ಎಂದು ಜನತೆಯ ದಿಕ್ಕು ತಪ್ಪಿಸುವ ಪ್ರಯತ್ನ ಬಿಜೆಪಿ ಮಾಡುತ್ತಿದೆ ಎಂದು ಅವರು ಆರೋಪಿಸಿದರು.

೨೦೧೩-೧೮ರ ತನಕ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ನೀಡಿದ ೧೬೫ ಭರವಸೆಗಳಲ್ಲಿ ೧೫೮ ಪೂರೈಸಿದೆ. ಕಾಂಗ್ರೆಸ್ ಬಡವರ ಪರವಾಗಿರುವ ಪಕ್ಷವಾಗಿದೆ. ವಿಶ್ವಗುರು ಭಾರತವೆಂದು ಘಂಟಾಘೋಷವಾಗಿ ಬಿಜೆಪಿ ಸಾರುತ್ತಿದ್ದರೂ, ದೇಶದಲ್ಲಿ ಯುವಸಮುದಾಯ ವಿಶ್ವದಲ್ಲಿಯೇ ಅತ್ಯಧಿಕ ಸಂಖ್ಯೆಯಲ್ಲಿ ಇದ್ದರೂ ನಿರುದ್ಯೋಗ ಸಮಸ್ಸೆ ತಾಂಡವವಾಡುತ್ತಿದೆ. ಉದ್ಯೋಗ ಸೃಷ್ಠಿಗಾಗಿ ಎಷ್ಟು ಉದ್ಯಮಗಳನ್ನು ಬಿಜೆಪಿ ಸರಕಾರ ಹುಟ್ಟು ಹಾಕಿದೆ ಎಂದು ಅವರು ಪ್ರಶ್ನಿಸಿದರು.

ಪ್ರಸಕ್ತಸಾಲಿನಲ್ಲಿ ಕಾಂಗ್ರೆಸ್ ಪಕ್ಷವು ಮತದಾರರಿಗೆ ನೀಡುವ ಗ್ಯಾರೆಂಟಿಯ ಕುರಿತು ಅನುಮಾನ ಮೂಡಿಸುವ ಬಿಜೆಪಿಗರ ಜಾಯಮಾನವನ್ನು ಖಂಡಿಸಿದ ಅವರು ಬಿಜೆಪಿ ಆಡಳಿತಾವಧಿಯಲ್ಲಿ ನಡೆದಿರುವ ಶೇ.೪೦ ಭ್ರಷ್ಟಾಚಾರದ ಮೊತ್ತದಲ್ಲಿ ಶೇ. ೨೦ರಷ್ಟು ಭಾಗವನ್ನು ಅದಕ್ಕಾಗಿ ವಿನಿಯೋಗಿಸಿದರೆ ಉಳಿದ ಶೇ. ೨೦ ಮೊತ್ತವು ಸರಕಾರ ಖಜಾನೆಯಲ್ಲಿ ಉಳಿತಾಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನ ಅಭ್ಯರ್ಥಿ ಮುನಿಯಾಲು ಉದಯಕುಮಾರ್ ಶೆಟ್ಟಿ ಅವರು ಸಮಾಜ ಮುಖಿ ಕೆಲಸಕಾರ್ಯದಿಂದಾಗಿ ಜನತೆಗೆ ಪರಿಚಿತರು. ವೈದ್ಯಕೀಯ ಕಾಲೇಜಿ, ಕ್ರೀಡಾ ತರಬೇತಿ ಕೇಂದ್ರ, ಐತಿ ಪಾರ್ಕ್ಗಳನ್ನು ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಆರಂಭಿಸುವ ಮೂಲಕ ಕ್ಷೇತ್ರದ ಜನತೆಗೆ ಇದರಿಂದ ಹೆಚ್ಚಿನ ರೀತಿಯಲ್ಲಿ ಪ್ರಯೋಜನ ಪಡೆಯಲಿದ್ದಾರೆ. ಅವರು ಕ್ಷೇತ್ರದ ಶಾಸಕರಾಗಿ ಆಯ್ಕೆಗೊಳ್ಳುವ ಮೂಲಕ ಇವೆಲ್ಲವೂ ಕಾರ್ಯರೂಪಕ್ಕೆ ಬರಲಿದೆ ಎಂದರು.

ಮುಖಂಡರಾದ ಸದಾಶಿವ ದೇವಾಡಿಗ, ಸುಭೀತ್ ಎನ್.ಆರ್, ಜಾನ್‌ಕ್ಯಾಸ್ಟೋಲಿನೋ, , ಶೇಖರ್ ಮಡಿವಾಳ ಮೊದಲಾದವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು