News Kannada
Wednesday, May 31 2023
ಉಡುಪಿ

ಉಡುಪಿ: ಲುಂಗಿಯಲ್ಲಿ ಮೊಬೈಲ್ ಅಡಗಿಸಿಟ್ಟುಕೊಂಡು ಬಂದ ಬಿಜೆಪಿ‌ ಅಭ್ಯರ್ಥಿಯ ಏಜೆಂಟ್

Udupi: BJP candidate's agent hides mobile phone in lungi
Photo Credit : News Kannada

ಉಡುಪಿ: ಉಡುಪಿಯ ಮತ ಎಣಿಕಾ ಕೇಂದ್ರಕ್ಕೆ ತನ್ನ ಲುಂಗಿಯಲ್ಲಿ ಮೊಬೈಲ್ ಅಡಗಿಸಿಟ್ಟು ಕೊಂಡು ಬಂದ ವ್ಯಕ್ತಿಯನ್ನು ಹೊರ ಕಳಿಸಿದ ಘಟನೆ ಇಂದು ಬೆಳಗ್ಗೆ ನಡೆದಿದೆ.

ಈ ವ್ಯಕ್ತಿ ಬೈಂದೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಅವರ ಏಜೆಂಟ್ ಎಂದು ತಿಳಿದುಬಂದಿದೆ. ಕೇಂದ್ರದೊಳಗೆ ಮೊಬೈಲ್ ನಿರ್ಬಂಧ ವಿಧಿಸಿದ್ದರೂ ಈ ವ್ಯಕ್ತಿ ತನ್ನ ಲುಂಗಿಯಲ್ಲಿ ಮೊಬೈಲ್ ಅನ್ನು ಕಟ್ಟಿಕೊಂಡು ಬಂದಿದ್ದರನ್ನಲಾಗಿದೆ.

ಮೊದಲ ಪ್ರವೇಶದಲ್ಲಿ ಪೊಲೀಸರ ಗಮನಕ್ಕೆ ಬಾರದಂತೆ ಒಳಗೆ ಬಂದ ಈ ವ್ಯಕ್ತಿಯನ್ನು ಎರಡನೇ ದ್ವಾರದಲ್ಲಿ ಪೊಲೀಸರು ತಪಾಸಣೆಗೆ ಒಳಪಡಿಸಿದರು. ಈ ವೇಳೆ ಖುದ್ದು ಎಸ್ಪಿ ಅಕ್ಷಯ ಹಾಕೇ ಮಚ್ಚಿಂದ್ರ ಸ್ಥಳದಲ್ಲಿದ್ದರು.

ತಪಾಸಣೆ ನಡೆಸಿದಾಗ ಆ ವ್ಯಕ್ತಿಯ ಲುಂಗಿಯಲ್ಲಿ ಮೊಬೈಲ್ ಕಟ್ಟಿರುವುದು ಪತ್ತೆಯಾಗಿದೆ. ಬಳಿಕ ಆ ವ್ಯಕ್ತಿಯನ್ನು ಕೇಂದ್ರದಿಂದ ಹೊರಗೆ ಕಳುಹಿಸಲಾಯಿತು ಎಂದು ತಿಳಿದುಬಂದಿದೆ.

See also  ಚಿನ್ನಾಭರಣ ಕಳವು ಪ್ರಕರಣದ ನಾಲ್ವರು ಆರೋಪಿಗಳ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು