News Karnataka Kannada
Thursday, March 28 2024
Cricket
ಉಡುಪಿ

ಉಡುಪಿ: ಮಿಷನ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣಾ ಶಿಬಿರ ಉದ್ಘಾಟನೆ

Udupi: Medical check-up camp inaugurated at Mission Hospital
Photo Credit : News Kannada

ಉಡುಪಿ: ಲೊಂಬಾರ್ಡ್ ಮೆಮೊರಿಯಲ್ ಆಸ್ಪತ್ರೆ ಉಡುಪಿ ,ಹಿರಿಯ ನಾಗರಿಕರ ಸಂಘ, ಗಿರಿಜಾ ಹೆಲ್ತ್ ಕೇರ್, ಲಯನ್ಸ್ ಮತ್ತು ಲಿಯೋಕ್ಲಬ್ ಉಡುಪಿ ಇಂದ್ರಾಳಿ’ ಲಯನ್ಸ್‌ ಕ್ಲಬ್ ಉಡುಪಿ ಅಮೃತ್, ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ,ಭಾರತೀಯ ಜನ ಔಷಧಿ ಕೇಂದ್ರ ಅಜ್ಜರಕಾಡು, ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ವೈದ್ಯಕೀಯ ಪ್ರತಿನಿಧಿಗಳ ಸಂಘ ಉಡುಪಿ ಇದರ ಜಂಟಿ ಆಶ್ರಯದಲ್ಲಿ ಹಿರಿಯ ನಾಗರಿಕರಿಗೆ ಮತ್ತು ಸಾರ್ವಜನಿಕರಿಗೆ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಉಡುಪಿ ಮಿಷನ್ ಆಸ್ಪತ್ರೆಯ ಆವರಣದಲ್ಲಿ ಇಂದು ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಡಗುಬೆಟ್ಟು ಸೊಸೈಟಿಯ ಪ್ರಮುಖರಾದ ಜಯಕರ್ ಶೆಟ್ಟಿ ಇಂದ್ರಾಳಿ, ಈ ಮಿಷನ್ ಆಸ್ಪತ್ರೆ ನೂರು ವಸಂತಗಳನ್ನು ಕಳೆದಿದೆ ಇದು ಕೇವಲ ಆಸ್ಪತ್ರೆ ಸೇವೆ ಅಲ್ಲದೆ ವಿವಿಧ ರೀತಿಯ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಹಿರಿಯ ನಾಗರಿಕರಿಗೆ ಆಶ್ರಯ ಮತ್ತು ಚಿಕಿತ್ಸೆ ಕೇಂದ್ರಗಳನ್ನು ಸ್ಥಾಪಿಸಿ, ಸಾರ್ವಜನಿಕರಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.ಈ ಆಸ್ಪತ್ರೆ ಉಡುಪಿ ಜಿಲ್ಲೆಯ ಹೆಮ್ಮೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆಸ್ಪತ್ರೆಯ ನಿರ್ದೇಶಕರಾದ ಡಾ. ಸುಶೀಲ್ ಜತ್ತನ್ನ ಮಾತನಾಡಿ ವಿವಿಧ ‘ ರೀತಿಯ ಆಧುನಿಕ ಚಿಕಿತ್ಸೆ ಸೌಲಭ್ಯಗಳೊಂದಿಗೆ ಈ ಆಸ್ಪತ್ರೆಯು ಮುಂದುವರಿತಿದೆ ಜೂನ್ ತಿಂಗಳಲ್ಲಿ ಈ ಆಸ್ಪತ್ರೆಗೆ ನೂರು ವರ್ಷ ಸಲ್ಲುತ್ತಿದೆ ಇದು ನಮಗೆಲ್ಲ ಸಂತೋಷದ ವಿಷಯ ಎಂದರು.

ವೇದಿಕೆಯಲ್ಲಿ ಹಿರಿಯ ನಾಗರಿಕ ಸಂಘದ ಉಪಾಧ್ಯಕ್ಷರಾದ ನಾಗರಾಜ್, ಗೌರವಾಧ್ಯಕ್ಷ ವಿಶ್ವನಾಥ್ ಹೆಗಡೆ, ಲಯನ್ಸ್ ಕ್ಲಬ್ ಉಡುಪಿ ಇಂದ್ರಾಳಿ ಅಧ್ಯಕ್ಷ ಮೋಹನ್ ಶೆಟ್ಟಿ ,ಉಡುಪಿ ಅಮೃತ್ ಅಧ್ಯಕ್ಷರಾದ ಜಯಪ್ರಕಾಶ್ ಭಂಡಾರಿ,ಸುವರ್ಣ ಎಂಟರ್ಪ್ರೈಸಸ್ ಮುಖ್ಯಸ್ಥರಾದ ಮಧುಸೂದನ್ ಹೇರೂರು, ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮವರ ಅಧ್ಯಕ್ಷ ವಿವೇಕಾನಂದ ಕಾಮತ್ ,ಜನ ಔಷಧಿ ಕೇಂದ್ರದ ಪ್ರಮುಖರಾದ ಮಿಲ್ಟನ್ ,ಉದ್ಯಮಿ ಮಹಮ್ಮದ್ ಮೌಲಾ , ಬಡಬಟ್ಟು ಎಡಿಟ್ ಕೋ ಆಪರೇಟಿವ್ ಸೊಸೈಟಿ ಜನರಲ್ ಮ್ಯಾನೇಜರ್ ರಾಜೇಶ್ ಸೇರಿಗಾರ್ ವೈದ್ಯಕೀಯ ಪ್ರತಿನಿಧಿ ಸಂಘದ ಕಾರ್ಯದರ್ಶಿ ಪ್ರಸನ್ನ ಕಾರಂತ್ ಮುಂತಾದವರು ಉಪಸ್ಥಿತರಿದ್ದರು. ಈ ಶಿಬಿರದಲ್ಲಿ ತಜ್ಞರುಗಳಾದ ಡಾ. ಆರ್. ಶ್ರೀಪತಿ ಡಾ. ದೀಪಾ ವೈ. ರಾವ್ ಡಾ. ಪವಿತ್ರ, ಡಾ. ಅರ್ಜುನ್ ಬಳ್ಳಾಲ್, ಡಾ. ರೂಪಶ್ರೀ ಡಾ. ಗಣೇಶ್ ಕಾಮತ್ ,ಡಾ. ನಾಗೇಶ ನಾಯಕ್ ಡಾ. ಸಾರಿಕಾ ಮುಂತಾದವರು ಸಹಕರಿಸಿದರು ರೋಹಿರತ್ನಾಕರ್ ಸ್ವಾಗತಿಸಿದರು. ರೆ| ರಾಚಲ್ ಪ್ರಾಥಿ೯ಸಿದರು.ವೈದ್ಯಕೀಯ ಪ್ರತಿನಿಧಿ ರಾಘವೇಂದ್ರ ಪ್ರಭು, ಕವಾ೯ಲ್ ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು