News Karnataka Kannada
Wednesday, April 17 2024
Cricket
ಉಡುಪಿ

ವಿ.ಸುನೀಲ್ ಕುಮಾರ್ ೫೦ ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ- ಮಹೇಶ್ ಕುಡುಪುಲಾಜೆ

V Sunil Kumar will win by a margin of 50,000 votes: Mahesh Kudupulaje
Photo Credit : News Kannada

ಕಾರ್ಕಳ: ಪ್ರದಾನಿ ನರೇಂದ್ರ ಮೋದಿ ಹಾಗೂ ಸಚಿವ ವಿ.ಸುನೀಲ್ ಕುಮಾರ್ ನಮಗೆ ಅದರ್ಶರು. ಹಿಂದುತ್ವ ಹಾಗೂ ಅಭಿವೃದ್ಧಿಯೇ ನಮ್ಮ ಧ್ಯೇಯ ಉದ್ದೇಶವಾಗಿದೆ. ಕಾರ್ಕಳ ವಿಧಾನ ಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ವಿ.ಸುನೀಲ್ ಕುಮಾರ್ ಅವರು ೫೦ ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಚುನಾವಣೆ ಉಸ್ತುವಾರಿ ಸಮಿತಿಯ ಅಧ್ಯಕ್ಷ ಹಾಗೂ ಉದ್ಯಮಿ ಮಹೇಶ್ ಕುಡುಪುಲಾಜೆ ವಿಶ್ವಾಸ ವ್ಯಕ್ತಪಡಿಸಿದರು.

ಸುನೀಲ್ ಕುಮಾರ್ ಅವರ ವಿಕಾಸ ಕಚೇರಿಯಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಅಭಿವೃದ್ಧಿಯಲ್ಲಿ ಏನೆಂಬುವುದನ್ನು ಕ್ಷೇತ್ರದ ನಾಗರಿಕರ ಕಣ್ಣಮುಂದೆ ಕಾಣಸಿಗುತ್ತಿದೆ. ಸುನೀಲ್ ವರ್ಚಸನ್ನು ಕಂಡು ಅಸೂಯೆ ಪಟ್ಟು ಅವರ ಮೇಲೆ ವಿನಾಕಾರಣ ಆರೋಪಗಳ ಸುರಿಮಳೆ ಗೈಯುತ್ತಿದ್ದಾರೆ. ಕಾರ್ಕಳ ನಾಗರಿಕರಿಗೆ ಸಿಗದ ಮಾಹಿತಿಗಳು ಪಕ್ಷೇತರ ಅಭ್ಯರ್ಥಿ ಪ್ರಮೋದ್ ಮುತಾಲಿಕ್ ಗೆ ಎಲ್ಲಿಂದ ಸಿಗುತ್ತದೆ. ಅವರೇನು ಹಿಂದು ಮುಖಂಡರೋ? ರಾಜಕರಣಿಯೋ? ಅಥವಾ ಮಾಹಿತಿ ಹಕ್ಕುದಾರರೋ ಎಂಬ ಜಿಜ್ಞಾಸೆ ವ್ಯಕ್ತಪಡಿಸಿದರು.

ಮಾತು ಮುಂದುವರಿಸಿದ ಅವರು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಂದ ಹಿಂದುತ್ವದ ಗಿಳಿಪಾಠ ಕಲಿಯುವ ಅಗತ್ಯತೆ ಬಿಜೆಪಿಗರಿಗಿಲ್ಲ. ಅವರ ಆರೋಪಗೆಳೆವೂ ಪೊಟ್ಟು ಪಟಾಕಿ ಎಂದು ವ್ಯಂಗ್ಯವಾಡಿದರು.

ಜಾತಿ ಆಧರಿತ ಮೇಲೆ ನಡೆಯುವ ಚುನಾವಣೆ ಇದಲ್ಲ. ಏನಿದ್ದರೂ ಇಲ್ಲಿ ಪಕ್ಷ ಹಾಗೂ ಸೈದ್ಧಾಂತಿಕ ಸಿದ್ಧಾಂತದ ಮೇಲೆ ನಡೆಯುವ ಚುನಾವಣೆ ಇದಾಗಿದೆ. ಹಿಂದುತ್ವ ಅನ್ನುವುದು ಜೀವನ ಪದ್ಧತಿಯಾಗಿದೆ ಹೊರತು ಮತ್ತೊಬ್ಬರ ಬದುಕಿನೊಂದಿಗೆ ಚೆಲ್ಲಾಟವಾಡುವುದಲ್ಲ. ಕೂಡಿ ಬಾಳುವುದರಿಂದ ಎಲ್ಲರ ವಿಕಾಸಕ್ಕೆ ಬುನಾದಿಯಾಗುತ್ತದೆ. ಇಂತಹ ಸಿದ್ಧಾಂತವೇ ನಮ್ಮೆಲ್ಲರ ಬದುಕಿಗೆ ಪ್ರೇರಣೆಯಾಗಿದೆ. ನಮಗೆ ಹಿಂದುತ್ವ ಎನ್ನುವುದನ್ನು ಯಾರಿಮದಲೂ ಕಲಿಸುವ ಅಗತ್ಯ ಇಲ್ಲ. ಕಾರ್ಕಳವು ಶಾಂತಿ ಸಹಬಾಳ್ವೆಯ ಊರು ಆಗಿದೆ ಎಂದು.

ಈ ಹಿಂದೆ ಸುನೀಲ್ ಕುಮಾರ್ ಹಮ್ಮಿಕೊಂಡಿದ್ದ ಸ್ವರ್ಣ ಕಾರ್ಕಳ, ಸ್ವಚ್ಛ ಕಾರ್ಕಳದ ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಈ ಚುನಾವಣೆಯಲ್ಲಿ ಸುನೀಲ್ ಕುಮಾರ್ ಅವರನ್ನು ಗೆಲ್ಲಿಸೋಣ. ಅವರ ಕನಸ್ಸು ನನಸಾಗಿಸೋಣ ಎಂದರು.

ಕರೋನಾ ಸಂಕಷ್ಟದ ದಿನಗಳಲ್ಲಿ ಪರವೂರುಗಳಲ್ಲಿ ಸಿಲುಕಿಕೊಂಡಿದ್ದ ಸಾವಿರಾರು ಮಂದಿಯನ್ನು ಊರಿಗೆ ಬರಲು ಎಲ್ಲ ರೀತಿಯಲ್ಲಿ ಸಹಕಾರ ನೀಡಿದವರೇ ಸುನೀಲ್ ಕುಮಾರ್ ಆಗಿದ್ದಾರೆ. ಊರಿಗೆ ಬಂದವರಿಗೆ ಕ್ವಾರೆಂಟನ್ ವ್ಯವಸ್ಥೆ ಕಲ್ಪಿಸಿ ಅಲ್ಲಿ ಊಟೋಪಚಾರದ ವ್ಯವಸ್ಥೆಯನ್ನು ಮಾಡಿದವರು. ಇದು ಎಂದಿಗೂ ಮರೆಯಲಾಗದ ನೆರವಿನ ಕಾಣಿಕೆಯಾಗಿದೆ. ಹೊರ ಜಿಲ್ಲೆ, ಹೊರದೇಶಗಳಲ್ಲಿ ಕನ್ನಡಿಗ ಸಂಕಷ್ಟದಲ್ಲಿ ಇದ್ದಾಗ ಅವರ ನೆರವಿಗೆ ಮುಂದಾಗುವವರಲ್ಲಿ ಮುಂಚೂಣಿಯಲ್ಲಿ ಇದ್ದವರು ಸುನೀಲ್ ಆಗಿದ್ದಾರೆ. ಅವರಿಂದಾಗಿ ಹಲವು ಮಂದಿ ಸಂಕಷ್ಟದಿAದ ಪರಾಗಿ ಊರಿಗೆ ಮರಳಿದ್ದಾರೆ ಎಂಬುವುದನ್ನು ಇದೇ ಸಂದರ್ಭದಲ್ಲಿ ಸ್ಮರಿಸಿಕೊಂಡರು.

ಬಿಜೆಪಿ ಮುಖಂಡ ಅನಂತಕೃಷ್ಣ ಶೆಣೈ, ವಕ್ತಾರ ಸಾಣೂರು ನರಸಿಂಹ ಕಾಮತ್ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು