News Karnataka Kannada
Saturday, April 20 2024
Cricket
ಉತ್ತರಕನ್ನಡ

ಆಝಾದಿ ಕಾ ಅಮೃತ್ ಮಹೋತ್ಸವ ಭಾರತೀಯ ನೌಕಾಪಡೆಯಿಂದ ಆಕರ್ಷಕವಾಗಿ ನಡೆಯಿತು

New Project (43)
Photo Credit :

ಕಾರವಾರ : ಭಾರತದ ಸ್ವಾತಂತ್ರ‍್ಯದ 75 ನೇ ವಾರ್ಷಿಕೋತ್ಸವವನ್ನು “ಆಝಾದಿ ಕಾ ಅಮೃತ್ ಮಹೋತ್ಸವ” ಎಂದು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಸ್ವಾತಂತ್ರ್ಯೋತ್ಸವದ ಸವಿನೆನಪಿಗಾಗಿ ಉತ್ತರಕನ್ನಡ ಜಿಲ್ಲೆಯ ಕಾರವಾರದ ಅರ್ಗಾದಲ್ಲಿರುವ ಐಎನ್‌ಎಸ್ ಕದಂಬ ನೌಕಾನೆಲೆಯಲ್ಲಿಯೂ ಸಹ ಸರಣಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.

ದೇಶದ ಅತೀ ದೊಡ್ಡ ಹೆಮ್ಮೆಯ ಏರ್‌ಕ್ರಾಪ್ಟ್ ಕ್ಯಾರಿಯರ್ ಐಎನ್‌ಎಸ್ ವಿಕ್ರಮಾದಿತ್ಯದ `ಮಿಷನ್ 75 ಸಿಬ್ಬಂದಿಗಳು 75 ಗಂಟೆಗಳ ಶ್ರಮದಾನ ಹಮ್ಮಿಕೊಂಡಿದ್ದರು. ಈ ಮಿಷನ್ ಅಡಿಯಲ್ಲಿ ಕಾರವಾರದ ಆಶಾನಿಕೇತನ ಕಿವುಡ ಮಕ್ಕಳ ಶಾಲೆ ಯನ್ನು ಬಣ್ಣ ಬಳಿದು ಆವರಣ ಸ್ವಚ್ಛಗೊಳಿಸಿ ಸುಂದರವಾಗಿಸಿದ್ದು ವಿಶೇಷವಾಗಿತ್ತು.

ಇನ್ನು ಭಾರತೀಯ ನೌಕಾಪಡೆಯ 75 ಸಿಬ್ಬಂದಿಗಳಿಂದ ರಕ್ತದಾನ, 75 ಸಸಿಗಳ ನೆಡುತೋಪು, 75 ಸಿಬ್ಬಂದಿಗಳಿಂದ 7.5 ಕಿಮೀ ಬೀಚ್ ವಿಸ್ತಾರವನ್ನು ಸ್ವಚ್ಛಗೊಳಿಸಿದ್ದು ಹಾಗೂ ಫಿಟ್ ಇಂಡಿಯಾ ಅಭಿಯಾನಕ್ಕೆ ಅನುಗುಣವಾಗಿ, 75 ಸಿಬ್ಬಂದಿಗಳು 7.5 ಕಿಮೀ ಓಟದಲ್ಲಿ ಭಾಗವಹಿಸಿ ಮಹೋತ್ಸವವನ್ನು ಅತ್ಯಂತ ಸ್ಮರಣೀಯವನ್ನಾಗಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು