ಅಂಕೋಲಾ: ಕಾನೂನುಬಾಹಿರವಾಗಿ ಮದ್ಯ ಸಾಗಣೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಅಂಕೋಲಾ ಪೊಲೀಸರು ಗುರುವಾರ ತಡರಾತ್ರಿ ಬಂಧಿಸಿ, 35,000 ಮೌಲ್ಯದ ಮದ್ಯ ವಶಕ್ಕೆ ಪಡೆದಿದ್ದಾರೆ.
ಚಂದ್ರಶೇಖರ ಮಡಿವಾಳ (52), ಸಂಕೇತ ನಾಯಕ(20) ಮತ್ತು ಅಭಿಷೇಕ್ ಮಂಜುನಾಥ (23) ಬಂಧಿತ ಆರೋಪಿಗಳು. ಅಂಕೋಲಾದಿಂದ ಸುಂಕಸಾಳದೆಡೆಗೆ ಫೋರ್ಡ್ ಕಾರಿನಲ್ಲಿ ರಾತ್ರಿಯ ವೇಳೆ ಮದ್ಯ ಸಾಗಿಸುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.
ಸಿಪಿಐ ಸಂತೋಷ ಶೆಟ್ಟಿ ನೇತೃತ್ವದಲ್ಲಿ ಸಿಬ್ಬಂದಿ ಮಂಜುನಾಥ ಲಕ್ಮಾಪೂರ, ಸುರೇಶ ಬೆಳ್ಳುಳ್ಳಿ ಮತ್ತು ಶೇಖರ ಎಸ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.