ಚಿಕ್ಕೋಡಿ: ಗ್ರಾಮ ಅಭಿವೃದ್ಧಿಯಿಂದ ರಾಮರಾಜ್ಯದ ಕನಸು ಸಾಕಾರವಾಗುತ್ತೆ ಆ ನಿಟ್ಟಿನಲ್ಲಿ ಬಿ.ಜೆ.ಪಿ ಕಾರ್ಯೋನ್ಮೂಖವಾಗಿದೆ. ಚಿಕ್ಕೋಡಿ, ಬೆಳಗಾವಿ ಜಿಲ್ಲೆಯಲ್ಲಿ ಜನ ಸ್ವರಾಜ್ಯ ಸಮಾವೇಶದ ಕೊನೆಯ ದಿನ ವಾಗಿದ್ದು, ಎರಡು ಕ್ಷೇತ್ರಗಳಲ್ಲಿ ಒಬ್ಬ ಮಾತ್ರ ಅಭ್ಯರ್ಥಿ ಘೊಷಿಸಿ ಒಟ್ಟು 25 ಕ್ಷೇತ್ರ ಪೈಕಿ 20 ಅಭ್ಯರ್ಥಿಗಳ ಪಟ್ಟಿ ಬಿ.ಜೆ.ಪಿ ಬಿಡುಗಡೆ ಮಾಡಿದೆ.
ಕಾಂಗ್ರೆಸ್ ಅವರದ್ದರೆ ಕಾರಣದಿಂದಾಗಿ ಅಭ್ಯರ್ಥಿ ಘೋಷಿಸಿಲ್ಲ. ಜೆ.ಡಿ.ಎಸ್ ಅಭ್ಯರ್ಥಿಗಳು ಇಲ್ಲದ ಕ್ಷೇತ್ರಗಳಲ್ಲಿ ಬಿ.ಜೆ.ಪಿ ಬೆಂಬಲಿಸುವಂತೆ ಕುಮಾರಸ್ವಾಮಿ ಹಾಗು ದೇವೆಗೌಡರಿಗೆ ಮನವಿ ಮಾಡಲಾಗುವದು ಎಂದು ಮಾಜಿ ಮುಖ್ಯ ಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು.
ಚಿಕ್ಕೋಡಿ ಪಟ್ಟಣದ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲೆಡೆ 4 ತಂಡವಾಗಿ ಬಿ.ಜೆ.ಪಿ ಪ್ರಚಾರ ನಡೆಸುತ್ತಿದೆ. ನಮ್ಮ ಸರ್ಕಾರದಲ್ಲಿ ಗ್ರಾಮ ಪಂಚಾಯತ್ ಸದಸ್ಯರ ಗೌರವ ಧನವನ್ನು 250 ರಿಂದ 1000 ರೂ.ಗೆ ಏರಿಸುವ ನಿರ್ಮಾಣ ಕೈಗೊಳಾಲಾಗಿದೆ. ವಿಶೇಷವಾಗಿ ಗ್ರಾಮದ ಬಡ ಜನರಿಗೆ 8 ಕೋಟಿಗೂ ಹೆಚ್ವು ಉಚಿತ ಸಿಲಿಂಡರ್, ಗ್ರಾಮ ಸಡಕ ಯೋಜನೆ,ಮನೆ ಕಟ್ಟುವ ಯೋಜನೆ, ಎಸ್.ಸಿ ಕಾಲನಿಗಳಲ್ಲಿ ರಸ್ತೆ ಡಾಂಬರಿಕರಣ, ಜಲಜೀವನಮಿಷನ್ ಮೂಲಕ ಮನೆಮನೆಗೆ ನಲ್ಲಿ ನೀರು ವದಗಿಸುವ ಕೇಂದ್ರ ಯೋಜನೆ ಜಾರಿಯಲ್ಲಿದೆ.
ಎಲ್ಲ ಸ್ಥಳಿಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ 50% ಮೀಸಲಾತಿ ನೀಡಿದ್ದೇವೆ.ಗ್ರಾಮದ ವಿಕಾಸ ಹಾಗು ಅಧಿಕಾರದ ವೀಕೇಂದ್ರಕರಣ ಪ್ರಧಾನಿಯವರು ಒತ್ತು ನೀಡಿದ್ದಾರೆ.
ಆಡಳಿತ ಸುಧಾರಣೆಗೆ ಪಟ್ಟಣ, ತಾಲುಕು, ಜಿಲ್ಲೆ ನೂತನವಾಗಿ ರಚಣೆ ಮಾಡಲಾಗಿದೆ. ವಿಪಕ್ಷ ಬರಿ ಟೀಕಾ ಟಿಪ್ಪಣಿ ಮಾಡದೆ
ಅಭಿವೃದ್ಧಿಗೆ ಸಲಹೆ, ಸೂಚನೆ ನೀಡಿದರೆ ಅದನ್ನು ಸ್ವಾಗತಿಸುತ್ತವೆ.
ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 8942 ಮತದಾರರಿದ್ದು, ಮಹಾಂತೇಶ ಕವಟಗೀಮಠ ಎರಡು ಬಾರಿ ಗೆದ್ದು ಜನಪ್ರಿಯ ಕಾರ್ಯ ಮಾಡಿದ್ದು, ಮೂರನೇ ಬಾರಿ ಮೊದಲ ಸುತ್ತನಲ್ಲಿ ಗೆಲ್ಲುವ ನಿಟ್ಟಿನಲ್ಲಿ ಮತದಾರರು ನಮ್ಮ ಅಭ್ಯರ್ಥಿಗಳಿಗೆ ಮತ ನೀಡುವ ವಿಶ್ವಾಸ ವ್ಯಕ್ತ ಪಡಿಸಿದರು.ರಾಜ್ಯದಲ್ಲಿ ಕನಿಷ್ಠ 15 ಕ್ಷೇತ್ರ ಗೆಲ್ಲುವುದು ಖಚಿತ ಎಂದರು.