ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ನದಿಗಳಲ್ಲಿ ಒಂದಾದ ಅಘನಾಶಿನಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ ಎಂದು ಕೇಂದ್ರಿಯ ಜಲ ಪ್ರಾಧಿಕಾರ ವರದಿ ನೀಡಿದೆ.
ನದಿ ಪಾತ್ರದ ಸಂತೇಗುಳಿ ಕೇಂದ್ರವನ್ನು ಆಧರಿಸಿ ವರದಿ ನೀಡಲಾಗಿದ್ದು ಪ್ರಾಧಿಕಾರದ ಪ್ರಕಾರ ನದಿ ನೀರಿನ ಮಟ್ಟ 14 ಮೀ ತಲುಪಿದರೆ ಎಚ್ಚರಿಕೆ ಹಂತವಾಗಿದ್ದು 17 ಮೀ ತಲುಪಿದರೆ ಅಪಾಯಕಾರಿ ಹಂತವಾಗಿದೆ.
ಜುಲೈ 16 ರ ಮದ್ಯಾಹ್ನ 2 ಗಂಟೆಗೆ ನದಿ 17.1 ಮೀ ಮಟ್ಟದಲ್ಲಿ ಹರಿಯುತ್ತಿದ್ದು ಅಪಾಯಕಾರಿ ಹಂತ ತಲುಪಿದೆ.
ಈ ಕುರಿತು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.