ಆಗುಂಬೆ: ನಾಲ್ಕನೇ ತಿರುವಿನಲ್ಲಿ ಭೂಕುಸಿತ ಕಾಣಿಸಿಕೊಂಡಿದ್ದ ಆಗುಂಬೆ ಘಾಟಿಯಲ್ಲಿ ಈಗ ಮೂರನೇ ತಿರುವಿನ ರಸ್ತೆಯಲ್ಲಿ ಬಿರುಕು ಕಂಡಿದ್ದು ಮತ್ತಷ್ಟು ಆತಂಕ ಹೆಚ್ಚಿಸಿದೆ.
ಈ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭೂಕುಸಿತಗಳೂ ಹೆಚ್ಚುತ್ತಿದ್ದು, ತಿರುವಿನಲ್ಲಿ ಕಾಣಿಸಿಕೊಂಡಿರುವ ಬಿರುಕು ಅಪಾಯದ ಕರೆಗಂಟೆಯಂತೆ ಭಾಸವಾಗಿದೆ.
ಮಳೆನೀರು ಈ ಭಾಗದ ತಿರುವುಗಳ ತಡೆಗೋಡೆಯ ಬದಿ ರಭಸವಾಗಿ ಹರಿಯುತ್ತಿರುವುದೂ ಬಿರುಕು ಕಾಣಿಸಿಕೊಳ್ಳಲು ಕಾರಣ ಎಂದು ಅಂದಾಜಿಸಲಾಗಿದೆ. ಈಗಾಗಲೇ ಈ ದಾರಿಯಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.