News Kannada
Thursday, August 11 2022

ಉತ್ತರಕನ್ನಡ

ಕಾರವಾರ: ಮೂಲಭೂತ ಸೌಕರ್ಯಗಳ ಕಾಮಗಾರಿ ಶೀಘ್ರವೇ ಮುಗಿಸಿ ಎಂದ ಕೋಟ ಶ್ರೀನಿವಾಸ ಪೂಜಾರಿ - 1 min read

Karwar: Kota Srinivas Poojary says basic amenities will be completed soon

ಕಾರವಾರ: ಜಿಲ್ಲೆಯಲ್ಲಿ ಕೈಗೊಂಡಿರುವ ಮೂಲಭೂತ ಸೌಕರ್ಯಗಳ ಕಾಮಗಾರಿಗಳನ್ನು ನಿರ್ಧಿಷ್ಟ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಖಾರ್ಲೆಂಡ, ಆಸ್ಪತ್ರೆ ಮತ್ತು ರಸ್ತೆ ಮುಂತಾದ ಮೂಲಭೂತ ಸೌಕರ್ಯಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ೩೦೦ ಕೋಟಿ ವೆಚ್ಚದಲ್ಲಿ ೬೮ ಖಾರ್ಲೆಂಡ ನಿರ್ಮಾಣ ಕಾಮಗಾರಿ ಇದ್ದು ೩೩ ಕಾಮಗಾರಿಗಳು ನಡೆಯುತ್ತಿದ್ದು ೨೯ ಕಾಮಗಾರಿಗಳು ಆಗಸ್ಟ್ ೧೨ ರ ಒಳಗಾಗಿ ಹಾಗೂ ೬ ಕಾಮಗಾರಿಯನ್ನು ಪುನಃ ಟೆಂಡರ್ ಕರೆದು ಒಂದು ತಿಂಗಳೊಳಗಾಗಿ ಆದೇಶ ಪ್ರತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪಶ್ಚಿಮ ವಾಹಿನಿಯಲ್ಲಿ ಹರಿದು ಹೋಗಿ ಸಮುದ್ರ ಸೇರುವಂತಹ ನೀರನ್ನು ಶೇಖರಿಸಲು ೧೦೦ ಕೋಟಿ ವೆಚ್ಚದಲ್ಲಿ ೭೭ ಸಣ್ಣ ಅಣೆಕಟ್ಟು ಕಾಮಗಾರಿಯಲ್ಲಿ ೬೭ ಕಾಮಗಾರಿಗೆ ಆದೇಶವಾಗಿದ್ದು ಅದರಲ್ಲಿ ಅಂದಾಜು ೨೭ ಕಾಮಗಾರಿಗಳು ಪೂರ್ಣಗೊಂಡಿದ್ದು, ಇನ್ನುಳಿದ ಕಾಮಗಾರಿಗಳನ್ನು ಆಗಸ್ಟ್ ೧೨ರ ಒಳಗಾಗಿ ಪ್ರಾರಂಭಿಸಿ ಮುಂದಿನ ಕೆ.ಡಿ.ಪಿ ಸಭೆಯಲ್ಲಿ ಕಾಮಗಾರಿ ಬಗ್ಗೆ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಒಟ್ಟು ೨೮ ಸೇತುವೆ ಕಾಮಗಾರಿ ಇದ್ದು ಅದರಲ್ಲಿ ಪ್ರಮುಖ ೬ ಸೇತುವೆ ಕಾಮಗಾರಿಗಳಲ್ಲಿ ಬಾಗಶಃ ೩ ಕಾಮಗಾರಿಗಳು ಪೂರ್ಣಗೊಂಡಿವೆ. ೨೨ ಚಿಕ್ಕ ಸೇತುವೆ ಕಾಮಗಾರಿಗಳಲ್ಲಿ ೯ ಸೇತುವೆ ಕಾಮಗಾರಿಪೂರ್ಣಗೋಂಡಿದ್ದು, ಬಾಕಿ ಉಳಿದ ಸೇತುವೆ ಕಾಮಗಾರಿಯನ್ನು ಮಾರ್ಚ ೨೦೨೩ ಒಳಗಾಗಿಪೂರ್ಣಗೊಳಿಬೇಕು, ಇಲ್ಲವಾದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ರಸ್ತೆ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಆಸ್ಪತ್ರೆ ೬ ಮಹಡಿ ಕಟ್ಟಡ ನಿರ್ಮಾಣಕ್ಕಾಗಿ ೧೫೦ ಕೋಟಿ ಅನುದಾನ ನೀಡಲಾಗಿದ್ದು, ಕಾಮಗಾರಿ ಇನ್ನೂ ಮೊದಲ ಮಹಡಿ ನಿರ್ಮಾಣ ಹಂತದಲ್ಲಿದ್ದು, ಆಗಸ್ಟ್ ೨೦೨೩ ರೊಳಗಾಗಿಸಂಪೂರ್ಣವಾಗಿ ಕಟ್ಟಡ ಕಾಮಗಾರಿ ಮುಕ್ತಾಯಗೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಇಲಾಖೆ ಕಟ್ಟಡ ಕಾಮಗಾರಿ ಅಭಿಯಂತರರವರಿಗೆ ಸೂಚಿಸಿದರು.ಜಿಲ್ಲೆಗೊಂದು ಸರಕಾರಿ ಗೋಶಾಲೆ ತೆರೆಯುವ ಯೋಜನೆಯಡಿಯಲ್ಲಿ ಜಿಲ್ಲೆಗೆ ೫ ಗೋಶಾಲೆ ಮಂಜೂರು ಮಾಡಲಾಗಿದೆ. ಹಾಗೂ ಪ್ರತಿ ೧೦೦ ಗೋವುಗಳಿಗೆ ಬೇಕಾಗುವಂತಹ ಆಹಾರ, ನೀರು ಮತ್ತುನಿರ್ವಹಣಾ ಸಿಬ್ಬಂಧಿಗಳ ಮಾಹಿತಿಯ ವರದಿ ನೀಡಬೇಕುಹಾಗೂ ಪುಣ್ಯಕೋಟಿ ಯೋಜನೆಯಡಿಯಲ್ಲಿ ಗೋವುಗಳನ್ನು ದತ್ತು ಪಡೆಯುವ ಕಾರ್ಯ ಇನ್ನು ಹೆಚ್ಚಾಗಿ ಆಗಬೇಕು ಎಂದು ಜಿಲ್ಲಾ ಪಶು ಸಂಗೋಪನ ಇಲಾಖೆ ಅಧಿಕಾರಿಗೆ ಸೂಚಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೆ ಮುಗಿಲನ್, ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪ್ರೀಯಾಂಗಾ ಎಂ, ವಿವಿಧ ತಾಲೂಕಿನ ತಹಸೀಲ್ದಾರರು ಹಾಗೂ ಇನ್ನಿತರ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.

See also  ಶಿವಮೊಗ್ಗ: ಅಮರನಾಥದಲ್ಲಿ ಕರ್ನಾಟಕದ ಯಾತ್ರಿಗಳು ಸುರಕ್ಷಿತವಾಗಿದ್ದಾರೆ ಎಂದ ಆರಗ ಜ್ಞಾನೇಂದ್ರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು