News Kannada
Friday, September 29 2023
ಉತ್ತರಕನ್ನಡ

ಕಾರವಾರ: ನೌಕಾನೆಲೆಯಲ್ಲಿ ಫ್ರೀಡಂ ರನ್@75 ಆಯೋಜನೆ

Karwar: Freedom Run@75 to be held at naval base
Photo Credit : By Author

ಕಾರವಾರ: ಸಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ನಿಮಿತ್ತ ಕಾರವಾರದ ಅರ್ಗಾದ ಐಎನ್‌ಎಸ್ ಕದಂಬ ನೌಕಾನೆಲೆಯಲ್ಲಿ ಶನಿವಾರ ಫ್ರೀಡಂ ರನ್@75 ಆಯೋಜಿಸಲಾಗಿತ್ತು.

ಕರ್ನಾಟಕ ನೌಕಾ ಪ್ರದೇಶದ ಕಮಾಂಡಿಂಗ್ ಫ್ಲಾಗ್ ಆಫೀಸರ್ ರಿಯರ್ ಅಡ್ಮಿರಲ್ ಅತುಲ್ ಆನಂದ್ ಅವರು ಈ ಫ್ರೀಡಂ ರನ್ ಗೆ ಚಾಲನೆ ನೀಡಿ ಮಾತನಾಡಿ ಈ ಫ್ರೀಡಂ ರನ್ ಕಾರ್ಯಕ್ರಮವು ದೈಹಿಕ ಆರೋಗ್ಯದ ಬಗ್ಗೆ ಸಂದೇಶವನ್ನು ಸಾರಲು ಆಯೋಜಿಸಲಾಗಿದೆ ಎಂದರು. 5 ಕಿ.ಮೀ. ಹಾಗೂ 10 ಕಿ.ಮೀ. ಓಟಗಳಾಗಿ ಎರಡು ವಿಭಾಗಗಳಲ್ಲಿ ನೌಕಾನೆಲೆ ಪ್ರದೇಶದೊಳಗೆ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಭಾರತೀಯ ನೌಕಾಪಡೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಕುಟುಂಬಸ್ಥರು ಜೊತೆಗೆ ಕಾರವಾರದ ವಿವಿಧ ಕಾಲೇಜುಗಳ 75 ವಿದ್ಯಾರ್ಥಿಗಳು ಸೇರಿ ಒಟ್ಟು 750 ಮಂದಿ ಇದರಲ್ಲಿ ಪಾಲ್ಗೊಂಡಿದ್ದರು. 5 ವರ್ಷದ ಮಕ್ಕಳಿಂದ ಹಿಡಿದು 81 ವರ್ಷದ ವೃದ್ಧರವರೆಗೆ ಸ್ಪರ್ಧಾಳುಗಳು ಈ ಓಟದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಅಂತಿಮವಾಗಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

See also  ಉತ್ತರಪ್ರದೇಶ: ಭ್ರಷ್ಟಾಚಾರ ಅರೋಪಕ್ಕೆ ತುತ್ತಾದ ಐವರು ಅಧಿಕಾರಿಗಳ ಅಮಾನತು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು