News Kannada
Tuesday, October 04 2022

ಉತ್ತರಕನ್ನಡ

ಭಟ್ಕಳ: ಮಳೆಯಿಂದ ಹಾನಿ ಅನುಭವಿಸಿದ ಮೀನುಗಾರರಿಗೆ ಪರಿಹಾರ ನೀಡಬೇಕೆಂದು ತಹಸೀಲ್ದಾರ್ ಗೆ ಮನವಿ  - 1 min read

Bhatkal: Tahsildar requested to provide compensation to fishermen who suffered damage due to rains 
Photo Credit : By Author

ಭಟ್ಕಳ: ಸತತ ಮಳೆಯಿಂದ ಭಟ್ಕಳ ತಾಲೂಕಿನ ಹೆಬಳೆ ಪಂಚಾಯತ್ ವ್ಯಾಪ್ತಿಯ ತೆಂಗಿನ ಗುಂಡಿಯಲ್ಲಿ ಮೀನುಗಾರಿಕೆ ದೋಣಿಗಳಿಗೆ ಹಾನಿಯಾಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.

ಸರ್ಕಾರ ತಕ್ಷಣವೇ ಪ್ರತಿ ಮೀನುಗಾರರ ಕುಟುಂಬಕ್ಕೆ 1ಲಕ್ಷ ರೂ. ಪರಿಹಾರ ನೀಡಬೇಕೆಂದು ವೆಲ್ ಫೇರ್ ಪಾರ್ಟಿ ಆಫ್ ಇಂಡಿಯಾ  ಜಿಲ್ಲಾ ಸಮಿತಿಯು ತಹಸೀಲ್ದಾರ್ ಸುಮಂತ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

ಅತಿವೃಷ್ಟಿಯಿಂದಾಗಿ ಸಂಕಷ್ಟದಲ್ಲಿರುವ ಮೀನುಗಾರ ಕುಟುಂಬ ಭರಿಸಲಾಗದ ನೋವಿನಲ್ಲಿದೆ. ತಾಲೂಕಾಡಳಿತ ತಕ್ಷಣವೇ ಸ್ಪಂದಿಸುವ ಮೂಲಕ ಬಡಮೀನುಗಾರರ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ವೆಲ್ ಫೇರ್ ಪಾರ್ಟಿ ಆಫ್ ಇಂಡಿಯಾ ಉತ್ತರ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಸಿಫ್ ಶೇಖ್, ಖಜಾಂಚಿ ಅಬ್ದುಲ್ ಜಬ್ಬಾರ್ ಅಸದಿ, ಮುಖಂಡರಾದ ಫಾರೂಕ್ ಶೇಕ್, ಯುವ ಮುಖಂಡರು ಹಾಜರಿದ್ದರು.

See also  ಕಾರವಾರ: ನರೇಗಾ ಯೋಜನೆ ಅಡಿ ಅವ್ಯವಹಾರ- ಕ್ರಮಕ್ಕೆ ಆಗ್ರಹ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು