News Kannada
Sunday, September 25 2022

ಉತ್ತರಕನ್ನಡ

ಕಾರವಾರ: ಎಲ್ಲ ದಾನಗಳಿಗಿಂತಲೂ ರಕ್ತದಾನವೇ ಶ್ರೇಷ್ಠ ದಾನ – ಆರ್. ಪಿ. ನಾಯ್ಕ - 1 min read

Blood donation is the best of all donations. P. Naik
Photo Credit : By Author

ಕಾರವಾರ: ಇತ್ತೀಚಿನ ದಿನಗಳಲ್ಲಿ ಪರಿಣಮಿಸುತ್ತಿರುವ ಅಪಘಾತಗಳು ಹಾಗೂ ಉದ್ಭವಿಸುತ್ತಿರುವ ಕಾಯಿಲೆಗಳನ್ನು ಪರಿಗಣಿಸಿದಾಗ ರಕ್ತದ ಅವಶ್ಯಕತೆ ಹೆಚ್ಚಾಗಿರುವುದು ಕಂಡು ಬರುತ್ತದೆ. ರಕ್ತದ ಬೇಡಿಕೆಯೂ ಹೆಚ್ಚಿರುತ್ತದೆ. ಅಂತಹ ಸಂದರ್ಭದಲ್ಲಿ ಸಂಗ್ರಹಿಸಿಟ್ಟ ರಕ್ತದಿಂದ ರೋಗಿಯ ಜೀವ ಉಳಿಸಲು ಸಾಧ್ಯವಾಗುತ್ತದೆ ಎಂದು ಕಾರವಾರ ನಗರಸಭೆಯ ಪೌರಾಯುಕ್ತರಾದ ಆರ್. ಪಿ ನಾಯ್ಕ ಹೇಳಿದರು.

ಅವರು ಆಜಾದ್ ಯೂಥ್ ಕ್ಲಬ್ ಕಾರವಾರ, ಲಯನ್ಸ್ ಕ್ಲಬ್ ಕಾರವಾರ, ಕಲ್ಲೂರ್ ಎಜ್ಯುಕೇಶನ್ ಟ್ರಸ್ಟ್ ಕಾರವಾರ,ಪ್ರೇಮಾ ಶ್ರಮ ಚಾರಿಟೇಬಲ್ ಟ್ರಸ್ಟ್ ಅಮದಳ್ಳಿ ಹಾಗೂ ಹೆಚ್. ಡಿ ಎಫ್. ಸಿ. ಬ್ಯಾಂಕ್ ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ ಹಾಗೂ ಕ್ವಿಟ್ ಇಂಡಿಯಾ ಚಳುವಳಿ ನಡೆದ ಸ್ಮರಣಾರ್ಥ ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದಲ್ಲಿ ಹಮ್ಮಿಕೊಂಡ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಉದ್ಘಾಟಕರಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರಕ್ತದಾನವೇ ಎಲ್ಲಾ ದಾನಗಳಿಗಿಂತಲೂ ಶ್ರೇಷ್ಠದಾನವಾಗಿದೆ. ಇದು ಅನೇಕ ಜೀವಗಳನ್ನು ಉಳಿಸಲು ಸಹಾಯಕವಾಗಿದೆ. ಜೀವ ಇದ್ದರೆ ನಾವು ಎಲ್ಲ ದಾನಗಳನ್ನು ಮಾಡಲು ಸಾಧ್ಯ ಅಧ್ಯಕ್ಷತೆ ಯನ್ನು ವಹಿಸಿದ ಆರ್. ಎಂ. ಓ ಡಾ. ವೆಂಕಟೇಶ ಮಾತನಾಡಿ ಸಂಘ ಸಂಸ್ಥೆಗಳು ಈ ರೀತಿಯಾಗಿ ರಕ್ತದಾನ ಶಿಬಿರಗಳನ್ನು ಆಯೋಜಿಸುವುದರಿಂದ ರೋಗಿಗಳಿಗೆ ರಕ್ತವನ್ನು ಪೂರೈಸಲು ಸಹಾಯಕವಾಗುತ್ತದೆ. ಇವರ ಕಾರ್ಯ ಶ್ಲಾಘನಿಯವಾದದ್ದು ಎಂದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಲಯನ್ಸ್ ಕ್ಲಬ್ ಕಾರ್ಯದರ್ಶಿ ಹಾಗೂ ಹಿರಿಯ ಸಮಾಜ ಸೇವಕರಾದ ಕೆ. ಎಸ್. ಕಿನ್ನರಕರ್ ಮಾತನಾಡಿ ರಕ್ತದಾನದಿಂದ ಅನೇಕ ಜೀವಗಳನ್ನು ಉಳಿಸಿದಂತೆ ಆಗುತ್ತದೆ. ಇದೊಂದು ಉತ್ತಮ ಕಾರ್ಯ ಎಂದರು. ರಾಷ್ಟ್ರ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತ ನಜೀರ್ ಅಹ್ಮದ್ ಯು. ಶೇಖ್ ಮಾತನಾಡಿ ಆರೋಗ್ಯ ವಂತ ಯುವ ಜನರು ಸದಾ ರಕ್ತದಾನಕ್ಕೆ ಮುಂದೆ ಬರಬೇಕು ಎಂದು ಹೇಳಿದರು. ಅತಿಥಿ ಗಳಾಗಿ ಕಲ್ಲೂರ್ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷ ಇಬ್ರಾಹಿಂ ಕಲ್ಲೂರ್, ಪ್ರೇಮಶ್ರಮ ಚಾರಿಟೇಬಲ್ ಟ್ರಸ್ಟ್ ನ ಸೀತಾರಾಮ ಗಾಂವ್ಕಾರ್, ಲ. ವಿನೋದ್ ನಾಯ್ಕ್ ಹಾಗೂ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಸಂದೀಪ್ ಯಾದವ್ ಇದ್ದರು.

ಕ್ಲಬ್ ನ ಅಧ್ಯಕ್ಷ ಮೊಹಮ್ಮದ್ ಉಸ್ಮಾನ್ ಶೇಖ್ ಈ ಕಾರ್ಯಕ್ರಮ ವನ್ನು ಸಂಘಟಿಸಿದ್ದರು. ಪ್ರಾರಂಭದಲ್ಲಿ ಫೈರೋಜ ಬೇಗಂ ಶೇಖ್ ಸ್ವಾಗತಿಸಿದರು. ಕೊನೆಯಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಲ. ವಿನಯಾ ನಾಯ್ಕ ವಂದಿಸಿದರು. ಈ ಶಿಬಿರದಲ್ಲಿ ಆಜಾದ್ ಯೂಥ್ ಕ್ಲಬ್ ನ ಸಾಧಿಕ್ ಖಾನ್, ಮನೋಜ್ ಆಚಾರಿ, ಸಾಹಿಲ್ ಕೆಲಕೊಂಡ್, ನಾಮದೇವ ಎಸ್. ವಾಲ್ವೇಕರ್ ಮತ್ತಿತರರು ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಅಬ್ದುಲ್ ಆಜೀಜ್ ಶೇಖ್, ಲ. ಅಲ್ತಾಫ್ ಶೇಖ್, ರೋಹನ್ ಭುಜಲೆ , ನಿಧಿ ನಾಯಕ ಇದ್ದರು.

See also  ಯಲ್ಲಾಪುರ: ಶಾಲೆಯ ಬೀಗ ಮುರಿದು ಕಳುವಿಗೆ ಯತ್ನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು