News Kannada
Thursday, October 06 2022

ಉತ್ತರಕನ್ನಡ

ಅಂಕೋಲಾ: ಸಾಗವಾನಿ ಕಟ್ಟಿಗೆ ಅಕ್ರಮ ಸಂಗ್ರಹ- ಅಧಿಕಾರಿಗಳಿಂದ ದಾಳಿ - 1 min read

Ankola: Illegal collection of sagavani wood, officials raid
Photo Credit : By Author

ಅಂಕೋಲಾ: ಅಕ್ರಮವಾಗಿ ಸಂಗ್ರಹಿಸಿಟ್ಟ ಸಾಗವಾನಿ ಕಟ್ಟಿಗೆಯನ್ನು ವಶಪಡಿಸಿಕೊಂಡು, ವುಡ್ ಮಿಲ್ ಜಪ್ತಿ ಮಾಡಿದ ಘಟನೆ ತಾಲೂಕಿನ ಅಗ್ರಗೊಣದಲ್ಲಿ ನಡೆದಿದೆ.

ಸುಮಾರು ಅಂದಾಜು 1 ಲಕ್ಷ ರೂ ಮೌಲ್ಯದ ಸಾಗವಾನಿ ಕಟ್ಟಿಗೆಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆಯ ಅಧಿಕಾರಿಗಳು, ಅಗ್ರಗೊಣದ ಜಾನಕಿ ವುಡ್ ಇಂಡಸ್ಟ್ರೀಸ್ ಜಪ್ತಿ ಮಾಡಿ ವುಡ್ ಮೀಲ್ ಮಾಲೀಕರಾದ ಶಂಕರ್ ಶೇಟ್ ವೆರ್ಣೇಕರ್ ಹಾಗೂ ರಾಮಾರಾಜ್ ಶೇಟ್ ವೆರ್ಣೇಕರ್ ಎಂಬುವವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾರ್ಯಾಚರಣೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪ್ರಶಾಂತ್ ಕೆ.ಸಿ ನೇತೃತ್ವದಲ್ಲಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣ ಗೌಡ ಹಾಗೂ ವಲಯ ಅರಣ್ಯಾಧಿಕಾರಿ ಸುರೇಶ್ ನಾಯ್ಕ, ಉಪ ವಲಯ ಅರಣ್ಯಾಧಿಕಾರಿ ಸತೀಶ್ ಕಾಂಬ್ಳೆ, ರಾಘವೇಂದ್ರ ಜಿರಗಾಳೆ, ಪ್ರಶಾಂತ್ ಪಟಗಾರ, ಗೌರಿಶಂಕರ ರಾಯ್ಕರ್, ಅಕ್ಷಯ್ ಕುಲಕರ್ಣಿ, ಅರಣ್ಯ ರಕ್ಷಕರಾದ ಬಾಬು ಶೆಟ್ಟಣ್ಣನವರ್, ಬಸವನಗೌಡ ಬಗಲಿ, ವೆಂಕಟೇಶ್ ನಾಯಕ, ಪುಂಡಲೀಕ್ ಕಾರ್ಯಾಚರಣೆ ನಡೆಸಿದ್ದರು

See also  ನಾಗರಿಕ ವಿಮಾನ ನಿಲ್ದಾಣದ ಯೋಜನೆಯಿಂದ ನಿರಾಶ್ರಿತರಾಗುವ ಜನರು ಯಾರೂ ಹತಾಶರಾಗುವ ಅಗತ್ಯತೆ ಇಲ್ಲ : ಶಿವರಾಮ ಹೆಬ್ಬಾರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು