News Kannada
Monday, March 27 2023

ಉತ್ತರಕನ್ನಡ

ಕಾರವಾರ: ಜಾತಿ ನಿಂದನೆ ಪ್ರಕರಣ, ಎಸ್. ಎಲ್. ಘೋಟ್ನೇಕರ್ ಗೆ ಜಾಮೀನು

Casteist slur case L. Ghotnekar granted bail
Photo Credit : By Author

ಕಾರವಾರ: ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ್ ವಿರುದ್ಧ ದಾಖಲಾಗಿದ್ದ ಜಾತಿ ನಿಂದನೆ ಪ್ರಕರಣದಲ್ಲಿ ನಗರದ 2 ನೇ ಸೆಷನ್ಸ್ ನ್ಯಾಯಾಲಯವು ಜಾಮೀನು ನೀಡಿದೆ.

ದಲಿತರೊಬ್ಬರಿಗೆ ಜಾತಿ ನಿಂದನೆ ಮಾಡಿದ್ದಾರೆ ಎಂಬ ಆರೋಪದಡಿ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಘೋಟ್ನೇಕರ ಅವರ ವಿರುದ್ಧ 2019 ರಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಪಡೆಯಲು ಎಸ್.ಎಲ್.ಘೋಟ್ನೇಕರ್ ಅವರು ಜಿಲ್ಲಾ ನ್ಯಾಯಾಲಯ, ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಗಳಲ್ಲಿ ಪ್ರಯತ್ನಿಸಿದ್ದರು. ಬಳಿಕ ಜಿಲ್ಲಾ ನ್ಯಾಯಾಲಯದಲ್ಲಿ ಶರಣಾಗಿ ಜಾಮೀನು ಪಡೆಯುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು.

ಈ ಹಿನ್ನೆಲೆಯಲ್ಲಿ 2ನೇ ಸೆಷನ್ಸ್ ನ್ಯಾಯಾಧೀಶರ ಎದುರು ಹಾಜರಾದ ಎಸ್.ಎಲ್. ಘೋಟ್ನೇಕರ ಅವರು, ಜಾಮೀನು ಅರ್ಜಿ ಸಲ್ಲಿಸಿದ್ದರು. ಎಸ್.ಎಲ್. ಘೋಟ್ನೇಕರ್ ಅವರ ಶರಣಾಗತಿಯನ್ನು ಪರಿಗಣಿಸಿದ ನ್ಯಾಯಾಲಯ ಅವರಿಗೆ ಜಾಮೀನು ಮಂಜೂರಿ ಮಾಡಿದೆ.ಕಾರವಾರದ ನ್ಯಾಯವಾದಿ ಜಿ.ಟಿ.ನಾಯ್ಕ ಅವರು ಈ ಪ್ರಕರಣದಲ್ಲಿ ಎಸ್.ಎಲ್.ಘೋಟ್ನೇಕರ್ ಅವರ ಪರ ವಾದ ಮಂಡಿಸಿದ್ದರು.

See also  ಮದುವೆ ದಿಬ್ಬಣದ ವಾಹನ, ಕಾರು ಮುಖಾಮುಖಿ ಡಿಕ್ಕಿ: ಕಾಂಗ್ರೆಸ್‌ ಮುಖಂಡನ ದುರ್ಮರಣ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

178
Srinivas Badkar

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು