ಕಾರವಾರ: ತಾಲೂಕಿನ ಮಾಜಾಳಿಯಲ್ಲಿ ಮೀನುಗಾರಿಕಾ ಬಂದರು ನಿರ್ಮಾಣಕ್ಕೆ ಸಂಬಂಧಿಸಿದಂತೆ ಯೋಜನೆಯನ್ನು ಶೀಘ್ರವೇ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ಸ್ಥಳೀಯ ಮೀನುಗಾರರ ಗುಂಪು ಆಗ್ರಹಿಸಿದೆ.
ಕಳೆದ ಕೆಲವು ದಿನಗಳ ಹಿಂದೆ. ಮೀನುಗಾರರ ಒಂದು ಗುಂಪು ಬಂದರು ಬೇಡ ಎಂದು ಮನವಿ ಸಲ್ಲಿಸಿದರು. ಕಡಲತೀರದಲ್ಲಿ ಸೇರಿದ ಮೀನುಗಾರರು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬ್ಯಾನರ್‌ಗೆ ಹೂವಿನ ಹಾರ ಹಾಕಿ ಕೇಸರಿ ಧ್ವಜ ಹಿಡಿದು ಯೋಜನೆ ಪರ ಒತ್ತಾಯಿಸಿತು. ಮೀನುಗಾರಿಕೆ ಬಂದರು ನಿರ್ಮಾಣ ಮಾಡಬೇಕು ಆಗ್ರಹಿಸಿದರು.
ಯಾರೇ ಏನೇ ಹೇಳಿದರು ಬಂದರು ನಿರ್ಮಾಣವಾಗುವವೆರೆಗೆ ನಮ್ಮ ಹೋರಾಟ ನಿಲ್ಲಲ್ಲ ಎಂದು ಘೋಷಣೆಗಳನ್ನು ಹಾಕಿದರು. ಜಿಲ್ಲೆಯಲ್ಲಿ ಸಾಕಷ್ಟು ಯೋಜನೆಗಳು ಬಂದರೂ ಮೀನುಗಾರರಿಗೆ ಏನೂ ಪ್ರಯೋಜನವಾಗಿಲ್ಲ. ಸ್ಥಳೀಯ ಬಂದರಿಗೆ ತೆರಳಿದರೂ ನಮಗೆ ದುಡಿಯಲು ಅವಕಾಶ ದೊರೆಯಲ್ಲ. ನಮ್ಮ ಪ್ರದೇಶದಲ್ಲಿ ಬಂದರು ನಿರ್ಮಾಣವಾದಲ್ಲಿ ಮೀನುಗಾರ ಪುರುಷ ಮಾತ್ರವಲ್ಲ, ಮಹಿಳೆಯರಿಗೂ ಅವಕಾಶ ದೊರೆಯುತ್ತದೆ.
ನಮ್ಮಲ್ಲೂ ಪದವಿ ಪಡೆದಿರುವ ಮಕ್ಕಳಿದ್ದಾರೆ. ಅವರಿಗೆ ಭವಿಷ್ಯದಲ್ಲಿ ಉದ್ಯೋಗ ದೊರಕುತ್ತದೆ ಪ್ರತಿಭಟನಾಕಾರರು ತಿಳಿಸಿದರು. ಮಾಜಾಳಿ, ಮಧ್ಯ ದಾಂಡೇಭಾಗ್, ದೇವಭಾಗ್, ಬಾವಳ, ಹಿಪ್ಪಳ್ಳಿ, ಚಿತ್ತಾಕುಲಾ, ಗಾಭಿತವಾಡ ಮುಂತಾದ ಭಾಗದ ಮೀನುಗಾರರಿಗೆ ಅನುಕೂಲವಾಗಲೆಂದು ಈ ಯೋಜನೆ ಜಾರಿಗೊಳಿಸಲಾಗುತ್ತಿದೆ. ಅಲ್ಲದೇ, ಇದರಿಂದ ೪,೭೧೬ ಮೀನುಗಾರರಿಗೆ ಸಹಾಯವಾಗಲಿದೆ ಎಂದು ಅಂದಾಜಿಸಲಾಗಿದೆ. ಆದರೆ, ಕೆಲವು ಮೀನುಗಾರರ ವಿರೋಧದಿಂದ ಎಚ್ಚೆತ್ತಿರುವ ಅದೇ ಭಾಗದ ನೂರಾರು ಮೀನುಗಾರರು, ರಾಜಕೀಯ ಹಿತಾಸಕ್ತಿಗಳ ಕೈವಾಡದಿಂದಾಗಿ ಒಂದು ಗುಂಪಿನ ಮೀನುಗಾರರು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಸರಕಾರ ಬಂದರು ನಿರ್ಮಾಣಕ್ಕೆ ತಯಾರಾಗಿದ್ರೂ, ಕೆಲವರ ವಿರೋಧದಿಂದ ಇದಕ್ಕೆ ಅಡ್ಡಿಯಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಈ ವಿಚಾರದಲ್ಲಿ ರಾಜಕೀಯ ನಡೆಸದೇ ಮೀನುಗಾರರ ಅಭಿವೃದ್ಧಿಗಾಗಿ ಒಗ್ಗೂಡಬೇಕು. ನಮ್ಮ ಮಕ್ಕಳ ಭವಿಷ್ಯ್ಯದ ದೃಷ್ಠಿಯಿಂದಾದರೂ ಈ ಯೋಜನೆ ಬೇಕೇ ಬೇಕು.
ಸೀಬರ್ಡ್ ಯೋಜನೆ, ಬೈತಖೋಲ ಬಂದರು ನಿರ್ಮಾಣ ಮುಂತಾದ ಯೋಜನೆ ಜಾರಿಗೊಳಿಸಿದಾಗ ಮೀನುಗಾರರಿಗೆ ಸಿಕ್ಕಿದ್ದೇನಿಲ್ಲ. ಆದರೆ, ಈ ಯೋಜನೆಯಿಂದ ಮೀನುಗಾರರ ಜೀವನ ಉತ್ತಮವಾಗುತ್ತದೆ. ನಮ್ಮ ಬೋಟುಗಳನ್ನು ಬೇರೆಡೆ ಇರಿಸಬೇಕೆಂದೇನಿಲ್ಲ. ನಮ್ಮಲ್ಲಿ ಬಂದರು ನಿರ್ಮಾಣವಾದಲ್ಲಿ ಬಂದರಿನಲ್ಲೇ ಇರಿಸಿ ಇಲ್ಲಿಂದಲೇ ನಮ್ಮ ಕೆಲಸಕ್ಕೆ ತೆರಳಲು ಸಾಧ್ಯ ಎನ್ನುವುದು ಸ್ಥಳೀಯ ಮೀನುಗಾರರ ಮಾತನಾಡಿದೆ.