ಕಾರವಾರ: ಎನ್ಪಿಸಿಐಎಲ್ ಕೈಗಾ ನೌಕರರ ಯೂನಿಯನ್ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸುಮಂತ್ ಹೆಬ್ಳೆಕರ್ ಆಯ್ಕೆಯಾಗಿದ್ದಾರೆ.
ಚುನಾವಣೆಯಲ್ಲಿ ಒಟ್ಟೂ 960 ಜನ ನೌಕರರು ತಮ್ಮ ಮತವನ್ನು ಕಂಪ್ಯೂಟರ್ ಸಿಸ್ಟಮ್ ಮತದ ಮೂಲಕ ಚಲಾಯಿಸಿದ್ದರು. 555 ಮತಗಳನ್ನು ಪಡೆದ ಸುಮಂತ ಹೆಬ್ಬೆಕರ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಅಭಿತ್ ಸಯ್ಯಾ ಹಾಗೂ ದಯಾಳ್ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾದರು. ಕಾಶಿನಾಥ್ ಖಾಡೆ, ಸೂರಜ್ ವಿಠೋಬಾ ನಾಯಕ್ ವಿಜಯಕುಮಾರ ಅವರು ಅವರು ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ಖಜಾಂಚಿಯಾಗಿ ಗುರುರಾಜ್ ಅವರು ಆಯ್ಕೆಯಾಗಿದ್ದು, ಎಕ್ಸಿಕ್ಯೂಟಿವ್ ಕಮೀಟಿಯ ಸದಸ್ಯರಾಗಿ ಪ್ರಶಾಂತ ಕೆ. ಗಾಂವಕಾರ, ರಾಜು ಆರ್. ನಾಯ್ಕ, ಸೂರಜ ದೇರೇಕರ ಸಾಂತಾ ಗೌಡ ಹುಷಾರ್ಧೀ ಕೋಟೇಶ್ವರ ಎಲ್ ರಾಘವೇಂದ್ರ, ಗೋಕುಲ್ ಡಿ.ಪಿ ಅಂತೋನಿ ಡಗ್ಲಾಸ್ ಅವರು ಆಯ್ಕೆಯಾಗಿದ್ದಾರೆ.