News Kannada
Thursday, December 08 2022

ಉತ್ತರಕನ್ನಡ

ಕಾರವಾರ: ರಂಗ ಮಂದಿರದಲ್ಲಿ ಪೌರ ಕಾರ್ಮಿಕ ದಿನಾಚರಣೆ

Karwar: Pourakarmika Day at Ranga Mandir
Photo Credit : By Author

ಕಾರವಾರ: ಪೌರ ಕಾರ್ಮಿಕರು ನಗರವನ್ನು ಸ್ವಚ್ಛ ಮಾಡುತ್ತಾರೆ ಎನ್ನುವುದಕ್ಕಿಂದ ಜನರ ಆರೋಗ್ಯದ ರಕ್ಷಣೆ ಮಾಡುತ್ತಾರೆ ಎನ್ನುವುದು ಮುಖ್ಯ ಎಂದು ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಅವರು ಹೇಳಿದರು.

ನಗರದ ಜಿಲ್ಲಾ ರಂಗಮಂದಿರದಲ್ಲಿ ಶುಕ್ರವಾರ ಕಾರವಾರ ನಗರಸಭೆ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ನಗರವನ್ನು ಸ್ವಚ್ಛವಾಗಿಡಲು ಪೌರಕಾರ್ಮಿಕರು ಯಾವ ರೀತಿ ಶ್ರಮ ವಹಿಸುತ್ತಾರೆ ಎನ್ನುವುದು ಯಾರೂ ಕೇಳುವುದಿಲ್ಲ. ಆದರೆ, ಒಂದು ದಿನ ಕಸ ಸಂಗ್ರಹ ಮಾಡಲು ಪೌರಕಾರ್ಮಿಕರು ಬರಲಿಲ್ಲ ಎಂದರೆ ನಾಗರಿಕರು ದೂರುತ್ತಾರೆ ಎಂದರು.

ನಗರದಲ್ಲಿ ಬಿದ್ದಿರುವ ಕಸದ ರಾಶಿಯನ್ನು ಪೌರಕಾರ್ಮಿಕರು ಬೆಳಿಗ್ಗೆ ಸ್ವಚ್ಚ ಮಾಡುತ್ತಾರೆ. ಖೇದಕರ ಸಂಗತಿಯೆಂದರೆ ಸಂಜೆ ೪ ಗಂಟೆಗೆ ಮತ್ತೆ ಅಷ್ಟೇ ಕಸ ನಗರದಲ್ಲಿ ಬಿದ್ದಿರುತ್ತದೆ. ಈ ರೀತಿಯಲ್ಲಿ ತ್ಯಾಜ್ಯ ಸಂಗ್ರಹವಾಗುವುದನ್ನು ತಡೆಯಲು ನನ್ನಿಂದ ಕಡಿಮೆ ತ್ಯಾಜ್ಯ ಸೃಷ್ಟಿ ಆಗಬೇಕು ಎನ್ನುವ ಅರಿವನ್ನು ನಾವು ಮೂಡಿಸಿಕೊಳ್ಳಬೇಕು ಎಂದು ಮೊಗವೀರ ತಿಳಿಸಿದರು. ವಿಶ್ವದ ಕೆಲವು ರಾಷ್ಟ್ರಗಳ ನಗರಗಳಲ್ಲಿ ಸ್ವಚ್ಛತೆಯನ್ನು ನೋಡಿದಾಗ ಎಲ್ಲಿ ಉಗುಳು ಹೊರಗೆ ಬರುತ್ತದೆ ಎನ್ನುವ ಆತಂಕದಿಂದ ಗಟ್ಟಿಯಾಗಿ ಉಸಿರಾಡಲು ಯೋಚಿಸಬೇಕಾಗುತ್ತದೆ. ಅಲ್ಲಿಯ ನಗರಗಳಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಇರುವುದರಿಂದ ಅಲ್ಲಿ ಸ್ವಚ್ಛತೆ ಕಾಪಾಡಲು ಸಾಧ್ಯವಾಗಿ ಎಂದು ಅವರು ಎಂದರು.

ಓದಿ ಬ್ರಾಹ್ಮಣನಾಗು, ಕಾದಿ ಕ್ಷತ್ರಿಯನಾಗು ಶೂದ್ರ ವೈಶ್ಯನೆ ಆಗು, ದುಡಿದು ಗಳಿಸಿ ಏನಾದರೂ ಆಗು ನಿನ್ನೊಲವಿನಂತಾಗು ಏನದಾರು ಸರಿಯೇ ಮೊದಲು ಮಾನವನಾಗು ಎನ್ನುವ ಸಿದ್ದಯ್ಯ ಪುರಾಣಿಕ ಅವರ ಕವಿವಾಣಿಯಂತೆ ನಾವು ಮೊದಲು ಜವಾಬ್ದಾರಿಯುತ ನಡವಳಿಕೆಯನ್ನು ತೋರಿಸಬೇಕು. ವಿದ್ಯಾವಂತರಾದವರು ಜವಾಬ್ದಾರಿ ಅರಿತು ವರ್ತಿಸಬೇಕು ಎಂದರು. ನಗರದಲ್ಲಿ ಸ್ವಚ್ಛತೆಯಲ್ಲಿ ತೊಡಗಿರುವ ನೌಕರರು ತಮ್ಮ ಆರೋಗ್ಯ ರಕ್ಷಣೆಯ ಬಗ್ಗೆಯೂ ಕಾಳಜಿ ವಹಿಸಬೇಕು ಎಂದು ಅವರು ಕಿವಿಮಾತು ಹೇಳಿದರು.

ನಗರಸಭೆ ಉಪಾಧ್ಯಕ್ಷ ಪಿ.ಪಿ.ನಾಯ್ಕ ಮಾತನಾಡಿ, ಕಾರವಾರ ನಗರ ಕರ್ನಾಟಕದ ಕಾಶ್ಮೀರವಾಗಿರಲು ಪೌರಕಾರ್ಮಿಕರ ಶ್ರಮವೂ ಇದೆ ಎಂದರು. ನಗರಸಭೆ ಅಧ್ಯಕ್ಷ ನಿತೀನ ಪಿಕಳೆ ಅಧ್ಯಕ್ಷತೆ ವಹಿಸಿದ್ದರು. ಪೌರಕಾರ್ಮಿಕರ ಸಂಘದ ಅಧ್ಯಕ್ಷ ಎಮ್.ನಾರಾಯಾಣ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಜಾತಾ ತಾಮಸೆ, ನಗರಸಭೆ ಸದಸ್ಯೆ ಮಾಲಾ ಹುಲಸ್ವಾರ, ರೆಷ್ಮಾ ಮಾಳ್ಸೆಕರ್ ಮಾತನಾಡಿದರು. ಪೌರಾಯುಕ್ತ ಆರ್.ಪಿ.ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸಂಕಷ್ಟ ಭತ್ಯೆಯ ಚೆಕ್ ಗಳನ್ನು ಇದೇ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ವಿತರಿಸಲಾಯಿತು.

See also  ಗೋಕರ್ಣ: ಕಾರುಣ್ಯ ಮನುಷ್ಯನ ಸರ್ವಶ್ರೇಷ್ಠ ಭಾವ- ರಾಘವೇಶ್ವರ ಶ್ರೀ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು