News Kannada
Thursday, December 08 2022

ಉತ್ತರಕನ್ನಡ

ಕಾರವಾರ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಂಕೋಲಾ-ಹುಬ್ಬಳ್ಳಿ ರೈಲ್ವೆ ಅನುಷ್ಠಾನದ ಬಗ್ಗೆ ಮಹತ್ವದ ಚರ್ಚೆ

Karwar: A crucial discussion on the implementation of Ankola-Hubballi railway was held at the deputy commissioner's office here.
Photo Credit : By Author

ಕಾರವಾರ: ಉತ್ತರ ಕನ್ನಡ ಜಿಲ್ಲೆಗೆ ಮಹತ್ವದ ಯೋಜನೆಗಳಲ್ಲಿ ಒಂದಾಗಿರುವ ಅಂಕೋಲಾ-ಹುಬ್ಬಳ್ಳಿ ರೈಲ್ವೆ ಯೋಜನೆ ಅನುಷ್ಠಾನದ ಬಗ್ಗೆ ಮಹತ್ವದ ಸಭೆ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೇಂದ್ರ ರೈಲ್ವೆ ಯೋಜನಾ ಸಮಿತಿಯ ಜೊತೆ ನಡೆಯಿತು.

ಜಿಲ್ಲೆಯು ಅಭಿವೃದ್ಧಿಯಾಗುವ ನಿಟ್ಟಿನಲ್ಲಿ ರೈಲು ಮಾರ್ಗ ಕಾಮಗಾರಿ ಪ್ರಾರಂಭವಾಗುವುದು ಅವಶ್ಯಕವಾಗಿದ್ದು, ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯು ಸಹ ಇದಾಗಿದೆ ಎಂದು ಕೇಂದ್ರದ ರೈಲ್ವೆ ಯೋಜನಾ ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿದೆ. ನಗರದ ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಹುಬ್ಬಳ್ಳಿ-ಅಂಕೋಲಾ ರೈಲಿನ ಬೇಡಿಕೆಯ ಕುರಿತಾದ ಚರ್ಚೆಯ ಸಂದರ್ಭದಲ್ಲಿ ಕೇಂದ್ರ ರೈಲ್ವೆ ಯೋಜನಾ ಸಮಿತಿಯ ಅಧಿಕಾರಿಗಳು ಮೇಲಿನ ರೀತಿ ಅಭಿಪ್ರಾಯಕ್ಕೆ ಬಂದರು.

ರೈಲ್ವೆ ಯೋಜನೆಯ ಸಾಧಕ ಬಾಧಕ ಕುರಿತಾಗಿ ಸಭೆಯಲ್ಲಿ ಚರ್ಚಿಸಲಾಯಿತು. ರೈಲ್ವೆ ಯೋಜನೆಯಿಂದಾಗಿ ಅಪಾರ ಪ್ರಮಾಣದ ಅರಣ್ಯ ನಾಶವಾಗುವುದು. ವನ್ಯಪ್ರಾಣಿಗಳ ವಾಸಸ್ಥಾನದ ಪಲ್ಲಟವಾಗುವ ಆತಂಕವಿದೆ. ಅರಣ್ಯ ನಾಶದಿಂದ ಮಳೆಗಾಲದ ಸಂದರ್ಭದಲ್ಲಿ ಮಳೆ ನೀರಿನ ಹರಿವಿನ ದಿಕ್ಕು ಬದಲಾವಣೆಯಾಗುವುದರಿಂದ ನೀರಿನ ಹಂಚಿಕೆಯಲ್ಲಿ ಅಭಾವ ಸೃಷ್ಠಿಯಾಗಬಹುದು. ಗುಡ್ಡ ಕುಸಿತ ಪ್ರದೇಶಗಳಲ್ಲಿ ಈ ಯೋಜನೆ ಫಲದಾಯಕವಲ್ಲ ಎಂಬ ಅಭಿಪ್ರಾಯ ಚರ್ಚೆಗೊಂಡಿದೆ. ಕೇಂದ್ರ ರೈಲ್ವೆ ಯೋಜನೆ ಸಮಿತಿ ಅಧಿಕಾರಿಗಳು ಯೋಜನೆಯ ಕುರಿತಾಗಿ ಮಾತನಾಡಿ, ಈ ಯೋಜನೆಯು ಜಿಲ್ಲೆಯ ಅಭಿವೃದ್ಧಿ ದೃಷ್ಠಿಯಿಂದ ಉತ್ತಮವಾದ ಯೋಜನೆಯಾಗಿದೆ. ಜನಸಂಚಾರ, ಸರಕು ಸಾಗಣೆಗೆ ಹಾಗೂ ಸಮಯದ ಉಳಿತಾಯವಾಗುವುದರಿಂದ ಈ ಯೋಜನೆಯನ್ನು ಜಿಲ್ಲೆಯ ಜನ ಸ್ವಾಗತಿಸುತ್ತಾರೆ.

ಅಭಿವೃದ್ಧಿ ಕಾರಣದಿಂದಾಗಿ ಕೆಲವು ಬದಲಾವಣೆಗಳಿಗೆ ಒಪ್ಪಿಕೊಳ್ಳುವಂತ ನಿರ್ಧಾರಕ್ಕೆ ಬರಲೇಬೇಕು ಎಂದು ತಿಳಿಸಿದರು. ಬಹು ಕೋಟಿ ವೆಚ್ಚದ ಯೋಜನೆ ಇದಾಗಿರುವುದರಿಂದ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಬೆಳವಣಿಗೆ ಕಾಣಬಹುದಾಗಿದೆ. ವಿಪತ್ತು ನಿರ್ವಹಣೆ ಮಾಡುವಲ್ಲಿ ಅಗತ್ಯ ಕಾರ್ಯಸೂಚಿಗಳನ್ನು ಅಳವಡಿಸಿಕೊಳ್ಳಬೇಕು. ರೈಲ್ವೇ ಮಾರ್ಗವನ್ನು ಮಾಡುವ ಸಂದರ್ಭದಲ್ಲಿ ನಿಗದಿತ ಅಂತರದಲ್ಲಿ ಟನಲ್‌ಗಳನ್ನು, ರೈಲ್ವೆ ಕ್ರಾಸಿಂಗ್ ನಿರ್ವಹಿಸುವ ಮೂಲಕ ಹೆಚ್ಚಿನ ಪ್ರಮಾಣದ ಅರಣ್ಯ ನಾಶವನ್ನು ತಡೆಗಟ್ಟಬಹುದಾಗಿದೆ. ಪ್ರಾಣಿಗಳ ಓಡಾಟಕ್ಕೆ ಅನುಕೂಲವಾಗುವ ರೀತಿಯಲ್ಲಿ ಮಾರ್ಗದುದ್ದಕ್ಕೂ ಅಗತ್ಯ ಪರ್ಯಾಯ ವ್ಯವಸ್ಥೆಯನ್ನು ಒದಗಿಸಿ ಪ್ರಾಣಿಗಳ ಜೀವಹಾನಿಯನ್ನು ತಡೆಗಟ್ಟಬೇಕು. ಯೋಜನೆಯ ಮಾರ್ಗಕ್ಕೆ ಪೂರಕವಾಗಿ ರಸ್ತೆ ಸಂಪರ್ಕ, ನೀರು ಹಾಗೂ ವಿದ್ಯುತ್ ಸಂಪರ್ಕಕಲ್ಪಿಸಬೇಕು.

ಸರ್ವಋತು ಯೋಗ್ಯವಾದ ರೀತಿಯಲ್ಲಿ ರೈಲ್ವೆ ಕಾಮಗಾರಿ ಯೋಜನೆ ಅನುಷ್ಠಾನಗೊಳ್ಳಲು ಯೋಜನೆ ರೂಪಿಸಬೇಕು ಎಂದು ತಿಳಿಸಿದರು. ಈ ಸಭೆಯಲ್ಲಿ ರೈಲ್ವೆ ಯೋಜನಾ ಸಮಿತಿ ಅಧಿಕಾರಿಗಳಾದ ಡಾ.ಎಚ್.ಎಸ್.ಸಿಂಗ್, ಭಾರತೀಯ ಅರಣ್ಯ ಸೇವೆಯ ವಿಜಯಕುಮಾರ, ಭಾರತೀಯ ಅರಣ್ಯ ಸೇವಾ ಡಿಐಜಿ ರಾಕೇಶ, ಡಾ. ರಾಜೇಂದ್ರಕುಮಾರ, ಡಾ.ಟಿ.ಎನ್. ಮನೋಹರ, ಪ್ರೋ. ನಾಗೇಶ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ, ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ, ಕಾರವಾರ ವಿಭಾಗದ ಅರಣ್ಯಾಧಿಕಾರಿ ರಾಘವೇಂದ್ರ ನಾಯ್ಕ ಹಾಗೂ ಇತರ ಅಧಿಕಾರಿ, ಸಿಬ್ಬಂದಿಗಳು ಇದ್ದರು.

See also  ಚಿತ್ರದುರ್ಗ: ಸ್ನೇಹಿತರೊಂದಿಗೆ ಸೇರಿ ಪತ್ನಿ ಮೇಲೆ ಪತಿಯಿಂದಲೇ ಸಾಮೂಹಿಕ ಅತ್ಯಾಚಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು