News Kannada
Thursday, December 08 2022

ಉತ್ತರಕನ್ನಡ

ಕಾರವಾರ: ರಾಷ್ಟ್ರೀಯ ವನ್ಯಜೀವಿ ಮಂಡಳಿ ಸಮಿತಿಯಿಂದ ಸ್ಥಳ ಪರಿಶೀಲನೆ

Karwar: National Board for Wildlife committee conducts site inspection on high court order
Photo Credit : By Author

ಕಾರವಾರ: ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸಮಿತಿಯೂ ಅಂಕೋಲಾ- ಹುಬ್ಬಳ್ಳಿ ರೈಲ್ವೆ ಯೋಜನೆಯಿಂದ ವನ್ಯಜೀವಿಗಳ ಮೇಲೆ ಆಗುವಂತ ಪರಿಣಾಮದ ಕುರಿತು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಲಾಗುವುದು ಎಂದು ಭಾರತೀಯ ಅರಣ್ಯ ಸೇವಾ ಡಿಐಜಿ ರಾಕೇಶ ಜಗನ್ಯ ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿ ಸಭಾಭವನದಲ್ಲಿ ಬುಧವಾರ ನಡೆದ ಅಂಕೊಲಾ ಹುಬ್ಬಳ್ಳಿ ರೈಲ್ವೆ ಯೋಜನೆಯ ಅಹವಾಲು ಆಲಿಕೆ ಸಭೆಯಲ್ಲಿ ಮಾತನಾಡಿದ ಅವರು ಯೋಜನೆಯ ಕುರಿತು ಲಿಖಿತರೂಪದಲ್ಲಿ ಹಾಗೂ ಸಂಕ್ಷಿಪ್ತವಾಗಿ ಸಭೆಯಲ್ಲಿ ಅನಿಸಿಕೆಗಳನ್ನು ಮಂಡಿಸಿದ ನಂತರ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು ಎಂದರು. ಉತ್ತರಕನ್ನಡ ಜಿಲ್ಲೆ ಅಭಿವೃದ್ಧಿಯಿಂದ ವಂಚಿತವಾಗಿದ್ದು, ರೈಲ್ವೆ ಯೋಜನೆಯಿಂದ ಜಿಲ್ಲೆಯ ಜನತೆಗೆ ವ್ಯಾಪಾರ, ಕೈಗಾರಿಕೆಗೆ ಸಾಕಷ್ಟು ಪ್ರಮಾಣದಲ್ಲಿ ಅನುಕುಲವಾಗಲಿದೆ ಹಾಗೂ ರಸ್ತೆಗಳಲ್ಲಿ ಸಂಭವಿಸು ವಂತಹ ಅಫಘಾತಗಳನ್ನು ತಡೆಗಟ್ಟಲು ಈ ಯೋಜನೆಯು ಅವಶ್ಯಕತೆೆ ಇದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಅಭಿಪ್ರಾಯ ಪಟ್ಟರು.

ಕಾರವಾರ ಅಂಕೋಲಾ ವಿಧಾನಸಭೆ ಶಾಸಕಿ ರೂಪಾಲಿ ನಾಯ್ಕ ಮಾತನಾಡಿಉತ್ತರಕನ್ನಡಜಿಲ್ಲೆಯಜನರುಸರಿಯಾದ ಸಾರಿಗೆ ವ್ಯವಸ್ಥೆಇಲ್ಲದೆ ನಿರೋದ್ಯೋಗದ ಸಮಸ್ಯೆಎದುರಿಸುತ್ತಿದ್ದು, ದೂರದ ಪ್ರದೇಶಗಳಿಗೆ ಹೋಗಿ ವ್ಯಾಪಾರ ಮಾಡಲು ಸಾರಿಗೆಕೊರತೆ ಹಾಗೂ ಆರ್ಥಿಕಾವಗಿ ಸಂಕಷ್ಟ ಎದುರಿಸುತ್ತಿದ್ದಾರೆ. ರೈಲ್ವೆ ಯೋಜನೆಯಿಂದಾಗಿ ಜಿಲ್ಲೆಯೂ ಎದುರಿಸುತ್ತಿರುವ ನಿರೋದ್ಯೋಗದ ಸಮಸ್ಯೆ ಹಾಗೂ ಆರ್ಥಿಕ ಸಂಕಷ್ಟದಿಂದ ಮುಕ್ತಗೊಳಿಸಬಹುದು ಎಂದು ಅನಿಸಿಕೆ ವ್ಯಕ್ತಪಡಿಸಿದರು. ನ್ಯಾಯವಾದಿ ಅಕ್ಷಯ ಪಲ್ಲೆ ಮತನಾಡಿ ಹುಬ್ಬಳ್ಳಿ ಅಂಕೋಲಾ ಯೋಜನೆಯೂ ಕಾಳಿ ಹುಲಿ ಸಂರಕ್ಷಣೆಧಾಮದಿಂದ ದೂರವಿದ್ದು, ಈ ಯೋಜನೆಯಿಂದಾಗಿ ಅರಣ್ಯ ಜೀವಿಗಳಿಗೆ ಯಾವುದೇ ಹಾನಿಯಾಗುವುದಿಲ್ಲ. ಬದಲಾಗಿ ಜಿಲ್ಲೆಯ ಜನರಿಗೆ ಉನ್ನತ ಶಿಕ್ಷಣಕ್ಕೆ, ವೈದ್ಯಕೀಯ ಸೌಲಭ್ಯ ಹಾಗೂ ವ್ಯಾಪಾರಕ್ಕೆ ಅತ್ಯಂತ ಅನೂಕುಲವಾಗುದು ಎಂದು ಹೇಳಿದರು. ಹುಲಿ ಸಂರಕ್ಷಣಾಧಾಮದಿಂದ ಕೊಂಕಣ ರೈಲ್ವೆ ಹಾದು ಹೊಗುತ್ತಿರುವುದರಿಂದ ಯಾವುದೇ ಹಾನಿ ಉಂಟಾಗಿಲ್ಲ, ಹಾಗೂ ಅಂಕೋಲಾ ಹುಬ್ಬಳ್ಳಿ ರೈಲ್ವೆ ಯೋಜನೆಯಿಂದ ಸಹ ಕೂಡಯಾವುದೇ ತರಹ ಹಾನಿಯಾಗುವುದಿಲ್ಲ ಮತ್ತು ಅರಣ್ಯ ಪ್ರದೇಶಗಳಲ್ಲಿ ಇನ್ನು ಹೆಚ್ಚು ಸಸಿ ನಡೆವುದರ ಮೂಲಕ ಅರಣ್ಯ ಸಂರಕ್ಷಣೆ ಹಾಗೂ ವನ್ಯ ಜೀವಿಗಳ ಸಂರಕ್ಷಣೆ ಮಾಡಲಾಗುವುದು ಎಂದು ಮಾಜಿ ಶಾಸಕ ಸತೀಶ ಸೈಲ್ ಹೇಳಿದರು.

See also  ಕಾರವಾರ: ಗಣೇಶ ಚತುರ್ಥಿ ಆಚರಣೆಗೆ ಕಾರವಾರದಲ್ಲಿ ಸರ್ವ ಸಿದ್ಧತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು