News Kannada
Sunday, December 04 2022

ಉತ್ತರಕನ್ನಡ

ಕಾರವಾರ: ಭೂಸ್ವಾಧೀನಧಿಕಾರಿ ಕಚೇರಿಯ ಪಿಠೋಪಕರಣ ಜಪ್ತಿ

Karwar: Land acquisition officer's office seized
Photo Credit : By Author

ಕಾರವಾರ: ಸೀಬರ್ಡ್ ನೌಕಾನೆಲೆಗಾಗಿ ಭೂಸ್ವಾಧೀನಪಡಿಸಿಕೊಂಡಿದ್ದ ಜಮೀನುಗಳ ಮಾಲೀಕರಿಗೆ ಹೆಚ್ಚುವರಿ ಪರಿಹಾರ ನೀಡದ ಕಾರಣದಿಂದಾಗಿ ಕೋರ್ಟ್ ಸಿಬ್ಬಂದಿಗಳ ಸಮ್ಮುಖದಲ್ಲಿ ಭೂ ಸ್ವಾಧೀನಧಿಕಾರಿ ಕಚೇರಿಯ ಪೀಠೋಪಕರಣಗಳನ್ನು ಕೋರ್ಟ್ ಜಪ್ತಿ ಮಾಡಿಕೊಳ್ಳಲಾಗಿದೆ.

ಅರಗಾದಲ್ಲಿನ ಶೀಲಾ ದಂಡೇಕರ್ ಎನ್ನುವವರ ಒಂದು ಎಕರೆ ಕೃಷಿ ಜಮೀನನ್ನ ಸೀಬರ್ಡ್ ಯೋಜನೆಗಾಗಿ 1986ರಲ್ಲಿ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಅಂದು 21 ಲಕ್ಷ ಪರಿಹಾರವನ್ನ ಸೀಬರ್ಡ್ ವಿಶೇಷ ಭೂಸ್ವಾಧೀನಾಧಿಕಾರಿಗಳು ಪಾವತಿಸಿದ್ದರೂ ಸಹ ಅದರಲ್ಲಿ ಟಿಡಿಎಸ್ ಕಡಿತ ಮಾಡಿಕೊಂಡಿದ್ದಕ್ಕಾಗಿ ಕಾರವಾರದ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು.

ಅದರಂತೆ ಹೆಚ್ಚುವರಿ ಪರಿಹಾರ 10.66 ಲಕ್ಷ ರೂ.ಗಳನ್ನ ಪಾವತಿಸಲು ಕೋರ್ಟ್ ಆದೇಶವಿದ್ದರೂ ಈವರೆಗೆ ಮಾಲೀಕರಿಗೆ ಪಾವತಿಯಾಗಿರಲಿಲ್ಲ. ಹೀಗಾಗಿ ಪರಿಹಾರ ಪಾವತಿಗೆ ವಿಳಂಬ ಮಾಡುತ್ತಿರುವುದಕ್ಕೆ ಕೋರ್ಟ್ ಭೂಸ್ವಾಧೀನಾಧಿಕಾರಿಯಾಗಿರುವ ಅಸಿಸ್ಟೆಂಟ್ ಕಮಿಷನರ್ ಹಾಗೂ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಯ ಕಾರು ಸೇರಿದಂತೆ ಪೀಠೋಪಕರಣಗಳನ್ನ ಜಪ್ತಿ ಮಾಡಿಕೊಳ್ಳಲು ಆದೇಶಿಸಿದ್ದು, ಅದರಂತೆ ಕೋರ್ಟ್ ಸಿಬ್ಬಂದಿ ಪೀಠೋಪಕರಣಗಳನ್ನ ಕೋರ್ಟ್ ಗೆ ಕೊಂಡೊಯ್ದಿದ್ದಾರೆ.

ಭೂಸ್ವಾಧೀನ ಮಾಡಿಕೊಳ್ಳುವ ವೇಳೆಗೆ ಸುಮಾರು 50 ವರ್ಷದವರಿದ್ದ ಜಾಗದ ಮಾಲಕಿ ಈಗ ಸುಮಾರು 80 ವರ್ಷದ ವೃದ್ಧೆಯಾಗಿದ್ದಾರೆ. ಕೊನೆಗಾಲದಲ್ಲೂ ಪರಿಹಾರ ನೀಡದೆ ಸತಾಯಿಸುತ್ತಿರುವ ಸರ್ಕಾರದ ಕ್ರಮದಿಂದಾಗಿ ಬೇಸರಿಸಿಕೊಂಡಿರುವ ಅವರು, ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಶೀಘ್ರ ಪರಿಹಾರ ಬಿಡುಗಡೆಗಾಗಿ ಕೋರಿದ್ದರು. ಮಾಲಕಿಗೆ ಓಡಡಲಾಗದ ಕಾರಣ ಅವರ ಪುತ್ರ ಪ್ರದೀಪ್ ಸಮ್ಮುಖದಲ್ಲಿ ಅಸಿಸ್ಟೆಂಟ್ ಕಮಿಷನರ್ ಕಚೇರಿಯಲ್ಲಿ ಪೀಠೋಪಕರಣ ಜಪ್ತಿಪಡಿಸಿಕೊಳ್ಳಲಾಗಿದೆ‌. ಜಪ್ತಿ ಮಾಡಿಕೊಂಡು ಅಧಿಕಾರಿಗಳಿಗೆ ತೊಂದರೆ ನೀಡಬೇಕೆಂಬ ಉದ್ದೇಶ ನಮ್ಮದಲ್ಲ. ಆದರೆ ಪರಿಹಾರ ಬಿಡುಗಡೆಗೆ ಅಧಿಕಾರಿಗಳು ಮನಸ್ಸು ಮಾಡಬೇಕು ಎಂದು ಮಾಡಬೇಕು ಎಂದು ಜಾಗದ ಮಾಲಕಿಯ ಪುತ್ರ ಪ್ರದೀಪ್ ದಾಂಡೇಕರ್. ಸೂಕ್ತ ಸಮಯದಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡದೆ ಇದ್ದರಿಂದ ಶೇ.15ರಷ್ಟು ಬಡ್ಡಿಯೂ ಸೇರಿ ಹೆಚ್ಚಿನ ಹಣ ಹಣ ನೀಡಬೇಕಾಗುತ್ತದೆ. ಈ ಬಗ್ಗೆ ಸರಕಾರ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನ ಹರಿಸಿ ಕ್ರಮಕೈಗೊಳ್ಳಬೇಕು ನ್ಯಾಯವಾದಿ ಕೆ.ಆರ್. ದೇಸಾಯಿ ತಿಳಿಸಿದರು.

See also  ಮಾ.15 ರಿಂದ ಶಿರಸಿ ಮಾರಿಕಾಂಬಾ ಜಾತ್ರೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು