News Kannada
Sunday, December 04 2022

ಉತ್ತರಕನ್ನಡ

ಕಾರವಾರ: ದಸರಾ ಉತ್ಸವಕ್ಕೆ ಅದ್ದೂರಿ ತೆರೆ

Photo Credit : By Author

ಕಾರವಾರ: ಕಳೆದ 9 ದಿನಗಳಿಂದ ತಾಲೂಕಿನಾದ್ಯಂತ ವಿಜೃಂಭಣೆಯಿಂದ ನಡೆದ ನವರಾತ್ರಿ ದಾಂಡಿಯಾ ಉತ್ಸವವು ಅದ್ಧೂರಿ ತೆರೆ ಕಂಡಿದೆ.

ಗುಜರಾತಿ ಹಾಗೂ ರಾಜಸ್ಥಾನಿಗಳ ವಿಶೇಷ ಸಂಪ್ರದಾಯವಾದ ದಾಂಡಿಯಾ ಹಾಗೂ ಗರ್ಭಾ ನೃತ್ಯಗಳನ್ನು ಕಳೆದ ಸುಮಾರು 2 ದಶಕದಿಂದ ಕಾರವಾರ ತಾಲೂಕಿನಲ್ಲಿಯೂ ಆಯೋಜಿಸಿಕೊಂಡು ಬರಲಾಗುತ್ತಿದೆ.

ನಗರದ ಬಾಂಡಿಶಿಟ್ಟಾ, ಕಳಸವಾಡಾ, ದೇವಳಿವಾಡಾ, ದೇವತಿಶಿಟ್ಟಾ, ಕೆ.ಎಚ್.ಬಿ. ಕಾಲೋನಿ, ಕುಂಠಿ ಮಹಾಮಾಯಾ ದೇವಸ್ಥಾನ, ತಾಲೂಕಿನ ತೋಡೂರು, ಕೆರವಡಿ, ಕಡವಾಡ ಸೇರಿದಂತೆ ವಿವಿಧೆಡೆ ನವರಾತ್ರಿ ಉತ್ಸವ ಸಮಿತಿಯವರು ಈ ಬಾರಿಯೂ ದಾಂಡಿಯಾ ಕಾರ್ಯಕ್ರವನ್ನು ಆಯೋಜಿಸಿದ್ದರು.

ಕಳೆದ ಎರಡು ವರ್ಷ ಕೋವಿಡ್ ಕಾರಣದಿಂದಾಗಿ ತನ್ನ ಝಲಕ್ ಕಳೆದುಕೊಂಡಿದ್ದ ನವರಾತ್ರಿ ಉತ್ಸವವು ಈ ಬಾರಿ ಯಾವುದೇ ತೊಂದರೆಗಳಿಲ್ಲದೇ ನೆರವೇರಿತು. ಕಳೆದ 9 ದಿನಗಳಿಂದಲೂ ನಗರದಲ್ಲಿ ಸಾವಿವಾರು ಮಂದಿ ನವರಾತ್ರಿ ಉತ್ಸವದಲ್ಲಿ ಪಾಲ್ಗೊಂಡು ದಾಂಡಿಯಾ ನೃತ್ಯಕ್ಕೆ ಹೆಜ್ಜೆ ಹಾಕಿದರು.

ಮಕ್ಕಳು, ಯುವಕ-ಯುವತಿಯರು, ವೃದ್ಧರು ಸೇರಿದಂತೆ ಎಲ್ಲರೂ ಈ ದಾಂಡಿಯಾ ನೃತ್ಯದಲ್ಲಿ ಪಾಲ್ಗೊಂಡು ಸಂಭ್ರಮಿಸಿರುವುದು ವಿಶೇಷವಾಗಿತ್ತು. ಹರ ಹರ ಶಂಭೋ, ಕನಯ್ಯಾ ಮೊದಲಾದ ಭಕ್ತಿ ಗೀತೆಗಳೊಂದಿಗೆ ವಿವಿಧ ಚಲನಚಿತ್ರ ಗೀತೆಗಳ ಸಂಗೀತಕ್ಕೆ ಎಲ್ಲರೂ ಹೆಜ್ಜೆ ಹಾಕಿ ಸಂಭ್ರಮಿಸಿದರು.

See also  ಕೋಲ್ಕತ್ತಾ: ನೇಣು ಬಿಗಿದ ಸ್ಥಿತಿಯಲ್ಲಿ ಮಾಡೆಲ್ ಮೃತದೇಹ ಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು