ಕಾರವಾರ: ವಿಜಯ ದಶಮಿಯ ಪ್ರಯುಕ್ತ ತಾಲೂಕಿನ ಶ್ರೀಕ್ಷೇತ್ರ ಶೇಜವಾಡದಲ್ಲಿ ಶ್ರೀ ಶೆಜ್ಜೇಶ್ವರ ದೇವರ ಪಲ್ಲಕ್ಕಿ ಉತ್ಸವವು ಬುಧವಾರ ವಿಜೃಂಭಣೆಯಿ0ದ ನೆರವೇರಿತು.
ಬುಧವಾರ ಸಂಜೆ 4.30ರ ಸುಮಾರಿಗೆ ಶೆಜ್ಜೇಶ್ವರ ದೇವಸ್ಥಾನದಿಂದ ಮೆರವಣಿಗೆಯ ಮೂಲಕ ಹೊರಟ ಶ್ರೀ ದೇವರ ಪಲ್ಲಕ್ಕಿಯು ಮಖೇರಿಯಲ್ಲಿನ ದಸರಾ ಕಟ್ಟೆಗೆ ತಲುಪಿತು. ಬಳಿಕ ದಸರಾ ಕಟ್ಟೆಯ ಮೇಲೆ ಪಲ್ಲಕ್ಕಿಯನ್ನು ಇರಿಸಿ ಶ್ರೀ ದೇವರಿಗೆ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ಬಳಿಕ ಅಲ್ಲಿಂದ ಮರಳಿ ಹೊರಟ ಪಲ್ಲಕ್ಕಿಯು ಶ್ರೀ ಶೆಜ್ಜೇಶ್ವರ ದೇವಸ್ಥಾನಕ್ಕೆ ಮರಳಿತು. ಈ ಸಂದರ್ಭದಲ್ಲಿ ಅರ್ಚಕರು, ಉಪಾದಿವಂತರು, ದೇವಳಿ ವರ್ಗದವರು, ಉತ್ಸವ ಸಮಿತಿಯವರು ಹಾಗೂ ಊರ ನಾಗರಿಕರು ಸೇರಿ ನೂರಾರು ಮಂದಿ ಪಾಲ್ಗೊಂಡಿದ್ದರು.