News Kannada
Wednesday, December 07 2022

ಉತ್ತರಕನ್ನಡ

ಕಾರವಾರ: ಗಿರಿಜನರ ಸಾಂಸ್ಕೃತಿಕ ಕಲೆ ಸಾಂಸ್ಕೃತಿಯ ಅನಾವರಣಕ್ಕೆ ಗಿರಿಜನ ಉತ್ಸವ ಪೂರಕ –ಆರ್.ವಿ.ಡಿ

Photo Credit : By Author

ಕಾರವಾರ: ಹಳಿಯಾಳ ತಾಲೂಕಿನ ತತ್ವಣಗಿಯಲ್ಲಿ ನಡೆದ ಜಿಲ್ಲಾ ಮಟ್ಟದ ಗಿರಿಜನ ಉತ್ಸವ ಕಾರ್ಯಕ್ರಮವನ್ನು ಹಳಿಯಾಳ ಜೊಯಿಡಾ ಮತಕ್ಷೇತ್ರದ ಶಾಸಕ ಆರ್. ವಿ ದೇಶಪಾಂಡೆ ಉದ್ಘಾಟಿಸಿ ಮಾತನಾಡಿದ ಅವರು ಗಿರಿಜನರ ಸಾಂಸ್ಕೃತಿಕ ಕಲೆಯ ಅನಾವರಣಕ್ಕೆ ಗಿರಿಜನ ಉತ್ಸವ ಪೂರಕವಾಗಿದೆ.

ಈ ವೇದಿಕೆಯು ಗಿರಿಜನರ ಕಲೆ ಸಂಸ್ಕೃತಿಯನ್ನು ಮತ್ತು ಪರಂಪರೆಯನ್ನು ತಿಳಿಸುವ ಹಾಗೂ ಉಳಿಸಿ ಬೆಳೆಸಿಕೊಂಡು ಹೋಗುವಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಹತ್ವದ ಕಾರ್ಯವನ್ನು ಮಾಡಿದೆ ಎಂದರು.

ಬಳಿಕ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ ಗಿರಿಜನರ ಉತ್ಸವವು ನಾಡಿನ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ಉತ್ಸವವಾಗಿದೆ ಎಂದರು. ಸಭಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಗ್ರಾಮದ ದುರ್ಗಾ ದೇವಿ ದೇವಸ್ಥಾನದಿಂದ ಕಲಾ ತಂಡದ ಮೆರವಣಿಗೆ ನಡೆಯಿತು.

ನೂರೈವತ್ತಕ್ಕೂ ಹೆಚ್ಚು ಕಲಾವಿದರು ತಮ್ಮ ಕಲಾ ಪ್ರದರ್ಶನದೊಂದಿಗೆ ಮತ್ತು ಗ್ರಾಮದ ಎಲ್ಲ ಮಹಿಳೆಯರು ಕುಂಬ ಹೊತ್ತುಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡರು. ಕಲಾ ತಂಡಗಳ ಪ್ರದರ್ಶನವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವೇದಿಕೆಗೆ ಆಗಮಿಸಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತತ್ವಣಗಿ ಗ್ರಾಮ ಪಂಚಾಯತದ ಅಧ್ಯಕ್ಷೆ ರಾಜನಬಿ ಅಬ್ದುಲ ಅಜಿಜ್ ಸಾಹೇಬಖಾನ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ನಾಗವ್ವ ಬೆಗೂರ ಸದಸ್ಯ ಲಕ್ಷ್ಮಣ ಮಿರಾಶಿ, ಅಮಿನಾಬಿ ಮುಜಾವರ, ಶಕೀಲ ನಬಿಸಾಬ ಚೌಕಿದಾರ, ಉಮೇಶ ಸುಂಕದ, ಖಿರಪ್ಪ ಅಡಿಕೆಹೊಸೂರ, ಯಲ್ಲವ್ವ ವಡ್ಡರ ಮತ್ತು ಶಿವಾಜಿ ಡಾಂಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದಶಕ ನರೇಂದ್ರ ನಾಯ್ಕ, ಕರ್ನಾಟಕ ಬಯಲಾಟ ಅಕಾಡೆಮಿಯ ಸದಸ್ಯ ಸಿದ್ದಪ್ಪ ಬಿರಾದಾರ ಉಪಸ್ಥಿತರಿದ್ದರು.

See also  ಉತ್ತರ ಕನ್ನಡ: ಜು.13ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು