News Kannada
Wednesday, October 04 2023
ಉತ್ತರಕನ್ನಡ

ಕಾರವಾರ: ಕದಂಬೋತ್ಸವದ ಬಿಲ್ ಪಾವತಿಸಿ ಬಳಿಕ ಉಳಿದ ಉತ್ಸವ ಮಾಡಿ!

KARWAR 2
Photo Credit : By Author

ಕಾರವಾರ: ಮೂರು ವರ್ಷಗಳ ಹಿಂದಿನ ಬನವಾಸಿ ಕದಂಬೋತ್ಸವದಲ್ಲಿ ಶಾಮಿಯಾನ ವ್ಯವಸ್ಥೆ ಮಾಡಿಸಿಕೊಂಡು ಜಿಲ್ಲಾಡಳಿತ ಬಿಲ್ ಪಾವತಿಸದೆ ಸತಾಯಿಸುತ್ತಿದೆ. ಇದೀಗ ಕರಾವಳಿ ಉತ್ಸವ ಮಾಡಲು ಮುಂದಾಗಿದ್ದು, ಮೊದಲು ಕದಂಬೋತ್ಸವದ ಬಿಲ್ ಪಾವತಿಸಿ ಬಳಿಕ ಉಳಿದ ಉತ್ಸವ ಮಾಡಿ. ಇಲ್ಲದಿದ್ದರೆ ಪ್ರತಿಭಟನೆ ಎದುರಿಸಬೇಕಾದೀತು ಎಂದು ಶಾಮಿಯಾನ ಅಸೋಸಿಯೇಶನ್ಸ್ ಹಾಗೂ ಕರುನಾಡ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.

ಕಾರವಾರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರುನಾಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎನ್.ದತ್ತಾ, ಬನವಾಸಿಯ ಕದಂಬೋತ್ಸವದಲ್ಲಿ ಕಾರವಾರ ಶಾಮಿಯಾನ ಸೌಂಡ್ಸ್ ಆ್ಯಂಡ್ ಡೆಕೋರೇಟರ್ಸ್ ಅಸೋಸಿಯೇಶನ್ಸ್ ಅಧ್ಯಕ್ಷ ಪ್ರಶಾಂತ ಸಾವಂತ ಅವರು ಶಾಮಿಯಾನದ ವ್ಯವಸ್ಥೆ ಮಾಡಿದ್ದರು.

ಆ ಕಾರ್ಯಕ್ರಮಕ್ಕೆ ನಂದಕುಮಾರ್ ಎನ್ನುವವರಿಗೆ ಟೆಂಟರ್ ಆಗಿದ್ದರೂ, ಮುಖ್ಯಮಂತ್ರಿಗಳು ಬರುತ್ತಾರೆಂದು ಹೆಚ್ಚಿನ ಶಾಮಿಯಾನದ ವ್ಯವಸ್ಥೆಗೆ ಯಾರೂ ಸಿಗದಿದ್ದಾಗ ಪ್ರಶಾಂತ್ ಅವರಿಗೆ ಆರ್.ಪಿ.ನಾಯ್ಕರವರು ಸೂಚಿಸಿದ್ದರು. ಅದರಂತೆ ವ್ಯವಸ್ಥೆ ಮಾಡಿದ್ದ ಅವರಿಗೆ ಈವರೆಗೆ ಬಿಲ್ ಪಾವತಿಯಾಗಿಲ್ಲ. ಜಿಲ್ಲಾಧಿಕಾರಿಗಳು, ಅಧಿಕಾರಿಗಳು ಬದಲಾಗುತ್ತಿದ್ದು, ಲಕ್ಷಗಟ್ಟಲೆ ಬಿಲ್ ಪಾವತಿ ಮಾಡುವುದು ಯಾರು ಎಂಬ ಪ್ರಶ್ನೆ ಉದ್ಭವವಾಗಿದೆ ಎಂದರು. ಕಾರವಾರದಲ್ಲಿ ಕರಾವಳಿ ಉತ್ಸವ ನಿಗದಿ ಮಾಡಲಾಗಿದೆ.

ಕದಂಬೋತ್ಸವದ ಶಾಮಿಯಾನದ ಹಣ ಅಷ್ಟರೊಳಗೆ ಪಾವತಿ ಮಾಡದಿದ್ದರೆ ಕರಾವಳಿ ಉತ್ಸವದ ಸಮಯದಲ್ಲೇ ವಿನೂತನವಾಗಿ ಹಣವನ್ನ ಬೇಡುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಕಾರವಾರ ಶಾಮಿಯಾನ ಸೌಂಡ್ಸ್ ಆ್ಯಂಡ್ ಡೆಕೋರೇಟರ್ಸ್ ಅಸೋಸಿಯೇಶನ್ಸ್ ಅಧ್ಯಕ್ಷ ಪ್ರಶಾಂತ ಸಾವಂತ ಮಾತನಾಡಿ, ಶಿರಸಿಯ ಕದಂಬೋತ್ಸವಕ್ಕೆ ಬೇರೊಬ್ಬರಿಗೆ ಟೆಂಡರ್ ಆಗಿತ್ತು. ಅವರು ಟೆಂಡರ್‌ನಂತೆ ಶಾಮಿಯಾನದ ವ್ಯವಸ್ಥೆ ಮಾಡಿದ್ದರು. ಆದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬರುತ್ತಾರೆಂದು ಹೆಚ್ಚುವರಿ ಶಾಮಿಯಾನ ಹಾಕಲು ನಗರಸಭೆಯ ಪೌರಾಯುಕ್ತ ಆರ್.ಪಿ.ನಾಯ್ಕ ಅವರಿಗೆ ಅಂದಿನ ಜಿಲ್ಲಾಧಿಕಾರಿ ಹರೀಶಕುಮಾರ್ ಸೂಚಿಸಿದ್ದರು. ಅದರಂತೆ ಆರ್.ಪಿ.ನಾಯ್ಕ ಅವರು ನನಗೆ ತಿಳಿಸಿದ್ದರಿಂದ ಸೋಫಾ, ಜನರೇಟರ್, ಖುರ್ಚಿ ಇನ್ನಿತರ ವ್ಯವಸ್ಥೆಯನ್ನು ಮಾಡಿದ್ದೆ. ಬಿಲ್ ಅನ್ನ ಜಿಲ್ಲಾಧಿಕಾರಿ ಕಚೇರಿಗೆ ನೀಡಲು ಮುಂದಾದಾಗ ಶಾಮಿಯಾನ ಟೆಂಡರ್ ಆಗಿದ್ದ ನಂದಕುಮಾರ್ ಅವರಿಗೆ ಬಿಲ್ ನೀಡಲು ಸೂಚಿಸಿದ್ದರು. ಬಿಲ್ ಎಲ್ಲವನ್ನು ಅವರಿಗೆ ನೀಡಿದ್ದು, ಈವರೆಗೆ ನನಗೆ ಪಾವತಿಯಾಗಬೇಕಿರುವ ಸುಮಾರು 10 ಲಕ್ಷ ರೂ. ಪಾವತಿಯಾಗಿಲ್ಲ ಎಂದು ಅಳಲು ತೋಡಿಕೊಂಡರು.

See also  ನವದೆಹಲಿ: ಇಂದು 15ನೇ ರಾಷ್ಟ್ರಪತಿ ಆಯ್ಕೆಗೆ ಮತದಾನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು